Home News Bike and car accident : ಬೈಕ್‌ ನಡುವೆ ಕಾರು ನಡುವೆ ಮುಖಾಮುಖಿ ಡಿಕ್ಕಿ; ಗುದ್ದಿದ...

Bike and car accident : ಬೈಕ್‌ ನಡುವೆ ಕಾರು ನಡುವೆ ಮುಖಾಮುಖಿ ಡಿಕ್ಕಿ; ಗುದ್ದಿದ ರಭಸಕ್ಕೆ ಕಾರಿನ ಬಾನೆಟ್ ಮೇಲೆ ಹಾರಿ ಬಿದ್ದ ಬೈಕ್ ಸವಾರನ ಭಯಾನಕ ದೃಶ್ಯ ವೈರಲ್

Accident between bike and car

Hindu neighbor gifts plot of land

Hindu neighbour gifts land to Muslim journalist

Accident between bike and car : ಮಂಡ್ಯ: ಜಿಲ್ಲೆಯಲ್ಲಿ ಇಂದು ಭೀಕರ ಅಪಘಾತ ಸಂಭವಿಸಿದೆ. ಮಂಡ್ಯ ಜಿಲ್ಲೆಯ ಎಲೆಯೂರು ಸರ್ಕಲ್ ಕಾಳೆಗೌಡ ಪೆಟ್ರೋಲ್ ಬಂಕ್ ಬಳಿ ಕಾರು ಮತ್ತು ಬೈಕ್‌ (Accident between bike and car) ನಡುವೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಈ ಅಪಘಾತ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಫೆಬ್ರವರಿಯಲ್ಲಿ ನಡೆದಿರುವ ಅಪಘಾತದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. ಇಲ್ಲೊಬ್ಬ ವ್ಯಕ್ತಿ ಸರ್ವಿಸ್​ ರಸ್ತೆಯಲ್ಲಿ ಬರುವಾಗ, ಮುಖ್ಯ ರಸ್ತೆಯಿಂದ ಸರ್ವಿಸ್​ ರಸ್ತೆಗೆ ಬಂದಿಳಿದ ಕಾರಿಗೆ ಬೈಕ್​ ಸವಾರ ಡಿಕ್ಕಿ ಹೊಡೆದಿದ್ದಾನೆ.

ಬೆಂಗಳೂರಿನಿಂದ ಮೈಸೂರು ಕಡೆ ಹೋಗುತ್ತಿದ್ದ ಇನೋವಾ ಕಾರು, ಮುಖ್ಯ ರಸ್ತೆಯಿಂದ ಸರ್ವಿಸ್ ರಸ್ತೆಗೆ ತಿರುಗಿಸುತ್ತಿದ್ದಾಗ ಬೈಕ್ ಸವಾರನು ಡಿಕ್ಕಿ ಹೊಡೆದಿದ್ದು, ಗುದ್ದಿದ ರಭಸಕ್ಕೆ ಸವಾರ ಕಾರಿನ ಬಾನೆಟ್ ಮೇಲೆ ಹಾರಿ
ಬಿದ್ದಿದ್ದಾನೆ. ಈ ಅಪಘಾತದ ದೃಶ್ಯ ಪೆಟ್ರೋಲ್‌ ಬಂಕ್‌ ಕ್ಯಾಮರದಲ್ಲಿ ಸೆರೆಯಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಬೈಕ್ ಸವಾರನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಮಂಡ್ಯ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.ಇತ್ತೀಚಿನ ದಿನಗಳಲ್ಲಿ ವಾಹನಗಳಲ್ಲಿ ಪ್ರಯಾಣಿಸುವಾಗ ಎಷ್ಟು ಹುಷಾರ್‌ ಇದ್ದರು ಸಾಲದು. ಒಮ್ಮೆ ರಸ್ತೆಯಲ್ಲಿ ಹೋಗುವಾಗ ಸ್ವಲ್ಪ ಎಚ್ಚರ ತಪ್ಪಿದ್ರೂ ಸಾಕು ಅನಾಹುತ ಆಗಿಬಿಡುತ್ತದೆ. ಈ ದೃಶ್ಯವೇ ನಮಗೆ ಸಾಕ್ಷಿಯಾಗಿದೆ.

 

ಇದನ್ನುಓದಿ : Saree Walkathon  : ʼಸೀರೆ ವಾಕಥಾನ್ʼ ನಲ್ಲಿ ನೂರಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ ಫೋಟೋ ವೈರಲ್‌ ? ಅದು ಎಲ್ಲಿ ಗೊತ್ತಾ?