Cobra having Nagamani Viral News : ನಾಗರ ಹಾವಿನ ತಲೆಮೇಲೆ ನಾಗಮಣಿ?! ಏನಿದರ ಸತ್ಯಾಸತ್ಯತೆ !!

Share the Article

Cobra having Nagamani Viral News : ಹೌದು, ಪುರಾಣಗಳಲ್ಲಿ, ಕಥೆಗಳಲ್ಲಿ , ಹಾಗೂ ಕೆಲವು ಸಿನೆಮಾ (cinema) ಗಳಲ್ಲಿ ಹೇಳುವ ಪ್ರಕಾರ ನಾಗರ ಹಾವಿನ ತಲೆ ಮೇಲೆ ನಾಗಮಣಿ (Cobra having Nagamani Viral News )ಇರುತ್ತದೆ.  ನಾಗಮಣಿ ಮೇಲೆ ಸೀರಿಯಲ್ (serial) ಗಳ ಸರಮಾಲೆಯೇ ಇವೆ. ಆದರೆ ಇದೀಗ ನಿಜವಾದ ನಾಗಮಣಿಯು ನಾಗರ ಹಾವಿನ ತಲೆ ಮೇಲೆ ಕಾಣಿಸಿರುವ ಫೋಟೋ (photo) ಸಾಮಾಜಿಕ ಜಾಲತಾಣದಲ್ಲಿ (social media) ಹರಿದಾಡುತ್ತಿದೆ.

ನಾಗಮಣಿಯ ಫೋಟೋ (photo) ರಾಜಸ್ಥಾನದ ಕೋಟಾ ಮತ್ತು ಮಧ್ಯಪ್ರದೇಶದಲ್ಲಿ ಚರ್ಚೆ ಆಗುತ್ತಿದೆ. ಹಾಗೂ ಹಲವಾರು ನಾಗಮಣಿಯ ಫೋಟೋ (photo) ಗಳು ವೈರಲ್ (viral) ಆಗುತ್ತಿವೆ.

ಈ ನಾಗರ ಹಾವಿನ ದೃಶ್ಯವು ಮಧ್ಯಪ್ರದೇಶದ ಹಳ್ಳಿಯೊಂದರಲ್ಲಿ ಕಾಣಿಸಿಕೊಂಡಿದೆ ಎಂದು ಅಲ್ಲಿನ ಸ್ಥಳೀಯರು ಹೇಳುತ್ತಿದ್ದಾರೆ. ಹಳಿಯಲ್ಲಿ ಶಿವಪುರಾಣ ನಡೆಯುತ್ತಿದ್ದಾಗ ಕಾಡಿನಿಂದ ಹಾವೊಂದು ಹೊರಬಂದಿತ್ತು. ಆ ಹಾವಿನ ತಲೆ ಮೇಲೆ ನಾಗಮಣಿ ಇತ್ತು ಎಂದು ಕೆಲವರು ಚರ್ಚಿಸುತ್ತಿದ್ದಾರೆ.

ಅಲ್ಲಿನ ಸ್ಥಳೀಯರು ತೆಗೆದಿರುವ ಕೆಲವು ಫೋಟೋ (photo) ಗಳಲ್ಲಿ ಹಾವಿನ ತಲೆ ಮೇಲೆ ವಜ್ರ ಆಕಾರದಲ್ಲಿ ಬೆಳಗುತ್ತಿದ್ದದ್ದು ಕಂಡುಬಂದಿದೆ. ಇನ್ನು ಕೆಲವು ಫೋಟೋ (photo) ಗಳಲ್ಲಿ ಮಣಿಯು ನೆಲದ ಮೇಲೆ ಇದ್ದು, ಹಾವು ಅದರ ಪಕ್ಕ ಕುಳಿತಿರುವ ಹಾಗೆ ಕಾಣಿಸಿದೆ.

ಆದರೆ ಫೋಟೋಗಳು (photos) ಯಾವ ಗ್ರಾಮದಿಂದ ಬಂದಿದೆ ಎಂದು ತಿಳಿದಿಲ್ಲ. ಇದು ನಿಜವಾಗಿಯೂ ನಾಗಮಣಿ ಎಂಬುದಕ್ಕೆ ವೈಜ್ಞಾನಿಕ ಪುರಾವೆಗಳಿಲ್ಲ. ಆದರೂ ಕೂಡ ಜನರು ಈ ಫೋಟೋ (photo) ಗಳಿಗೆ ಅಚ್ಚರಿಗೊಂಡಿದ್ದಾರೆ.

ನಾಗಮಣಿ ಬರಿ ಕಾಲ್ಪ ನಿಕ ಎಂದು ವಿಚಾರವಾದಿಗಳು ತಿಳಿಸುತ್ತಾರೆ. ಇದು ನಿಜವಾದ ಫೋಟೋಗಳಲ್ಲ (photos) ಯಾರೋ ಫೋಟೋಗಳನ್ನು (photos) ಮಾರ್ಫಿಂಗ್ ಮಾಡಿ ನಾಗಮಣಿ ಎಂದು ಪ್ರಚಾರ ಮಾಡುತ್ತಿದ್ದಾರೆ. ನಿಜ ಜೀವನದಲ್ಲಿ ಈ ಸಂಗತಿಗಳು ಇರುವುದಿಲ್ಲ ಎಂದು ತಿಳಿಸಿದ್ದಾರೆ.

ಪೌರಾಣಿಕ ಕಥೆಗಳಲ್ಲಿ ಭೂಮಿಯ ಮೇಲಿನ ಜನರು ನಾಗಮಣಿಯನ್ನು ಹೊಂದಿದ್ದರೆ, ಅವರು ಅಲೌಕಿಕ ಶಕ್ತಿಗಳನ್ನು ಪಡೆದುಕೊಳ್ಳುತ್ತಾರೆ. ಹಾಗೂ ಶ್ರೀಮಂತರಾಗುತ್ತಾರೆ ಎಂದು ಹೇಳುತ್ತದೆ. ಇದರ ಮೇಲೆಯೇ ನಾಗಮಣಿಯ ಬಗ್ಗೆ ಸೀರಿಯಲ್ (serial) ಮಾಡುತ್ತಾರೆ, ಆ ಸೀರಿಯಲ್ (serials) ಗಳು ರನ್ (run) ಆಗುತ್ತಿವೆ.

Leave A Reply