Best selfie Camera Mobiles : ಬಜೆಟ್ ಬೆಲೆಯಲ್ಲಿ ಸಿಗುವ ಬೆಸ್ಟ್ ಸೆಲ್ಫಿ ಕ್ಯಾಮರಾದ ಸ್ಮಾರ್ಟ್ ಫೋನ್ ಖರೀದಿಸಬೇಕೇ? ಇಲ್ಲಿದೆ ನೋಡಿ ಬೆಸ್ಟ್‌ ಚಾಯ್ಸಸ್‌!!!

Best Selfie Camera Mobiles : ಇಂದಿನ ಡಿಜಿಟಲ್ ಯುಗದಲ್ಲಿ ಸ್ಮಾರ್ಟ್ಫೋನ್ (Smartphone) ಎಂಬ ಮಾಯಾವಿಯ ಬಳಕೆ ಆರಂಭವಾದ ಬಳಿಕ ಎಲ್ಲರ ಕೈಯಲ್ಲೂ ಹರಿದಾಡಿ ಅರೆ ಕ್ಷಣವು ಬಿಟ್ಟಿರಲಾಗದಷ್ಟು ನಂಟು ಬೆಸೆದುಕೊಂಡು ಬಿಟ್ಟಿದೆ. ಇಷ್ಟೇ ಅಲ್ಲದೆ, ಬದಲಾವಣೆಯ ಗಾಳಿ ಬೀಸಿ, ತಂತ್ರಜ್ಞಾನದಲ್ಲಿ ಹೊಸ ಆವಿಷ್ಕಾರಗಳಾಗಿ ದಿನಂಪ್ರತಿ ನವೀನ ಮಾದರಿಯ ವೈಶಿಷ್ಟ್ಯದ ಮೂಲಕ ಮಾರುಕಟ್ಟೆಗೆ ಲಗ್ಗೆ ಇಡುವ ಸಾಧನಗಳು ಕೂಡ ಕಡಿಮೆಯೇನಿಲ್ಲ!!! ಈ ನಡುವೆ ಬೆಸ್ಟ್ ಸೆಲ್ಫಿ ಕ್ಯಾಮರಾದ(Best Selfie Camera Mobiles )ಬಗ್ಗೆ ಗಮನ ಕೊಡುವವರಿಗೆ ಇಂಟ್ರೆಸ್ಟಿಂಗ್ (Intresting) ಮಾಹಿತಿ ಇಲ್ಲಿದೆ.

ಸೆಲ್ಫಿ ಕ್ಯಾಮೆರಾಗಳು ಉನ್ನತ ಸೆನ್ಸಾರ್ ಹೊಂದಿದ್ದರೆ, ಫೋಟೊಗಳು(Photos) ಅತ್ಯುತ್ತಮವಾಗಿರುತ್ತವೆ. ಸ್ಮಾರ್ಟ್‌ಫೋನ್‌ಗಳು ಅತ್ಯುತ್ತಮ ಕ್ಯಾಮೆರಾ ಆಯ್ಕೆ ಹೊಂದಿದ್ದು, ಅದರಲ್ಲಿಯೂ ಹಿಂಬದಿಯ ಪ್ರಾಥಮಿಕ ಕ್ಯಾಮೆರಾ ಅಧಿಕ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯವಿರುತ್ತದೆ. ಇದಲ್ಲದೆ, ಮುಖ್ಯವಾಗಿ 50 ಮೆಗಾ ಪಿಕ್ಸಲ್‌ ಅಥವಾ 64 ಮೆಗಾ ಪಿಕ್ಸಲ್‌ ಅಥವಾ 108 ಮೆಗಾ ಪಿಕ್ಸಲ್‌ ಇರುತ್ತದೆ. ಈ ನಿಟ್ಟಿನಲ್ಲಿ ಬಜೆಟ್‌ ದರದ ಕೆಲವು ನೂತನ ಫೋನ್‌ಗಳು 13 ಮೆಗಾ ಪಿಕ್ಸಲ್‌ ಹಾಗೂ 16 ಮೆಗಾ ಪಿಕ್ಸಲ್‌ ಆಯ್ಕೆಯನ್ನು ಹೊಂದಿದೆ. ಆದರೂ, ಕನಿಷ್ಠ 16 ಮೆಗಾ ಪಿಕ್ಸಲ್‌ ಅಥವಾ ಅದಕ್ಕೂ ಹೆಚ್ಚಿನ ಸಾಮರ್ಥ್ಯ ಹೊಂದಿರುವ ಫೋನ್‌ಗಳು ಉತ್ತಮ ಎನ್ನಬಹುದಾಗಿದೆ. ಸೆಲ್ಫಿ ಪ್ರಿಯರಿಗಾಗಿ ಮುಂಭಾಗದಲ್ಲಿಯೂ ಅತ್ಯುತ್ತಮ ಕ್ಯಾಮೆರಾ ಸೆನ್ಸಾರ್‌ ಆಯ್ಕೆ ಕೂಡ ಇರುತ್ತದೆ.

ರಿಯಲ್‌ಮಿ 10 ಪ್ರೊ+ 5G ಸ್ಮಾರ್ಟ್‌ಫೋನ್‌ (realme 10 Pro 5G)

ಈ ಮೊಬೈಲ್ 6.7 ಇಂಚಿನ ಕರ್ವ್ಡ್‌ ಅಮೋಲೆಡ್‌ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್‌ ಹೊಂದಿದೆ. ಅದೇ ರೀತಿ, ಮೀಡಿಯಾ ಟೆಕ್ ಡೈಮೆನ್ಸಿಟಿ 1080 5G SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ HM6 ಸೆನ್ಸಾರ್‌ ಅನ್ನು ಒಳಗೊಂಡಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್‌ ಸೆಲ್ಫಿ ಕ್ಯಾಮೆರಾವನ್ನು ಹೊಂದಿದ್ದು, ಈ ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ.

ಪೊಕೊ X5 ಪ್ರೊ 5G ಸ್ಮಾರ್ಟ್‌ಫೋನ್‌ (POCO X5 Pro)

ಪೊಕೊ X5 ಪ್ರೊ 5G ಸ್ಮಾರ್ಟ್‌ಫೋನ್‌ ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್ ISOCELL HM2 ಸೆನ್ಸಾರ್‌ ಅನ್ನು ಒಳಗೊಂಡಿದೆ. ಅದೇ ದಿನ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಕೂಡ ಹೊಂದಿದ್ದು, ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಒಳಗೊಂಡಿದೆ. ಇದಲ್ಲದೆ, ಈ ಫೋನ್ 6.67 ಇಂಚಿನ ಎಕ್ಸ್‌ಫಿನಿಟಿ ಅಮೋಲೆಡ್‌ ಡಿಸ್‌ಪ್ಲೇಯನ್ನು ಒಳಗೊಂಡಿದ್ದು, ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 778G SoC ಪ್ರೊಸೆಸರ್‌ ವೇಗವನ್ನು ಹೊಂದಿದೆ.

ಒನ್‌ಪ್ಲಸ್‌ ನಾರ್ಡ್‌ CE 3 ಲೈಟ್‌ 5G ಸ್ಮಾರ್ಟ್‌ಫೋನ್‌(OnePlus Nord CE 3 Lite 5G) :

ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್‌ HM6 ಸೆನ್ಸಾರ್‌ ಅನ್ನು ಒಳಗೊಂಡಿದೆ. ಅದೇ ರೀತಿ, 16 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇದು ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಈ ಫೋನ್‌ 6.72 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದ್ದು, ಡಿಸ್‌ಪ್ಲೇ 1,080 x 2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಇದಲ್ಲದೇ, ಸ್ನಾಪ್‌ಡ್ರಾಗನ್ 695 SoC ಪ್ರೊಸೆಸರ್‌ ವೇಗವನ್ನು ಹೊಂದಿದೆ.

ವಿವೋ Y100 5G ಸ್ಮಾರ್ಟ್‌ಫೋನ್‌ (vivo Y100):

ಈ ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಒಳಗೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದ್ದು, ಜೊತೆಗೆ 16 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇನ್ನು ಇದು 6.38 ಇಂಚಿನ ಅಮೋಲೆಡ್‌ ಡಿಸ್‌ಪ್ಲೇಯನ್ನು ಒಳಗೊಂಡಿದ್ದು, ಈ ಡಿಸ್‌ಪ್ಲೇ 1080 x 2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 900 SoC ಪ್ರೊಸೆಸರ್‌ ವೇಗವನ್ನು ಹೊಂದಿದ್ದು, 500mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ.

ಒನ್‌ಪ್ಲಸ್‌ ನಾರ್ಡ್‌ CE 2 ಲೈಟ್‌ 5G ಸ್ಮಾರ್ಟ್‌ಫೋನ್‌ (OnePlus Nord CE 2 Lite 5G):

ಈ ಫೋನ್‌ ಸಹ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ ಅನ್ನು ಒಳಗೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸಾರ್‌ ಹೊಂದಿದ್ದು, 16 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸೆಲ್ಫಿ ಕ್ಯಾಮೆರಾ ಕೂಡ ಇದೆ. ಅದೇ ರೀತಿ, 1,080 x 2,412 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.59 ಇಂಚಿನ ಫುಲ್ ಹೆಚ್‌ಡಿ+ ಡಿಸ್‌ಪ್ಲೇಯನ್ನು ಒಳಗೊಂಡಿದ್ದು, ಇದರೊಂದಿಗೆ ಕಾಲ್ಕಮ್ ಸ್ನ್ಯಾಪ್‌ಡ್ರಾಗ್ನ್ 695 SoC ಪ್ರೊಸೆಸರ್‌ ಸಾಮರ್ಥ್ಯ ಒಳಗೊಂಡಿದೆ.

 

ಇದನ್ನು ಓದಿ : WhatsApp and Facebook : ವಾಟ್ಸಪ್, ಫೇಸ್ಬುಕ್ ಬಳಕೆದಾರರಿಗೆ ಗುಡ್ ನ್ಯೂಸ್ : ಇನ್ಮುಂದೆ ಫೇಸ್ಬುಕ್ ಸ್ಟೋರಿಗೂ ಅಟೋ ಅಪ್ಲೋಡ್ ಆಗಲಿದೆ ವಾಟ್ಸಪ್ ಸ್ಟೇಟಸ್ 

Leave A Reply

Your email address will not be published.