Renault KWID 800cc car Discontinue : ತೆರೆಮರೆಗೆ ಸರಿದ ಪ್ರಸಿದ್ದ ರೆನಾಲ್ಟ್ ಕ್ವಿಡ್ 800ಸಿಸಿ ಕಾರು

Renault KWID 800cc car Discontinue : ಭಾರತದ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳು (EV) ದಿನದಿಂದ ದಿನಕ್ಕೆ ಭಾರೀ ಪ್ರಮಾಣದಲ್ಲಿ ಜನಪ್ರಿಯತೆಯನ್ನು ಪಡೆಯುತ್ತಿದೆ. ದೇಶದ ಪ್ರಮುಖ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ಸ್ಕೂಟರ್(Electric Scooters) ಬೈಕ್, ಕಾರುಗಳನ್ನು ಮಾರುಕಟ್ಟೆಯಲ್ಲಿ ಪರಿಚಯಿಸುತ್ತಿದ್ದು, ಜನರ ನಿರೀಕ್ಷೆಗೆ ತಕ್ಕಂತೆ ವಿಭಿನ್ನ ವಿಶೇಷತೆಯ ಮೂಲಕ ವಾಹನಗಳು (Vechicles)ಮಾರುಕಟ್ಟೆಯಲ್ಲಿ ಲಗ್ಗೆ ಇಡುತ್ತಿವೆ.

ಫ್ರೆಂಚ್ ವಾಹನ ತಯಾರಕ ಕಂಪನಿ ‘ರೆನಾಲ್ಟ್’ (Renault KWID)ಭಾರತದಲ್ಲಿ ಕಡಿಮೆ ಬೆಲೆಯ ಕ್ವಿಡ್ 800ಸಿಸಿ(Renault KWID Neotech (800cc)) ಹ್ಯಾಚ್‌ಬ್ಯಾಕ್ ಮಾರಾಟ ಮಾಡುವ ಮೂಲಕ ತನ್ನದೇ ಆದ ಛಾಪು ಮೂಡಿಸಿದೆ. ಇದೀಗ ಈ ಕಾರಿನ ಮಾರಾಟ ಸ್ಥಗಿತಗೊಂಡಿದ್ದು, ಇನ್ಮುಂದೆ ಈ ಹ್ಯಾಚ್‌ಬ್ಯಾಕ್, 1.0 ಲೀಟರ್ ಪೆಟ್ರೋಲ್ ಎಂಜಿನ್ ರೂಪದಲ್ಲಿ ಮಾತ್ರ ದೊರೆಯಲಿದೆ.

ರೆನಾಲ್ಟ್ ಕ್ವಿಡ್ 800ಸಿಸಿ ಕಾರು ಮಾರಾಟದಿಂದ ಸ್ಥಗಿತಗೊಂಡಿದ್ದು(Renault KWID 800cc car Discontinue), ಇದರ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಗಮನಿಸಿದರೆ, ಇದು 52 bhp ಗರಿಷ್ಠ ಪವರ್ ಹಾಗೂ 72 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಒಳಗೊಂಡಿತ್ತು. ಇದರ ಜೊತೆಗೆ 5 ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆ ಕೂಡ ಲಭ್ಯವಿತ್ತು. ಇನ್ಮುಂದೆ 1.0-ಲೀಟರ್ ಪೆಟ್ರೋಲ್ ಎಂಜಿನ್ ಪಡೆದಿರುವ ಕ್ವಿಡ್, ಕಂಪನಿಯ ಅಧಿಕೃತ ಎಂಟ್ರಿ ಲೆವೆಲ್ ಕಾರಾಗಿ ಗುರುತಿಸಿಕೊಂಡಿದೆ.

ರೆನಾಲ್ಟ್ ಇಂಡಿಯಾ, ತನ್ನ ಅಧಿಕೃತ ವೆಬ್‌ಸೈಟ್‌ನಿಂದ ಕ್ವಿಡ್ 800ಸಿಸಿ ಆವೃತ್ತಿಯನ್ನು ತೆಗೆದಿದ್ದು, ಈ ಹ್ಯಾಚ್‌ಬ್ಯಾಕ್, 0.8-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ RXL ಹಾಗೂ RXL (O) ಎಂಬ ಎರಡು ರೂಪಾಂತರಗಲ್ಲಿ ಖರೀದಿಗೆ ದೊರೆಯುತ್ತಿತ್ತು. ಈಗ ವೆಚ್ಚವನ್ನು ಸರಿದೂಗಿಸುವ ಹಾಗೂ ಜನಪ್ರಿಯತೆ ಕುಂಟುತ್ತಿರುವುದರಿಂದ, ಇದರ ಎಂಜಿನ್ ಅನ್ನು ದೇಶಾದ್ಯಂತ ಏಪ್ರಿಲ್ 1ರಿಂದ ಜಾರಿಯಾದ BS6 ಹಂತ 2 ಎಮಿಷನ್ ಮಾನದಂಡಗಳಿಗೆ ಅನುಗುಣವಾಗಿ ಅಭಿವೃದ್ದಿ ಮಾಡಿಲ್ಲ ಎನ್ನಲಾಗಿದೆ.

ಸದ್ಯ ಲಭ್ಯವಿರುವ ಮಾಹಿತಿ ಅನುಸಾರ, ರೆನಾಲ್ಟ್ ಕಂಪನಿ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಮೇಡ್ ಇನ್ ಇಂಡಿಯಾ(Made In India) ‘ಕ್ವಿಡ್’ ಎಲೆಕ್ಟ್ರಿಕ್ ಕಾರನ್ನು ಅಭಿವೃದ್ಧಿ ಕಾರ್ಯದಲ್ಲಿ ನಿರತವಾಗಿದ್ದು, ಅದರ ತಯಾರಿಕೆಗೆ ಸ್ಥಳೀಯ ಕಚ್ಚಾ ವಸ್ತುಗಳನ್ನು ಉಪಯೋಗಿಸಲು ನಿರ್ಣಯ ಕೈಗೊಂಡಿದೆ. ಹೊಚ್ಚ ಹೊಸ ಕ್ವಿಡ್’ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ 2024ರಲ್ಲಿ ಭಾರತದ ಗ್ರಾಹಕರಿಗೆ ಖರೀದಿಗೆ ಲಭ್ಯವಾಗಲಿದ್ದು, ಟಾಟಾ ಟಿಯಾಗೊ ಇವಿ(TATA Tiago EV), ಸಿಟ್ರಸ್ ಇಸಿ3 ಹಾಗೂ ಮುಂಬರಲಿರುವ ಎಂಜಿ ಕಾಮೆಟ್ ಇವಿಗೆ ಪೈಪೋಟಿ ನೀಡುವ ಲಕ್ಷಣಗಳು ದಟ್ಟವಾಗಿದೆ.

ರೆನಾಲ್ಟ್’ನ ಎಂಟ್ರಿ ಲೆವೆಲ್ ಕಾರಾಗಿರುವ ಕ್ವಿಡ್ 800ಸಿಸಿ ಭಾರತದಲ್ಲಿ ಮಾರಾಟದಿಂದ ಸ್ಥಗಿತವಾಗಿದ್ದರೂ ಕೂಡ 1.0 ಲೀಟರ್ ಪೆಟ್ರೋಲ್ ಎಂಜಿನ್ ರೂಪದಲ್ಲಿ ಲಭ್ಯವಾಗಲಿದೆ. ಇದರ ಜೊತೆಗೆ ಕಂಪನಿಯು ಮುಂದಿನ ವರ್ಷದಲ್ಲಿ ಎಲೆಕ್ಟ್ರಿಕ್ ಕ್ವಿಡ್ ಹ್ಯಾಚ್‌ಬ್ಯಾಕ್ ಬಿಡುಗಡೆ ಮಾಡಲು ಅಣಿಯಾಗುತ್ತಿದ್ದು, , ಇದು ಕೂಡ ಅಗ್ಗದ ಬೆಲೆಯಲ್ಲಿ ಖರೀದಿಗೆ ದೊರೆಯಲಿದೆ. ಭಾರತದ ಮಾರುಕಟ್ಟೆಯಲ್ಲಿ ಪ್ರಸ್ತುತ ಖರೀದಿಗೆ ಲಭ್ಯವಿರುವ 1.0 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರುವ ರೆನಾಲ್ಟ್ ಕ್ವಿಡ್ ಕಾರಿನ ಬಗ್ಗೆ ಗಮನಿಸಿದರೆ, ಇದು 68 PS ಗರಿಷ್ಠ ಪವರ್ ಹಾಗೂ 91 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಒಳಗೊಂಡಿದ್ದು, 5 ಸ್ವೀಡ್ ಮ್ಯಾನುವಲ್ ಟ್ರಾಸ್ಮಿಷನ್ ಅಥವಾ 5 ಸ್ವೀಡ್ AMT ಗೇರ್ ಬಾಕ್ಸ್ ಆಯ್ಕೆಯಲ್ಲಿ ಲಭ್ಯವಾಗಲಿದೆ.

ರೆನಾಲ್ಟ್ ಕ್ವಿಡ್ 21.46 – 22.3 kmpl ಮೈಲೇಜ್ ನೀಡಲಿದ್ದು, ಅನೇಕ ನವೀನ ವೈಶಿಷ್ಟ್ಯಗಳನ್ನು ಒಳಗೊಂಡಿದ್ದು, 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಒಳಗೊಂಡಿದ್ದು, ಸುರಕ್ಷತೆಯ ದೃಷ್ಟಿಯಿಂದ ಡುಯಲ್ ಫ್ರಂಟ್ ಏರ್ ಬಾಗ್ಸ್, ABS ( Anti-lock Braking System) ಅನ್ನು ಒಳಗೊಂಡಿದೆ.ಈ ರೆನಾಲ್ಟ್ ಕ್ವಿಡ್ ಹ್ಯಾಚ್‌ಬ್ಯಾಕ್, ರೂ.4.70 ಲಕ್ಷದಿಂದ ರೂ.6.33 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ.

2030ರ ವೇಳೆಗೆ ಕೇಂದ್ರ ಸರ್ಕಾರ ದೇಶಾದ್ಯಂತ ರಸ್ತೆಗಳಲ್ಲಿ ಶೇಕಡ 30% ಎಲೆಕ್ಟ್ರಿಕ್ ವಾಹನಗಳ (Electric Vechicle)ಬಳಕೆಗೆ ಉತ್ತೇಜನ ನೀಡುತ್ತಿದೆ. ಹೀಗಾಗಿ, ಬೆಳವಣಿಗೆಯ ಅನುಸಾರ, ಇವಿ ಮಾರುಕಟ್ಟೆ ಮೇಲೆ ಗಮನ ಹರಿಸಿರುವ ರೆನಾಲ್ಟ್ ಈಗಿನಿಂದಲೇ ಸಿದ್ಧತೆ ಆರಂಭಿಸಿದ್ದು, ರಾಯಿಟರ್ಸ್ ವರದಿಯ ಅನುಸಾರ, ಪಾಲುದಾರ ಕಂಪನಿಯಾಗಿರುವ ನಿಸ್ಸಾನ್ ಮೋಟಾರ್‌ನೊಂದಿಗೆ ಸೇರಿಕೊಂಡು ಭಾರತದಲ್ಲಿ ಎಲೆಕ್ಟ್ರಿಕ್ ಉತ್ಪಾದನಾ ಘಟಕ ಸ್ಥಾಪಿಸಲು ದೊಡ್ಡ ಮಟ್ಟದಲ್ಲಿ ಹೂಡಿಕೆ(Investment) ಮಾಡಲು ನಿರ್ಣಯ ಕೈಗೊಂಡಿದೆ ಎನ್ನಲಾಗಿದೆ.

ಇದನ್ನೂ ಓದಿ: KOS Exam 2023 : ಕರ್ನಾಟಕ ಮುಕ್ತಶಾಲೆಯ ಪರೀಕ್ಷಾ ವೇಳಾಪಟ್ಟಿ ಪ್ರಕಟ!

Leave A Reply

Your email address will not be published.