Home Breaking Entertainment News Kannada Samantha Ruth Prabhu : ಸ್ಯಾಮ್ ಬಿಕಿನಿ ತ್ಯಜಿಸಿ ಬಿಳಿ ಶುಭ್ರ ಬಟ್ಟೆಯಲ್ಲಿ ಕಾಣಿಸಿಕೊಳ್ಳಲು ಕಾರಣವೇನು...

Samantha Ruth Prabhu : ಸ್ಯಾಮ್ ಬಿಕಿನಿ ತ್ಯಜಿಸಿ ಬಿಳಿ ಶುಭ್ರ ಬಟ್ಟೆಯಲ್ಲಿ ಕಾಣಿಸಿಕೊಳ್ಳಲು ಕಾರಣವೇನು ಗೊತ್ತಾ?

Samantha Ruth Prabhu

Hindu neighbor gifts plot of land

Hindu neighbour gifts land to Muslim journalist

Samantha Ruth Prabhu : ದಕ್ಷಿಣ ಭಾರತದ ಅತಿ ಹೆಚ್ಚು ಅಭಿಮಾನಿಗಳಿಂದ ಸಂಭಾವನೆ ಪಡೆದ ನಟಿಯರಲ್ಲಿ ಸಮಂತ ರುತ್ ಪ್ರಭು (Samantha Ruth Prabhu) ಕೂಡ ಒಬ್ಬರು. ಅಭಿಮಾನಿಗಳ ಮನಸ್ಸನ್ನು ಕದ್ದಂತಹ ಚೋರಿ ಎಂದರು ತಪ್ಪಾಗಲಾರದು. ನಟಿ ಸಮಂತಾ ರುತ್ ಪ್ರಭು ಅವರ ಇನ್ಸ್ಟಾಗ್ರಾಮ್ ಪ್ರೊಫೈಲ್(Instagram profile) ಅನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅವರ ಫ್ಯಾಷನ್ ಡೈರಿಗಳ (fashion diary)ಲೋಕವನ್ನು ನೋಡಲು ಬಹಳ ಕುತೂಹಲವಾಗಿದೆ. ಏಕೆಂದರೆ ಇಷ್ಟರ ತನಕ ಸ್ಯಾಮ್ ಬಿಕಿನಿ ದಿರಿಸಿನಲ್ಲಿನಲ್ಲಿ ತನ್ನ ಅಭಿಮಾನಿಗಳ ಮನಸನ್ನು ಕದ್ದಿರೋದು ಹೊಸತೇನಲ್ಲ. ಬಿಕಿನಿ ಕಟ್ ಶೈಲಿಯಲ್ಲಿ ಕಾಣುವ ಸ್ಯಾಮ್ ನ ನಾಜೂಕಾದ ಸೊಂಟದ ವಿನ್ಯಾಸ ಮತ್ತು ಸ್ಯಾಮ್ ನೀಡುವ ಮಾಸ್(mass) ಲುಕ್ ನಿಂದಲೆ ಅಭಿಮಾನಿಗಳ ಮನಸಲ್ಲಿ ಕೂತುಬಿಟ್ಟಿದ್ದಾರೆ.

ದಕ್ಷಿಣದಲ್ಲಿ ಹೆಚ್ಚು ನಿರೀಕ್ಷಿತ ನಟಿ ಮುಂಬರುವ ಪೌರಾಣಿಕ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ಶಾಕುಂತಲಂ'(shakuntalam) ಚಿತ್ರದ ಬಿಡುಗಡೆಯು ಸದ್ಯದಲ್ಲೇ ಇದ್ದು ಇದೀಗ ಸಮಂತ ಪ್ರಸ್ತುತ ಮುಂಬೈನಲ್ಲಿ ಅದರ ಪ್ರಚಾರಕ್ಕೆ ಇಳಿದಿದ್ದಾರೆ. ‘ಶಾಕುಂತಲಂ’ ಪೌರಾಣಿಕ ಚಲನಚಿತ್ರ ವಾದುದರಿಂದ ನಟಿ ತನ್ನ ಅಭಿಮಾನಿಗಳ ಮುಂದೆ ಯಾವುದೇ ಬಿಕಿನಿ ದಿರಿಸಿನಲ್ಲಿ ಕಾಣಿಸಿಕೊಳ್ಳದೆ ಮತ್ತೊಮ್ಮೆ ನಟಿ ತನ್ನ ಸೊಗಸಾದ ಬಿಳಿ ದಿರಿಸಿನ (dress) ಜೊತೆಗೆ ತನ್ನ ಅಭಿಮಾನಿಗಳ ಮುಂದೆ ಪ್ರತ್ಯಕ್ಷರಾಗಿದ್ದಾರೆ. ಇದರಿಂದ ತನ್ನ ಫ್ಯಾಶನ್ (fashion)ಲೋಕವನ್ನು ಇನ್ನಷ್ಟು ಹೆಚ್ಚಿಸಿದ್ದಾರೆ.

ಸ್ಯಾಮ್ ನ ಅಂದವನ್ನು ಎಷ್ಟು ವರ್ಣಿಸಿದರು ಅದಕ್ಕೆ ಬೆಲೆಕಟ್ಟಲಾಗದು. ಮುಂಬೈನಲ್ಲಿ ನಡೆದ ಪ್ರಚಾರದಲ್ಲಿ ಸ್ಯಾಮ್ ಬಿಳಿ ನವಿಲಿನ (peacock) ಗರಿಗರಿಗಳ ಹಾಗೆ ಅಗಲವಾದ ಬಿಳಿ ಔಪಚಾರಿಕ ಪ್ಯಾಂಟ್ ಮತ್ತು ನಾಜೂಕಾದ ತ್ವಚೆಯನ್ನು ಮುಚ್ಚುವ ರೀತಿ ಪೂರ್ಣ ತೋಳುಗಳ ಬಿಳಿ ಬ್ಲೇಜರ್ ಅನ್ನು ತೊಟ್ಟಿದ್ದಳು. ಹಾಗೆಯೇ ಅವಳು ವಜ್ರದ ನೆಕ್‌ಪೀಸ್ ಅನ್ನು ಅಲಂಕರಿಸಿದಳು ಮತ್ತು ಬ್ಯಾಂಗ್‌ಗಳೊಂದಿಗೆ(bang) ಅವಳ ಕೂದಲನ್ನು ಹೊಸ ರೀತಿಯ ಕೇಶವಿನ್ಯಾಸದಲ್ಲಿ ಧರಿಸಿದ್ದಳು, ಅದು ಅವಳ ಮೇಲೆ ಅಪ್ಸರೆಯಂತೆ ಕಾಣುತ್ತದೆ. ಸ್ಯಾಮ್ ವಿಶಿಷ್ಟ ಶೈಲಿಯಲ್ಲಿ ಕಾಣಿಸಿಕೊಂಡರು ಎಲ್ಲಾ ಚಂದಕ್ಕೂ ಒಗ್ಗಿಕೊಳ್ಳುತ್ತಾರೆ ಎಂದು ಇದರಲ್ಲಿ ತಿಳಿದು ಬರುತ್ತದೆ.

ಶಾಕುಂತಲಂ ಚಿತ್ರದ ಕಾರ್ಯಕ್ರಮದಿಂದ ಹಿಡಿದು ಯಾವುದೇ ಪ್ರಚಾರದಲ್ಲಿ ಸ್ಯಾಮ್ ಬಿಳಿ ಶುಭ್ರ ಬಟ್ಟೆಯನ್ನು ಧರಿಸಿ ಎಲ್ಲಾ ಫೋಟೋಗಳಿಗೂ ಪೋಸ್ ಕೊಡುತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್(viral) ಆಗುತ್ತಿದೆ. ಸ್ಯಾಮ್ ಇದೀಗ ಅಮೂಲ್ ಬೇಬಿಯಂತೆ(Amul baby) ಕಂಗೊಳಿಸುತ್ತಿದ್ದು ಇದನ್ನು ನೋಡಿ ಅಭಿಮಾನಿಗಳು ಇನ್ನಷ್ಟು ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಸಮಂತ ಧರಿಸುವ ಬಿಳಿ ಬಟ್ಟೆಯ ರಹಸ್ಯ ಏನು ಹೇಳುತ್ತಾರೆ ಎಂಬುದರ ಬಗ್ಗೆ ಕಾದು ನೋಡಬೇಕಿದೆ.

 

ಇದನ್ನು ಓದಿ : CBSE Exam : ಸಿಬಿಎಸ್‌ಇ ವಿದ್ಯಾರ್ಥಿಗಳೇ ನಿಮಗೊಂದು ಸಿಹಿ ಸುದ್ದಿ! ಇನ್ನು ಮುಂದೆ ಪರೀಕ್ಷೆ ಅತೀ ಸುಲಭ!