Aadhar update: ಆಧಾರ್ ನಲ್ಲಿ ಈ ಅಪ್ಡೇಟ್ ಮಾಡಿಸಬೇಕಾ? ಇಲ್ಲಿದೆ ಇದರ ಸಂಪೂರ್ಣ ಮಾಹಿತಿ!

Aadhar update : ನಿಮ್ಮ ಪಾನ್‌ಕಾರ್ಡ್ (pan card) ಗೆ ಆಧಾರ್ ಲಿಂಕ್ (link) ಮಾಡಿದ್ದೀರಾ ? ಲಿಂಕ್ ಮಾಡಿಸುವುದು ಕಡ್ಡಾಯ ವೆಂದು ಸರ್ಕಾರ ಆದೇಶಿಸಿದೆ. ಇಷ್ಟೇ ಅಲ್ಲದೆ ಮುಂಬರುವ ದಿನಗಳಲ್ಲಿ ಆಧಾರ್ ಒಂದೇ ಪರಿಹಾರ ಎಂಬ ಆದೇಶ ಬಂದರೂ ಬರಬಹುದು. ಆದ್ದರಿಂದ ನೀವು ಆಧಾರ್ (adhar card) ಪಡೆದು ಹತ್ತು ವರ್ಷ ಆಗಿದ್ದರೆ ಕೂಡಲೇ ಈ ಕೆಲಸ ಮಾಡಿ.

ನೀವು ಆಧಾರ್ ಪಡೆದು ಹತ್ತು ವರ್ಷ ಆಗಿದ್ದರೆ ತಡ ಮಾಡದೆ ಆಧಾರ್ ಅಪ್ಡೇಟ್ (Aadhar update) ಮಾಡಿಸಬೇಕಾಗುತ್ತದೆ. ಯಾಕೆಂದರೆ ಮುಂದಿನ ದಿನಗಳಲ್ಲಿ ಅಪ್ಡೇಟ್ (upadte) ಕಡ್ಡಾಯವಾಗುವ ಎಲ್ಲಾ ಸಾದ್ಯತೆ ಇದೆ.
ಇತ್ತೀಚೆಗೆ ಪ್ರತಿಯೊಂದಕ್ಕೂ ಆಧಾರ ಕಡ್ಡಾಯವಾಗಿ ಹೋಗಿದೆ. ಆದ್ದರಿಂದ ಎಲ್ಲರೂ ಆಧಾರ್ ಅಪ್ಡೇಟ್ (adhar update) ಮಾಡಿಸುವುದು ಉತ್ತಮ. ಆಧಾರ್ ಯಾಕೆ ಅಪ್ಡೇಟ್ ಮಾಡಿಸಬೇಕು? ಇದರ ಬಗ್ಗೆ ಪೂರ್ತಿ ಮಾಹಿತಿ ಇಲ್ಲಿದೆ ಓದಿ.

ನೀವೇನಾದರೂ ಹತ್ತು ವರ್ಷಗಳ ಹಿಂದೆಯೇ ಆಧಾರ್ ಮಾಡಿಸಿದ್ದರೆ, ಅದನ್ನು ಅಪ್ಡೇಟ್ ಮಾಡಿಸಬೇಕು ಅಂತ ಭಾರತೀಯ ಗುರುತಿನ ಪ್ರಾಧಿಕಾರ ತಿಳಿಸಿದೆ. ಹತ್ತು ವರ್ಷದ ಮೊದಲೇ ಅಪ್ಡೇಟ್ (update) ಮಾಡಿಸುದು ಕಡ್ಡಾಯವಿಲ್ಲ. ಆದರೆ ಮುಂದಿನ ದಿನಗಳಲ್ಲಿ ಇದು ಕಡ್ಡಾಯ ಅದರು ಆಗಬಹುದು. ಹತ್ತು ವರ್ಷದ ಹಿಂದೆ ನೀವು ನೀಡಿರುವ ಮಾಹಿತಿ ವ್ಯತ್ಯಾಸವಿದ್ದರೆ ಅದನ್ನು ಸರಿ ಮಾಡಿಸಿಕೊಳ್ಳವುದು ಅಗತ್ಯವಾಗಿದೆ.

ಭಾರತೀಯ ನಿವಾಸಿಗಳು ಸರ್ಕಾರಿ ಡೇಟಾಬೇಸ್ (database) ನಲ್ಲಿ ತಮ್ಮ ಮಾಹಿತಿಯ ನಿಖರತೆಯನ್ನು ಮುಂದುವರೆಸಲು ಅಪ್ಡೇಟ್ ಮಾಡಿಸಬೇಕು ಎಂದು ಸರ್ಕಾರ ಆದೇಶಿಸಿದೆ. ಈ ಹಿನ್ನಲೆ ಯುಐಡಿಎಐ (UIDAI) ಕೂಡ ಆಧಾರ್ ಅಪ್ಡೇಟ್ ಅವಕಾಶ ನೀಡಿದೆ. ನೀವು ಆಧಾರ್ ಅಪ್ಡೇಟ್ ಮಾಡಿಸುವಾಗ ನಿಮ್ಮ ಸರಿಯಾದ ಮಾಹಿತಿ ನೀಡಬೇಕು, ಮತ್ತು ಅಪ್ಡೇಟ್ ಮಾಡಲು ಯುಐಡಿಎಐ (UIDAI) ನ ವೆಬ್ಸೈಟ್ (website) ನಲ್ಲಿ ನೀಡಿ ಮೈ ಆಧಾರ್ ಪೋರ್ಟಲ್ (my adhar portal) ಗೆ ಭೇಟಿ ನೀಡಿ. ಇದರಲ್ಲಿ ನಿಮ್ಮ ಡಾಕ್ಯುಮೆಂಟ್ ಗಳನ್ನು ಅಪ್ಲೋಡ್ ಮಾಡುವ ಮೂಲಕ ಅಪ್ಡೇಟ್ ಮಾಡಿ.

ನಿಮಗೆ ಅನ್ ಲೈನ್ ನಲ್ಲಿ ಆಧಾರ್ ಅಪ್ಡೇಟ್ ಮಾಡಲು ಸಾಧ್ಯವಾಗದಿದ್ದಲ್ಲಿ ಆಧಾರ್ ಸೇವಾ ಕೇಂದ್ರಕ್ಕೆ ಬೇಟಿ ನೀಡಿ ಅಲ್ಲಿ ನಿಮ್ಮ ಆಧಾರ್ ಅಪ್ಡೇಟ್ ಮಾಡಿಸಿ. ಅಪ್ಡೇಟ್ ಗಾಗಿ ಅಗತ್ಯವಿರುವ ದಾಖಲಾತಿ ಗಳನ್ನು ನೀಡಬೇಕಾಗುತ್ತದೆ. ನಿಮ್ಮ ಆಧಾರ್ ಅನ್ನು ಅನ್ ಲೈನ್ ಪೋರ್ಟ್ ಲ್ ನಲ್ಲಿ ಅಪ್ಡೇಟ್ ಮಾಡಿದರೆ ರೂ 25 ಶುಲ್ಕ ಪಾವತಿಸಬೇಕಾಗುತ್ತದೆ. ಆಫ್ಲೈನ್ ನಲ್ಲಿ ಅಪ್ಡೇಟ್ ಮಾಡಿಸಿದರೆ ರೂ. 50 ಶುಲ್ಕ ಪಾವತಿಸಬೇಕಾಗುತ್ತದೆ.
ಇನ್ನು ನೀವು ಆಧಾರ್ ಪಡೆದು ಹತ್ತು ವರ್ಷ ಆಗಿದ್ದರೆ ಅಪ್ಡೇಟ್ ನಲ್ಲಿ ನಿಮ್ಮ ಹೆಸರು, ವಿಳಾಸ, ಜನ್ಮ ದಿನಾಂಕ, ಲಿಂಗ, ಮೊಬೈಲ್ ಸಂಖ್ಯೆ, ಇಮೇಲ್ ವಿವರಗಳನ್ನು ಅಪ್ಡೇಟ್ ಮಾಡಿಸಬೇಕಾಗುತ್ತದೆ. ಜೊತೆಗೆ ನಿಮ್ಮ ಬೆರಳಚ್ಚುಗಳನ್ನು, ಐರಿಸ್ ಮತ್ತು ಫೋಟೋಗ್ರಾಫ್ ವಿವರಗಳನ್ನು ಕೂಡ ಅಪ್ಡೇಟ್ ಮಾಡಿಸಬೇಕಾಗುತ್ತದೆ.

ಆನ್‌ಲೈನ್‌ನಲ್ಲಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡುವುದು ಹೇಗೆ?
* ಮೊದಲಿಗೆ UIDAI ನ ವೆಬ್‌ಸೈಟ್ uidai.gov.in 3ee3 ಗೆ ಭೇಟಿ ನೀಡಿ
* ನಂತರ ‘ಮೈ ಆಧಾರ್’ ಟ್ಯಾಬ್ ಟ್ಯಾಪ್ ಮಾಡಿ
* ಬಳಿಕ ‘ಅಪ್ಡೇಟ್ ಡೆಮೊಗ್ರಾಫಿಕ್ಸ್ ಡೇಟಾ ಮತ್ತು ಚೆಕ್ ಸ್ಟೇಟಸ್’ ಮೇಲೆ ಕ್ಲಿಕ್ ಮಾಡಿ.
* en myaadhaar.uidai.gov.in/ ಮರುನಿರ್ದೇಶಿಸಲು. ನಿಮ್ಮ ಗುರುತಿನ ದಾಖಲೆಗಳನ್ನು ವೆಬ್‌ಸೈಟ್‌ಗೆ ಲಾಗಿನ್ ಮಾಡಿ.
* ಬಳಿಕ ನಿಮ್ಮ ಆಧಾರ್ ಸಂಖ್ಯೆ, ಕ್ಯಾಪ್ಟಾಕೋಡ್ ಅನ್ನು ನಮೂದಿಸಿ.
* ಈಗ ‘ಸೆಂಡ್ OTP ಮೇಲೆ ಕ್ಲಿಕ್ ಮಾಡಿ.
* ಒಟಿಪಿ ಬಂದ ಬಳಿಕ ವೆಬ್ ಸೈಟ್‌ಗೆ ಲಾಗಿನ್ ಆಗಬೇಕು. ಆಮೇಲೆ ‘ಅಪ್ಡೇಟ್ ಆಧಾರ್ ಆನ್‌ಲೈನ್’ ಕ್ಲಿಕ್ ಮಾಡಿ.
* ನಂತರ ವೆಬ್‌ಸೈಟ್‌ನಲ್ಲಿ ಬರುವ ಸೂಚನೆಗಳನ್ನು ಅನುಸರಿಸುವ ಮೂಲಕ ‘ಪ್ರೊಸಿಡ್’ ಟು ಆಧಾರ್ ಅಪ್ಡೇಟ್ ಮೇಲೆ ‘ ಕ್ಲಿಕ್ ಮಾಡಿ.
* ನೀವು ಅಪ್ಡೇಟ್ ಮಾಡಲು ಇದ್ದರೆ ವಿವರಗಳ ಆಯ್ಕೆ ಕ್ಲಿಕ್ ಮಾಡಿ.
* ನಂತರ ‘ಕಂಟಿನ್ಯೂ ಆಧಾರ್ ಅಪ್ಡೇಟ್ ‘ ಅನ್ನು ಕ್ಲಿಕ್ ಮಾಡಿ ಮತ್ತು ರಿಕ್ವೆಸ್ಟ್ ಸಲ್ಲಿಸಿ.
* ಇದಾದ ನಂತರ ಶುಲ್ಕ ಪಾವತಿ ಮಾಡಿ.
* ಶುಲ್ಕ ಪಾವತಿಸಿದಾಗ ರಶೀದಿಯನ್ನು ಪಡೆಯಿರಿ.
* ನಿಮ್ಮ ಆಧಾರ್ ಅಪ್ಡೇಟ್ ಆಗುತ್ತದೆ.

Leave A Reply

Your email address will not be published.