Tejasvi Surya: ಎಸ್ಡಿಪಿಐ-ಪಿಎಫ್ಐ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ: ಸಂಸದ ತೇಜಸ್ವಿ ಸೂರ್ಯ ಹೇಳಿಕೆ!

Tejasvi Surya: ಚುನಾವಣೆಗೆ (Election 2023)ಇನ್ನೇನು ಕೆಲವೇ ತಿಂಗಳುಗಳು ಬಾಕಿ ಉಳಿದಿದ್ದು, ಈ ನಡುವೆ ಚುನಾವಣಾ ಸಮರದಲ್ಲಿ ಗೆಲುವಿನ ಕಹಳೆ ಮೊಳಗಿಸಲು ರಾಜಕೀಯ ಪಕ್ಷಗಳು ನಾನಾ ರಣತಂತ್ರ ಹೆಣೆಯುತ್ತಿವೆ. ಈ ನಡುವೆ ಎಸ್ಡಿಪಿಐ-ಪಿಎಫ್ಐ ಒಂದೇ ನಾಣ್ಯದ ಎರಡು ಮುಖಗಳು ಎಂದು ಸಂಸದ ತೇಜಸ್ವಿ ಸೂರ್ಯ (Tejasvi Surya) ಹೇಳಿಕೆ ನೀಡಿದ್ದಾರೆ.

ಬೀದರ್ ಜಿಲ್ಲೆಯ ಎಮ್ ಎಸ್ ಪಾಟೀಲ್ ಕಲ್ಯಾಣ ಮಂಟಪದಲ್ಲಿ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಅವರು ಮಾತನಾಡಿದ್ದು, ಪ್ರಧಾನಿ ನರೇಂದ್ರ ಮೋದಿ (PM Narendra Modi) ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಅವರ ಮುಖ ನೋಡಿ ಜನರು ವೋಟ್ ಹಾಕುತ್ತಾರೆ ಎಂದು ಹೇಳಿದ್ದಾರೆ.
ಎಸ್ಡಿಪಿಐ-ಪಿಎಫ್ಐ (SDPI-PFI) ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಎಸ್ಡಿಪಿಐ ಜೊತೆ ಕಾಂಗ್ರೆಸ್ (Congress) ಕೈ ಜೋಡಿಸಿ ಕಾರ್ಪೊರೇಷನ್ ಚುನಾವಣೆ ಎದುರಿಸಿದೆ.ಎಸ್ಡಿಪಿಐ-ಪಿಎಫ್ಐ, ಕಾಂಗ್ರೆಸ್ ಜೊತೆ ಸೇರಿ ತಮ್ಮ ವೋಟ್ ಬ್ಯಾಂಕ್ (Vote Bank) ಗಟ್ಟಿ ಮಾಡಿಸಿಕೊಳ್ಳುತ್ತಿವೆ. ಪಿಎಫ್ಐ ಕಾರ್ಯಕರ್ತರು ಎಸ್ಡಿಪಿಐ ಜೊತೆಗೆ ಜಂಟಿಯಾಗಿ ಸೇರಿಕೊಳ್ಳುತ್ತಿರುವುದು ಬಹಿರಂಗವಾಗಿದೆ. ಕಾಂಗ್ರೆಸ್ನ ಬಿ ಟಿಮ್ನಂತೆ ಎಸ್ಡಿಪಿಐ-ಪಿಎಫ್ಐ ಕೆಲಸ ಮಾಡುತ್ತಿದ್ದು, ಹೀಗಾಗಿ, ಎಸ್ಡಿಪಿಐ ವಿರುದ್ಧ ಕಾಂಗ್ರೆಸ್ ಚಕಾರ ಎತ್ತುತ್ತಿಲ್ಲ. ಇದಕ್ಕೆ ವೋಟ್ ಬ್ಯಾಂಕ್ ಕಾರಣವೆಂದು ಸಂಸದ ತೇಜಸ್ವಿ ಸೂರ್ಯ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.
ಮೊದಲ ಬಾರಿಗೆ ಓಟು ಹಾಕುವ ಯುವಕರು (Youth)ಪ್ರಧಾನಿ ಮೋದಿ ಪರವಾಗಿದ್ದಾರೆ. ಉಕ್ರೇನ್ ರಷ್ಯಾ ನಡುವೆ ಯುದ್ಧ ನಡೆಯುತ್ತಿರುವ ಹಿನ್ನೆಲೆ ಪೆಟ್ರೋಲ್ ದರ ಏರಿಕೆಯಾಗುವುದು ಸಹಜ. ಬಿಜೆಪಿ (BJP)ಪೂರ್ಣ ಬಹುಮತ ಬಂದರೇ ಉತ್ತಮ ನಿರ್ಣಯ ಕೈಗೊಳ್ಳಲು ಸಾಧ್ಯವಾಗಲಿದೆ. ಚೌಚೌ ಬಾತ್ ಸರ್ಕಾರ ಬಂದರೇ ರಾಜ್ಯದಲ್ಲಿ ಅಭಿವೃದ್ಧಿ ಕಾಣಲು ಸಾಧ್ಯವಿಲ್ಲ. ನೀವು ಹಾಕಿದ ಒಂದು ವೋಟಿನಿಂದ ದೇಶದಲ್ಲಿ ಏರ್ ಪೋರ್ಟ್ಗಳು ಏರಿಕೆಯಾಗಿದ್ದು, ಬ್ರಿಟನ್ ದೇಶವನ್ನು ಹಿಂದಕ್ಕೆ ಹಾಕಿ ಭಾರತ ಈಗ ಮೊದಲ ಸ್ಥಾನ ಪಡೆದಿದೆ ಎಂದು ಇದೇ ವೇಳೆ ತೇಜಸ್ವಿ ಸೂರ್ಯ ಅವರು ಹೇಳಿಕೆ ನೀಡಿದ್ದಾರೆ.
ಇದನ್ನು ಓದಿ : Birth and Death Certificate : ಇನ್ಮುಂದೆ ಮನೆ ಬಾಗಿಲಿಗೇ ರವಾನೆಯಾಗಲಿದೆ ಜನನ-ಮರಣ ಪ್ರಮಾಣ ಪತ್ರ!