

Fixed Deposit For Senior Citizens : ನಾವು ಹೂಡಿಕೆ ಮಾಡುವುದಾದರೆ ಮೊದಲು ನೋಡುವ ವಿಷಯವೇ ಸುರಕ್ಷಿತ ಮತ್ತು ಯಾವ ಹೂಡಿಕೆಯಿಂದ ಅಧಿಕ ರಿಟರ್ನ್ ಬರುತ್ತದೆ ಎಂದು. ಈ ರೀತಿಯ ಸುರಕ್ಷಿತ ಹೂಡಿಕೆ ವಿಚಾರಕ್ಕೆ ಬಂದರೆ ನಮ್ಮ ಆಯ್ಕೆ ಯಾವಾಗಲೂ ಫಿಕ್ಸೆಡ್ ಡಿಪಾಸಿಟ್ ಆಗಿರುತ್ತದೆ.
ಹೌದು, ಭಾರತದಲ್ಲಿ ಇರುವ ಅಧಿಕ ಸುರಕ್ಷಿತ ಹೂಡಿಕೆಯಲ್ಲಿ ಫಿಕ್ಸೆಡ್ ಡಿಪಾಸಿಟ್ ಕೂಡ ಒಂದಾಗಿದೆ. ಅದರಲ್ಲಿಯೂ ಹಿರಿಯ ನಾಗರಿಕರಿಗೆ ಇದು ಅಧಿಕ ಬಡ್ಡಿದರವನ್ನು ನೀಡುತ್ತದೆ. ಆದ್ದರಿಂದ ಹಿರಿಯ ನಾಗರಿಕರು ಹೆಚ್ಚಾಗಿ ಫಿಕ್ಸೆಡ್ ಡಿಪಾಸಿಟ್ ಅನ್ನು ಆಯ್ಕೆ ಮಾಡುತ್ತಾರೆ.
ಸುರಕ್ಷಿತ ಹೂಡಿಕೆ ಜೊತೆಗೆ ಉತ್ತಮ ರಿಟರ್ನ್ ಅನ್ನು ಪಡೆಯಲು ಸಾಧ್ಯವಾಗುತ್ತದೆ. ಫಿಕ್ಸೆಡ್ ಡಿಪಾಸಿಟ್ ನಿಗದಿತವಾದ ರಿಟರ್ನ್ ಅನ್ನು ನೀಡುತ್ತದೆ. ಭಾರತದ ಹಲವು ಬ್ಯಾಂಕ್ ಗಳು ಹಿರಿಯರಿಗಾಗಿ ಪ್ರತ್ಯೇಕ ಎಫ್ ಡಿ ಯೋಜನೆಗಳನ್ನು ಜಾರಿ ಮಾಡಿತ್ತಿದ್ದು, ಆಕರ್ಷಕ ಬಡ್ಡಿದರದಲ್ಲಿ ಎಫ್ ಡಿ ಯನ್ನು ನೀಡುತ್ತಿದೆ.
ಯುನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್, ಉತ್ಕರ್ಷ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಮತ್ತು ಫಿನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಸಾರ್ವಜನಿಕ ಸ್ವಾಮ್ಯದ ಮತ್ತು ಖಾಸಗಿ ಬ್ಯಾಂಕ್ ಗಳು ಹಿರಿಯರಿಗೆ ಫಿಕ್ಸೆಡ್ ಡಿಪಾಸಿಟ್ ನ( Fixed Deposit For Senior Citizens) ಮೇಲೆ ನೀಡುವ ಬಡ್ಡಿದರಕ್ಕಿಂತ ಹೆಚ್ಚು ಬಡ್ಡಿದರವನ್ನು ನೀಡುತ್ತಿದೆ.
ಆದರೆ ನಾವು ಮೊದಲು ಯಾವ ಬ್ಯಾಂಕ್ ಗಳು ಅಧಿಕ ಬಡ್ಡಿದರ ನೀಡುತ್ತದೆ ಎಂದು ಆಯ್ಕೆ ಮಾಡಬೇಕಾಗುತ್ತದೆ. ಜೊತೆಗೆ ಗ್ರಾಹಕ ಸೇವೆ ಇತರೆ ಅಂಶಗಳ ಬಗ್ಗೆ ಪರಿಶೀಲನೆಯನ್ನು ಮಾಡಬೇಕಾಗುತ್ತದೆ. ಇದರ ಪೂರ್ತಿ ಮಾಹಿತಿ ಇಲ್ಲಿದೆ ನೋಡಿ.
ಹಿರಿಯ ನಾಗರಿಕರಿಗೆ ಎಫ್ ಡಿ ಮೇಲೆ ಬಡ್ಡಿದರ ನೀಡುವ ಉತ್ತಮ ಬ್ಯಾಂಕ್ ಗಳು
ಯುನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್
ಯುನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಗಳು ಹಿರಿಯ ನಾಗರಿಕರಿಗೆ ನಿಗದಿತ ಅವಧಿಯ ಡಿಪಾಸಿಟ್ ಮೇಲೆ ಶೇ 4.50 ರಿಂದ ಶೇ 9.50 ರಷ್ಟು ಬಡ್ಡಿದರವನ್ನು ನೀಡುತ್ತಿದೆ. ಮತ್ತು ಈ ಬ್ಯಾಂಕ್ ನಲ್ಲಿ 1,001 ದಿನಗಳ ಎಫ್ ಡಿ ಮೇಲೆ ಶೇ 9.50 ರಷ್ಟು ಬಡ್ಡಿದರವನ್ನು ನೀಡಲಾಗುತ್ತದೆ. ನೀವೇನಾದರೂ ಅವಧಿಗೂ ಕೂಡ ಎಫ್ ಡಿಯನ್ನು ವಿತ್ ಡ್ರಾ ಮಾಡಲು ಬಯಸಿದರೆ ದಂಡವನ್ನು ವಿಧಿಸಬೇಕಗುತ್ತದೆ. ಈ ಬ್ಯಾಂಕಿನಲ್ಲಿ ಶೇ 1 ರಷ್ಟು ದಂಡವಿದೆ.
ಉತ್ಕರ್ಷ್ ಸ್ಮಾಲ್ ಫೈನಾನ್ಸ್ ಬ್ಯಾಂಕ್
ಉತ್ಕರ್ಷ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಸಾಮಾನ್ಯ ನಾಗರಿಕರಿಗೆ ಶೇ 8.25 ರಷ್ಟು ಬಡ್ಡಿದರವನ್ನು ನೀಡುತ್ತದೆ, ಮತ್ತು ಹಿರಿಯ ನಾಗರಿಕರಿಗೆ ಶೇ 9 ರಷ್ಟು ಎಫ್ ಡಿ ಬಡ್ಡಿದರವನ್ನು ನೀಡಲಾಗುತ್ತದೆ. ಫೆಬ್ರವರಿ 27 ರಂದು 2 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಫಿಕ್ಸೆಡ್ ಡಿಪಾಸಿಟ್ ಮೇಲಿನ ಬಡ್ಡಿದರವನ್ನು ಏರಿಕೆ ಮಾಡಿದೆ. ಇದರ ಬಡ್ಡಿದರವು 700 ದಿನಗಳ ಎಫ್ ಡಿ ಮೇಲೆ ಅನ್ವಯವಾಗುತ್ತದೆ.
ಫಿನ್‌ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್
ಫಿನ್ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಸಾಮಾನ್ಯ ನಾಗರಿಕರಿಗೆ 500 ದಿನಗಳ ಎಫ್ ಡಿ ಮೇಲೆ ಗರಿಷ್ಠ ಶೇ 7.75 ರಷ್ಟು ಬಡ್ಡಿದರವನ್ನು ನೀಡುತ್ತದೆ. ಹಿರಿಯ ನಾಗರಿಕರಿಗೆ ಇದೆ ಅವಧಿಯಲ್ಲಿ ಎಫ್ ಡಿ ಮೇಲೆ ಶೇ 5.35 ರಷ್ಟು ಬಡ್ಡಿದರವನ್ನು ನೀಡುತ್ತದೆ. ಈ ಬ್ಯಾಂಕ್ ಮಾರ್ಚ್ 24 ರಂದು 2 ಕೋಟಿ ರೂಪಾಯಿಗಿಂತ ಕಡಿಮೆ ಬೆಲೆಯ ಫಿಕ್ಸೆಡ್ ಡಿಪಾಸಿಟ್ ಮೇಲಿನ ಬಡ್ಡಿದರವನ್ನು ಹೆಚ್ಚಿಸಿದೆ. ಇನ್ನು 1000 ದಿನಗಳ ಎಫ್ ಡಿ ಮೇಲೆ ಸಾಮಾನ್ಯ ನಾಗರಿಕರಿಗೆ ಶೇ 8.41 ರಷ್ಟು ಬಡ್ಡಿದರವನ್ನು ನೀಡಿದೆ, ಮತ್ತು ಹಿರಿಯ ನಾಗರಿಕರಿಗೆ ಶೇ 9.01ರಷ್ಟು ಬಡ್ಡಿದರವನ್ನು ನೀಡಿದೆ.













