Actress Parineeti Chopra Marriage : ವದಂತಿಗಳಿಗೆ ತೆರೆ ಎಳೆದ ಚೋಪ್ರಾ; AAP ಸಂಸದ ರಾಘವ್ ಚಡ್ಡಾ ಜೊತೆ ನಿಶ್ಚಿತಾರ್ಥಕ್ಕೆ ದಿನಾಂಕ ನಿಗದಿ!

Share the Article

Actress Parineeti Chopra :ಆಮ್ ಆದ್ಮಿ ಪಾರ್ಟಿಯ ಸಂಸದ ರಾಘವ್ ಚಡ್ಡಾ ಅವರು ಬಾಲಿವುಡ್ ನಟಿ ಪರಿಣಿತಿ ಚೋಪ್ರಾ (Actress Parineeti Chopra)ಜೊತೆ ಡೇಟಿಂಗ್ ನಲ್ಲಿ ಇದ್ದಾರೆ ಎಂದು ಹಲವಾರು ವದಂತಿ ಹರಡಿತ್ತು. ಆದರೆ ಈ ಯಾವ ವದಂತಿಗೂ ಜೋಡಿಗಳು ತಲೆ ಕೆಡಿಸಿಕೊಂಡಿರಲ್ಲಿಲ್ಲ. ಸದ್ಯ ಇದೀಗ ಈ ಎಲ್ಲಾ ಪುಕಾರಕ್ಕೆ ಬ್ರೇಕ್ ಎಳೆದು, ಸಿಹಿ ಸುದ್ದಿ ನೀಡಿದ್ದಾರೆ ಚೋಪ್ರ.

ನಟಿ ಪರಿಣಿತಿ ಮತ್ತು ಸಂಸದ ರಾಘವ್ ಇಬ್ಬರು ಕೆಲ ದಿನಗಳ ಹಿಂದೆ ಮುಂಬೈನ ವಿಮಾನ ನಿಲ್ದಾಣದಲ್ಲಿ  ಕಾಣಿಸಿಕೊಂಡಿದ್ದರು. ಇದಲ್ಲದೆ ಈ ಜೋಡಿ ಕೂಡ ಹಲವೆಡೆ ಸುತ್ತಾಡಿ ಕ್ಯಾಮೆರಾ ಕಣ್ಣಿಗೂ ಬಿದ್ದಿದ್ದರು,  ಸಾಮಾಜಿಕ ಜಾಲತಾಣದಲ್ಲಿ ಇವರಿಬ್ಬರ ವೀಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಈ ವೀಡಿಯೋ ಹಲವಾರು ಅನುಮಾನಕ್ಕೂ ದಾರಿ ಮಾಡಿಕೊಟ್ಟಿತ್ತು.

ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಇಬ್ಬರು ಎಷ್ಟೇ ಗಾಸಿಪ್ ಗೆ ಒಳಗಾಗಿದ್ದರು ತಮ್ಮ ಸಂಬಂಧದ  ಬಗ್ಗೆ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಆದರೆ ಪಂಜಾಬಿ ಗಾಯಕ, ನಟ ಹಾರ್ಡಿ ಸಂಧು ಮತ್ತು AAP ಸಂಸದ ಸಂಜೀವ್ ಅರೋರಾ ಇಬ್ಬರು ಚೋಪ್ರ ಜೋಡಿ ಗೆ  ಟ್ವಿಟ್ ಮಾಡುವ ಮೂಲಕ ಶುಭಾಶಯ ಕೋರಿದರು. ಇದೀಗ ಈ ಜೋಡಿಯು ಪರಸ್ಪರ ಉಂಗುರ ಬದಲಿಸಿಕೊಂಡು, ನಿಶ್ಚಿತಾರ್ಥ ಮಾಡಿಕೊಳ್ಳಲು ರೆಡಿ ಆಗಿದ್ದಾರೆ.

ಚೋಪ್ರ ಅವರು ಇದೇ ಏಪ್ರಿಲ್ 10 ರಂದು ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾರೆ ಎಂದು ಕೆಲ ಮಾಧ್ಯಮಗಳು ವರದಿ ನೀಡಿದೆ.  ಜೋಡಿಯ ಎರಡು ಕುಟುಂಬವು ದೆಹಲಿಯಲ್ಲಿ ನಿಶ್ಚಿತಾರ್ಥ ನಡೆಸಲಿದ್ದು ನಿಶ್ಚಿತಾರ್ಥ ಕ್ಕೆ ಕುಟುಂಬಸ್ಥರು ಹಾಗೂ ಆಪ್ತರನ್ನು ಮಾತ್ರ ಆಮಂತ್ರಿಸಲಿದ್ದಾರೆ.

Leave A Reply