Nandini-Amul :ನಂದಿನಿ ಅಮುಲ್ ವಿವಾದದಲ್ಲಿ ಮೂಗು ತೂರಿಸಿದ ನಟ ಚೇತನ್! ಏನಂದ್ರು ಗೊತ್ತಾ?
Nandini-Amul: ನಟ ಚೇತನ್ ಕುಮಾರ್ (Chethan Kumar)ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಒಂದಲ್ಲ ಒಂದು ವಿವಾದತ್ಮಾಕ ಹೇಳಿಕೆಯನ್ನು ನೀಡುತ್ತಾ ಬರುವ ನಟ ಇತ್ತೀಚೆಗಷ್ಟೇ ಪೊಲೀಸ್ ಠಾಣೆ (Police Station)ಮೆಟ್ಟಿಲೇರಿದ ಘಟನೆ ಕೂಡ ನಡೆದಿದೆ. ಕರ್ನಾಟಕ ದೆಲ್ಲೆಡೆ ಚುನಾವಣೆ ಕಾವು ಗರಿಗೆದರಿದ್ದು ಇದರ ನಡುವೆಯೇ ರಾಜ್ಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸೇವ್ ನಂದಿನಿ, ಗೋ ಬ್ಯಾಕ್ ಅಮುಲ್ (Nandini-Amul controversy) ಅಭಿಯಾನ ಜೋರಾಗಿ ಸದ್ದು ಮಾಡುತ್ತಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ( Amith Sha)ಅವರು 2022 ರ ಡಿಸೆಂಬರ್‌ನಲ್ಲಿ ಮಂಡ್ಯಕ್ಕೆ ಭೇಟಿ ನೀಡಿದ ಸಂದರ್ಭ 260 ಕೋಟಿ ರೂಪಾಯಿ ವೆಚ್ಚದಲ್ಲಿ ದಿನಕ್ಕೆ 10 ಲಕ್ಷ ಲೀಟರ್ ಸಂಸ್ಕರಣೆ ಮಾಡುವ ಸಾಮರ್ಥ್ಯದ ಕೆಎಂಎಫ್‌ನ ಮೆಗಾ ಡೈರಿಯನ್ನು ಉದ್ಘಾಟಿಸಿ, ಪ್ರತಿಪಕ್ಷಗಳು ಅವರ ಉದ್ದೇಶಿತ ಹೇಳಿಕೆಗಾಗಿ ನಂದಿನಿ ಮತ್ತು ಅಮುಲ್ ಒಗ್ಗೂಡಬೇಕು ಎಂಬ ವಿಚಾರ ತಿಳಿಸಿದ್ದರು.
ಗುಜರಾತ್( Gujarath) ಮೂಲದ ಅಮುಲ್ ಕರ್ನಾಟಕದ ಮಾರುಕಟ್ಟೆಯಲ್ಲಿ ತನ್ನ ಪಾರುಪತ್ಯ ಕಾಯ್ದುಕೊಳ್ಳಲು ಹವಣಿಸುತ್ತಿದೆ ಎಂಬ ಸುದ್ಧಿ ಕೇಳಿ ಬರುತ್ತಿದ್ದು, ಇದರಿಂದ ರಾಜ್ಯದ ರೈತರಲ್ಲಿ ಆತಂಕ ಎದುರಾಗಿದೆ. ಈ ನಡುವೆ ರಾಜಕೀಯ ಪಕ್ಷಗಳ ನಡುವೆ ಅಮುಲ್, ನಂದಿನಿ(Nandini-Amul) ವಿಚಾರದಲ್ಲಿ ವಾಗ್ಸಮರ ನಡೆಯುತ್ತಿದೆ. ಇದರ ನಡುವೆ ನಟ ಚೇತನ್ ಕುಮಾರ್ ತಮ್ಮ ಟ್ವೀಟರ್ ಖಾತೆಯಲ್ಲಿ ಈ ವಿಚಾರದ ಕುರಿತು ವಿವಾದತ್ಮಾಕ ಹೇಳಿಕೆಯನ್ನು ನೀಡಿ ಕಮಲ ಪಾಳಯದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ನಟ ಚೇತನ್ ಕುಮಾರ್ ಟ್ವೀಟ್‌ನಲ್ಲಿ, “ಕರ್ನಾಟಕ ಹಾಲು ಒಕ್ಕೂಟದ ನಂದಿನಿ ನಮ್ಮ ರಾಜ್ಯದ ಹೆಮ್ಮೆ ಅಮುಲ್-ಗುಜರಾತಿ ಹಾಲು ಸಹಕಾರಿ-ಕೆಎಗೆ ಪ್ರವೇಶಿಸಲು, ನಂದಿನಿಯ ವ್ಯವಹಾರದಲ್ಲಿ ತೊಡಗಿಸಿಕೊಳ್ಳಲು ಮತ್ತು ಖಾಸಗಿ ಕಂಪನಿಗಳಿಗೆ ಸಹಾಯ ಮಾಡಲು ಅವಕಾಶ ಒದಗಿಸುವುದು. ನಮ್ಮ ರಾಜ್ಯದ ಮತ್ತು ರೈತರ ಹಿತಾಸಕ್ತಿಗಳಿಗೆ ವಿರುದ್ಧವಾದ ನಡೆಯಾಗಿದ್ದು, ಹಾಲಿನ ಗೂಡನ್ನು ವಿಲೀನ ಮಾಡಿ ಒಕ್ಕೂಟವನ್ನು ನಾಶಮಾಡಲು ಬಿಜೆಪಿಯ ಈ ರೀತಿಯ ಡಾಂಭಿಕ ನಟನೆಯನ್ನು ನಾವು ವಿರೋಧಿಸುತ್ತೇವೆ” ಎಂದು ವಿಭಿನ್ನ ರೀತಿಯ ಹೇಳಿಕೆಯನ್ನು ನೀಡಿದ್ದಾರೆ.
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಕೂಡ ರಾಜ್ಯ ಸರಕಾರದ ವಿರುದ್ದ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಮುಲ್ ತನ್ನ ಏಕೈಕ ಪ್ರತಿಸ್ಪರ್ಧಿ ನಂದಿನಿಯನ್ನು ಕರ್ನಾಟಕದಲ್ಲಿಯೇ ಮುಗಿಸುವ ಕೆಟ್ಟ ಚಿಂತನೆ ನಡೆಸುತ್ತಿದೆ. ಒಂದು ರಾಷ್ಟ್ರ, ಒಂದು ಅಮುಲ್, ಒಂದು ಹಾಲು ಮತ್ತು ಒಂದು ಗುಜರಾತ್ ಎಂಬುದು ಕೇಂದ್ರ ಸರಕಾರದ ಅಧಿಕೃತ ನೀತಿಯಾಗಿದ್ದು, ಇದರಿಂದಾಗಿ ಅಮುಲ್ ಕೆಎಂಎಫ್ ಆಧಾರವಾಗಿ ನಿಂತು ಉಳಿದವರ ಕತ್ತು ಹಿಸುಕುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪ ಮಾಡಿದ್ದಾರೆ. ಇನ್ನು ಬೆಂಗಳೂರು ಹೋಟೆಲ್ ಮಾಲೀಕರ ಸಂಘ ರೈತರ ಬೆಂಬಲಕ್ಕೆ ನಿಂತಿದ್ದು, ಅಮುಲ್ ಉತ್ಪನ್ನಗಳು ಕರ್ನಾಟಕದ ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದು, ಹೀಗಾಗಿ, ನಂದಿನಿ ಬ್ರ್ಯಾಂಡ್ ಉತ್ಪನ್ನಗಳಿಗೆ ಪರಿಣಾಮ ಬೀರುತ್ತಿದೆ. ಈ ಕುರಿತು ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ನಂದಿನಿ ವಿಚಾರವಾಗಿ ವಾಗ್ದಾಳಿ ಮಾಡುತ್ತಿವೆ.
ಇದನ್ನೂ ಓದಿ: Tanisha Kuppanda : ನಟಿ ತನಿಷಾ ಕುಪ್ಪಂಡ ಆರೋಪಕ್ಕೆ ಉತ್ತರ ಕೊಟ್ಟ ರಾಜಾಹುಲಿ ಹರ್ಷ! ಶಾಕಿಂಗ್ ಮಾಹಿತಿ ಬಹಿರಂಗ!