Home Breaking Entertainment News Kannada Actress Prema : ಮತದಾನದ ಮುಂಚಿತವಾಗಿಯೇ ‘ಕೌರವ’ ಗೆಲ್ಲುತ್ತಾರೆ ಎಂಬ ಭವಿಷ್ಯ ನುಡಿದ ಕೌರವನ ರಾಣಿ!

Actress Prema : ಮತದಾನದ ಮುಂಚಿತವಾಗಿಯೇ ‘ಕೌರವ’ ಗೆಲ್ಲುತ್ತಾರೆ ಎಂಬ ಭವಿಷ್ಯ ನುಡಿದ ಕೌರವನ ರಾಣಿ!

Actress Prema

Hindu neighbor gifts plot of land

Hindu neighbour gifts land to Muslim journalist

Actress Prema :ಈ ವರ್ಷ ನಡೆಯುವ ಚುನಾವಣೆಯಲ್ಲಿ ಮತದಾನ ನಡೆಯುವ ಮುಂಚೆಯೇ ಕೌರವ ಸಿನಿಮಾದ ನಟ ಬಿ.ಸಿ ಪಾಟೀಲ್ ಗೆಲ್ತಾರೆ ಎಂದು ನಟಿ ಪ್ರೇಮ (Actress Prema)ಹೇಳಿದ್ದಾರೆ.

ಮಹಿಳಾ ದಿನಾಚರಣೆಯ ಪ್ರಯುಕ್ತ ಬಿ.ಸಿ ಪಾಟೀಲ್ ಅವರ ಆಹ್ವಾನದ ಮೇರೆಗೆ ಹಾವೇರಿ ಜಿಲ್ಲೆಯ(Haveri district) ಹಿರೇಕೆರೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನಟಿ ಪ್ರೇಮಾ ಪಾಲ್ಗೊಳ್ಳುವ ಸಲುವಾಗಿ ಇಂದು ಹಾವೇರಿ ಜಿಲ್ಲೆಯ ಹೀರೆಕೆರೂರಿನ ನಗರಕ್ಕೆ ಭೇಟಿ ಕೊಟ್ಟಿದ್ದಾರೆ. ಈ ಸಮಯದಲ್ಲಿ ಮಾಧ್ಯಮದ ಜೊತೆಗೆ ತನ್ನ ಮಾತುಕತೆಯನ್ನು ಹಂಚಿಕೊಂಡು. ಈ ಸಲದ ಚುನಾವಣೆಯಲ್ಲಿ ಕೃಷಿ ಸಚಿವ ಬಿ.ಸಿ ಪಾಟೀಲ್‌(BC Patil) ಗೆಲ್ಲುವುದು ಕಡ ಖಂಡಿತಾ ಎನ್ನುವ ಹಾಗೆ ಭವಿಷ್ಯವನ್ನು ನುಡಿದಿದ್ದಾರೆ.

ಹೌದು, ಬಿ.ಸಿ ಪಾಟೀಲ್ ಎಂದ ತಕ್ಷಣ ಎಲ್ಲರಿಗೂ ನೆನಪಾಗುವುದು ಒಬ್ಬ ನಟ ಮತ್ತು ರಾಜಕೀಯ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ ಎನ್ನುವುದು. ಹಾಗಾಗಿ ಈ ಸಲದ ಚುನಾವಣೆಯಲ್ಲಿ(election) ಬಿ.ಸಿ ಪಾಟೀಲ್ ಖಂಡಿತವಾಗಿಯು ಗೆಲ್ಲುತ್ತಾರೆ  ಎಂದು ನಟಿ ಪ್ರೇಮಾ ಗಟ್ಟಿ ಮಾತನ್ನು ಹೇಳಿದ್ದಾರೆ.

ಹೀರೆಕೆರೂರಿನಲ್ಲಿ ನಡೆಯುವ ಈ ಸಮಾರಂಭಕ್ಕೆ(program) ಬಿ.ಸಿ ಪಾಟೀಲರು ನನಗೆ ಕರೆ ಮಾಡಿ ಸ್ವತಹ ಕಾರ್ಯಕ್ರಮಕ್ಕೆ ಬರ ಬರಬೇಕು ಎಂದು ಈ ಕಾರ್ಯಕ್ರಮಕ್ಕೆ‌ ಬರಮಾಡಿಕೊಂಡಿದ್ದಾರೆ. ಅವರು ಕರೆದ ಪ್ರೀತಿಯ ಕರೆಯೋಲೆಯಿಂದ ನಾನು ಇಲ್ಲಿಗೆ ಆಗಮಿಸಿದ್ದೇನೆ. ಪ್ರಚಾರದ(publicity) ಬಗ್ಗೆ ನನಗೇನೂ ಅಷ್ಟು ಗೊತ್ತಿಲ್ಲ ಎಂದು ನಟಿ ತಿಳಿಸಿದ್ದಾರೆ.

ನನ್ನ ತಂದೆಯ ಮರಣವಾದಗ(death) ಬಿ.ಸಿ ಪಾಟೀಲ್​ ಅವರು ಅಂತ್ಯಸಂಸ್ಕಾರದ ವೇಳೆ ಬಂದಿದ್ದರು. ಹೀಗಾಗಿ ಅವರ ಮೇಲಿರುವ ಗೌರವದಿಂದ(reputation) ಅವರು ಕರೆದ ಕರೆಯೋಲೆಗೆ ಓಗೊಟ್ಟು ನನ್ನನ್ನು ಇಲ್ಲಿಗೆ ಬರುವಂತೆ ಮಾಡಿದೆ ಎಂದು ಇದೇ ವೇಳೆ ನಟಿ ಪ್ರೇಮ ತಿಳಿಸಿದರು. ಅಲ್ಲದೇ ಹಾವೇರಿ ಜಿಲ್ಲೆಯ ಹಿರೇಕೆರೂರಿನಲ್ಲಿ ನನಗೆ ಬಹಳಷ್ಟು ಮಹಿಳೆಯರು(ladies) ಅಭಿಮಾನಿಗಳಿದ್ದಾರೆ. ಅವರ ಅಭಿಮಾನಕ್ಕೆ ನಾನು ಯಾವಾಗಲೂ ಚಿರಋಣಿಯಾಗಿರುತ್ತೇನೆ. ಹಾಗೆಯೇ ಈ ಸಲದ ಚುನಾವಣೆಯಲ್ಲಿ ಖಂಡಿತವಾಗಿಯೂ ಬಿ.ಸಿ ಪಾಟೀಲ್(BC Patil) ಅವರಿಗೆ ಈ ಎಲ್ಲಾ ಮತ ಬೀಳುತ್ತದೆ ಎಂಬ ನಂಬಿಕೆ ನನಗಿದೆ. ಹಾಗಾಗಿ ಅವರು ಗೆಲ್ಲುತ್ತಾರೆ ಎಂಬ ವಿಶ್ವಾಸ ಕೂಡ ನನಗಿದೆ ಎಂದು ಮಾತಿನ ಮೂಲಕ ವ್ಯಕ್ತಪಡಿಸಿದ್ದಾರೆ.

ನಮ್ಮ ಮುಖ್ಯಮಂತ್ರಿ ಸಿಎಂ ಬೊಮ್ಮಾಯಿ(CM bommai)ಅವರು ನಟ ಸುದೀಪ್(Sudeep) ಅವರಿಗೆ ಬೆಂಬಲ ನೀಡುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ನಟಿ ಪ್ರೇಮಾ ಆ ವಿಷಯದ ಬಗ್ಗೆ ನನಗೇನೂ ತಿಳಿದಿಲ್ಲ, ರಾಜಕೀಯ ವಿಷಯದ ಬಗ್ಗೆ ನನಗೆ ತಿಳಿದುಕೊಳ್ಳುವ ಕುತೂಹಲ ಅಷ್ಟೇನೂ ಇಷ್ಟ ಇಲ್ಲ.ಇಂದಿನ ಈ ಕಾರ್ಯಕ್ರಮಕ್ಕೆ ಬಿಸಿ ಪಾಟೀಲ್(BC Patil) ರವರು ನನ್ನನ್ನು ಕರೆದಿದ್ದರು ಹಾಗಾಗಿ ಈ ಕಾರ್ಯಕ್ರಮಕ್ಕೆ ಪಾಲ್ಗೊಳ್ಳಲು ಬಂದಿದ್ದೇನೆ ಅಷ್ಟೇ ಎಂದು ಸ್ಪಷ್ಟನೆ ನೀಡಿದರು.

ನಟಿ ಪ್ರೇಮಾ(Prema) ಮತ್ತು ಬಿ.ಸಿ ಪಾಟೀಲ್​​ ಕೌರವ ಸಿನಿಮಾದಲ್ಲಿ(kaurava film) ಸಿನಿ ತೆರೆಯ ಮೂಲಕ ಈ ಜೋಡಿ ಕಾಣಿಸಿಕೊಂಡಿದ್ದರು. ಸಿನಿಮಾ ಹಿಟ್ ಆಗಿ, ಈ ಜೋಡಿ ಸಕ್ಕತ್ತಾಗಿ ಫೇಮಸ್ ಕೂಡಾ ಆಗಿತ್ತು. ಈಗಲೂ ನಟಿ ಪ್ರೇಮಾ ಮತ್ತು ಬಿ.ಸಿ ಪಾಟೀಲ್ ಅವರನ್ನು ನೋಡಿದ ತಕ್ಷಣ ಕೌರವ ಕಪಲ್ ಎಂದೇ ಎಲ್ಲರೂ ಕರೆಯುತ್ತಾರೆ. ಅಷ್ಟರಮಟ್ಟಿಗೆ ಈ ಜೋಡಿ ಫೇಮಸ್​ ಆಗಿದೆ. ಆ ಸಿನಿಮಾದಿಂದಲೇ ಈ ಜೋಡಿಯನ್ನು(couple) ಅವರ ಅಭಿಮಾನಿಗಳು ಗುರುತಿಸುತ್ತಾರೆ. ಇಬ್ಬರೂ ಇದೀಗ ಉತ್ತಮ ಸ್ನೇಹಿತರು.ಬಿ.ಸಿ ಪಾಟೀಲ್‌ ಕರೆದ ಆಹ್ವಾನದ ಮೇರೆಗೆ ನಟಿ ಪ್ರೇಮ ಇವರು ಹಾವೇರಿ ಜಿಲ್ಲೆಗೆ ಆಗಮಿಸಿ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ನಟಿ ಪ್ರೇಮ ಚುನಾವಣೆಯ ಪ್ರಚಾರಕ್ಕೆ(election publicity) ಇಳಿಯುತ್ತಾರ ಎಂಬ ವಿಷಯದ ಬಗ್ಗೆ ಇನ್ನೂ ಕಾದು ನೋಡಬೇಕಾಗಿದೆ.