Home Technology Bank Loan: ಬ್ಯಾಂಕ್ ಸಾಲ ಪಡೆಯುವವರಿಗೆ ಸಿಹಿಸುದ್ದಿ ನೀಡಿದ ಆರ್ ಬಿಐ!!

Bank Loan: ಬ್ಯಾಂಕ್ ಸಾಲ ಪಡೆಯುವವರಿಗೆ ಸಿಹಿಸುದ್ದಿ ನೀಡಿದ ಆರ್ ಬಿಐ!!

Bank Loan

Hindu neighbor gifts plot of land

Hindu neighbour gifts land to Muslim journalist

Bank Loan : ಆರ್ ಬಿಐ (RBI) ರೇಪೋ ದರ ಹೆಚ್ಚಳದ ಬಗ್ಗೆ ಈಗಾಗಲೇ ಸುದ್ದಿ ಹರಿದಾಡಿದ್ದು, ಈ ಮಧ್ಯೆ ಇದೀಗ ಬ್ಯಾಂಕ್ ಸಾಲ (Bank Loan) ಪಡೆಯುವವರಿಗೆ ಆರ್​ಬಿಐ ಸಿಹಿಸುದ್ದಿ ನೀಡಿದೆ. ಹೌದು, ಆರ್‌ಬಿಐ ಹೊಸ ಸೇವೆಗಳನ್ನು ಪರಿಚಯಿಸಿದ್ದು, UPI ತನ್ನ ಸೇವೆಗಳನ್ನು ಮತ್ತಷ್ಟು ವಿಸ್ತರಿಸಿದೆ.

ಈ ಬಗ್ಗೆ ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರು ಘೋಷಣೆ ಮಾಡಿದ್ದು, ಬ್ಯಾಂಕ್ ಪೂರ್ವ ಮಂಜೂರಾದ ಕ್ರೆಡಿಟ್ ಲೈನ್‌ಗಳನ್ನು UPI ಯೊಂದಿಗೆ ಲಿಂಕ್ ಮಾಡಬಹುದು. ಯುಪಿಐ ಸೇವೆಗಳನ್ನು ಮತ್ತಷ್ಟು ವಿಸ್ತರಿಸುವ ಉದ್ದೇಶದಿಂದ ಈ ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಸದ್ಯ ಬ್ಯಾಂಕ್‌ಗಳು (bank) ಠೇವಣಿ ಖಾತೆಗಳು ಮತ್ತು ವ್ಯಾಲೆಟ್‌ಗಳಂತಹ ಪ್ರಿಪೇಯ್ಡ್ ಸಾಧನಗಳಿಗೆ UPI ವಹಿವಾಟುಗಳನ್ನು ನಡೆಸುವ ಸೌಲಭ್ಯವನ್ನು ಹೊಂದಿವೆ. ಆದರೆ ಇನ್ನು ಮುಂದೆ UPI ಸೇವೆಗಳು ಬ್ಯಾಂಕ್‌ಗಳ ಪೂರ್ವ ಮಂಜೂರಾದ ಕ್ರೆಡಿಟ್ ಲೈನ್‌ಗಳಿಗೆ ಕೂಡ ಅಪ್ಲೈ ಆಗುತ್ತದೆ. ಕ್ರೆಡಿಟ್ ಲೈನ್‌ಗಳನ್ನು UPI ಯೊಂದಿಗೆ ಲಿಂಕ್ ಮಾಡಬಹುದಾಗಿದ್ದು, ನೀವು UPI ಮೂಲಕ ಬ್ಯಾಂಕ್ ಸಾಲ ಪಡೆಯಬಹುದಾಗಿದೆ. ಇದರಿಂದಾಗಿ UPI ಮೂಲಕ ವಹಿವಾಟುಗಳನ್ನು ಬೇಗನೆ ಮಾಡಬಹುದು.

ಅಲ್ಲದೆ, ಆರ್ ಬಿಐ ಕ್ಲೈಮ್ ಮಾಡದ ಠೇವಣಿಗಳಿಗಾಗಿ ಹೊಸ ವೆಬ್‌ಸೈಟ್ ಅನ್ನು ಪ್ರಾರಂಭಿಸುವುದಾಗಿ ಪ್ರಕಟಿಸಿದೆ. ಇನ್ನುಮುಂದೆ RBI ಎಲ್ಲಾ ಬ್ಯಾಂಕ್ ಗ್ರಾಹಕರು ಕ್ಲೈಮ್ ಮಾಡದ ಠೇವಣಿಗಳ ವಿವರಗಳನ್ನು ಒಂದೇ ವೆಬ್‌ಸೈಟ್‌ನಲ್ಲಿ ಒಂದೇ ಸ್ಥಳದಲ್ಲಿ ಪಡೆಯುವಂತೆ ಮಾಡಲಿದೆ.

 

ಇದನ್ನು ಓದಿ : Health tips: ಬಿಸಿಲಿನಿಂದ ಕಪ್ಪಾದ ಮುಖಕ್ಕೆ ಮನೆಯಲ್ಲೇ ಮಾಡಿ ಫೇಸ್ ಮಾಸ್ಕ್ !! ವಿಧಾನ ಇಲ್ಲಿದೆ