Women folding clothes : ಮಹಿಳೆಯೋರ್ವಳ ಬಟ್ಟೆ ಮಡಿಸುವ ಟೆಕ್ನಿಕ್ ಗೆ ಆನಂದ್ ಮಹೀಂದ್ರಾ ಫುಲ್ ಖುಷ್!

Share the Article

Women folding clothes  : ಭಾರತದ ಪ್ರಸಿದ್ದ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಬಗ್ಗೆ ನಮೆಗೆಲ್ಲರಿಗೂ ತಿಳಿದಿದೆ. ಇಂತಹ ಸಾಧಕರ ಹೊಗಳಿಕೆಗೆ ಪಾತ್ರರಾಗುವುದು ಅಷ್ಟು ಸುಲಭದ ಮಾತಲ್ಲ. ಸದ್ಯ ಸದಾ ಟ್ವಿಟರ್ ನಲ್ಲಿ ಆನಂದ್ ಮಹೀಂದ್ರಾ ಸಕ್ರಿಯವಾಗಿದ್ದು, ಅವರ ಕಣ್ಣಿಗೆ ಯಾವುದೇ ವಿಶೇಷವಾದದ್ದು ಕಂಡಾಗ ಅದನ್ನು ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳುತ್ತಾರೆ.

ಇದೀಗ ಆನಂದ್ ಮಹೀಂದ್ರಾ (Anand Mahindra) ಅವರು ಬಟ್ಟೆ ಮಡಚುವ ವಿಡಿಯೋ ಹಂಚಿಕೊಂಡಿದ್ದಾರೆ.
ಬಟ್ಟೆ ಮಡಚೋದು ಸುಲಭವಲ್ಲ. ಮನೆ ಕೆಲಸ ಮಾಡುವ ಗೃಹಿಣಿಗೆ ಬಟ್ಟೆಯನ್ನು ವಾಶ್ ಮಾಡೋದು ಮಾತ್ರವಲ್ಲ ಅದನ್ನು ಮುದ್ದೆ ಆಗದಂತೆ ಮಡಚಿ ಇಡುವುದು ಕೂಡ ಒಂದು ಕೆಲಸ ಮತ್ತು ಒಂದು ಕಲೆ . ಅದಲ್ಲದೆ ಅನೇಕ ಕೆಲಸದ ಮಧ್ಯೆ ಈ ಕೆಲಸವನ್ನು ಸುಲಭಗೊಳಿಸಲು ಮಹಿಳೆಯರು ನಾನಾ ತಂತ್ರವನ್ನು ಹುಡುತ್ತಿರುತ್ತಾರೆ.

ಪ್ರಸ್ತುತ ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷರಾಗಿರುವ ಆನಂದ್ ಮಹೀಂದ್ರಾ, ಬಟ್ಟೆ (Women folding clothes )ಮಡಿಸುವ ತಂತ್ರಜ್ಞಾನಕ್ಕೆ ಪ್ರಭಾವಿತರಾಗಿದ್ದಾರೆ. ಕೇವಲ ಮೂರು ಹಂತಗಳಿವೆ ಎಷ್ಟು ನೀಟಾಗಿ ಬಟ್ಟೆ ಮಡಿಸಬಹುದು ಎಂಬುದನ್ನು ತೋರಿಸಲಾಗಿರುವ ವಿಡಿಯೋವನ್ನು ಅವರು ಹಂಚಿಕೊಂಡಿದ್ದಾರೆ. ಬಟ್ಟೆ ಮಡಿಸುವ ಕೆಲಸ ಬೇಗ ಬೇಗ ಆಗಬೇಕು ಎನ್ನುವವರು ಈ ವಿಡಿಯೋ ವೀಕ್ಷಣೆ ಮಾಡಿ ಎಂದಿದ್ದಾರೆ.

ಮಹೀಂದ್ರಾ ಟ್ವಿಟರ್‌ನಲ್ಲಿ ಹಂಚಿಕೊಂಡ ವೈರಲ್ ವೀಡಿಯೊದಲ್ಲಿ ಮಹಿಳೆಯೊಬ್ಬರು ಟಿ- ಶರ್ಟ್ ಅನ್ನು ಮಡಿಸುತ್ತಿರುವುದನ್ನು ಕಾಣಬಹುದು. ಮಹಿಳೆ ಮೊದಲು ಒಂದು ಮೇಜ್ ಮೇಲೆ ಟೀ ಶರ್ಟ್ ಇಡುತ್ತಾಳೆ. ನಂತರ ಟೀ ಶರ್ಟ್ ನ ಒಂದು ಬದಿಯಲ್ಲಿ 1, 2 ಮತ್ತು 3 ಸಂಖ್ಯೆಗಳನ್ನು ಬರೆದ ಸಣ್ಣ ಕಾರ್ಡ್‌ಗಳನ್ನು ಇಡುತ್ತಾಳೆ. ನಂತ್ರ ಆ ಕಾರ್ಡನ್ನು ತೆಗೆದು ಸಂಖ್ಯೆಗೆ ಅನುಗುಣವಾಗಿ ಬಟ್ಟೆಯನ್ನು ತ್ವರಿತವಾಗಿ ಮಡಚುತ್ತಾರೆ. ಒಂದು ಮತ್ತು ಎರಡರ ಸಂಖ್ಯೆ ಬರೆದಿರುವ ಜಾಗವನ್ನು ಒಂದು ರೀತಿ ಮಡಚಿ ನಂತರ ಮೂರನೇ ಸಂಖ್ಯೆಯಿದ್ದ ಬಟ್ಟೆ ಜಾಗವನ್ನು ಇನ್ನೊಂದು ರೀತಿಯಲ್ಲಿ ಮಡಚುತ್ತಾಳೆ.

ಮಹಿಂದ್ರಾ ಪ್ರಕಾರ, ನಾನು ಈ ರೀತಿಯ ಸಣ್ಣ ವಿಷಯಗಳಿಂದ ಆಕರ್ಷಿತನಾಗದೆ ಇರಲಾರೆ. ಇದು ಜಗತ್ತನ್ನು ಬದಲಾಯಿಸದಿರಬಹುದು. ಆದರೆ ತುಂಬಾ ಸೃಜನಶೀಲವಾಗಿದೆ. ದೈನಂದಿನ ಕಾರ್ಯಗಳಲ್ಲಿ ಸಮಯವನ್ನು ಉಳಿಸುವ ಇಂಥ ಕೆಲಸ ಪ್ರಗತಿ ಸಾಧಿಸಲಿದೆ ಎಂದು ಆನಂದ್ ಮಹೀಂದ್ರಾ ಶೀರ್ಷಿಕೆ ಹಾಕಿದ್ದಾರೆ.

ಟ್ವಿಟರ್ ಬಳಕೆದಾರರು ಮಹೀಂದ್ರಾ ಟ್ವಿಟ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಮೆಂಟ್ ಬಾಕ್ಸ್ ನಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದು, ಹಲವಾರು ಜನರ ಮನಸು ಗೆದ್ದ ವಿಡಿಯೋ ಆಗಿದೆ ಎಂದು ಕಮೆಂಟ್ ಮಾಡಿದ್ದಾರೆ.

 

 

https://twitter.com/anandmahindra/status/1643529592408535040?ref_src=twsrc%5Etfw%7Ctwcamp%5Etweetembed%7Ctwterm%5E1643529592408535040%7Ctwgr%5E20145d806cc0d45ac7edaa383db8b1eb4ac63260%7Ctwcon%5Es1_c10&ref_url=https%3A%2F%2Fm.dailyhunt.in%2Fnews%2Findia%2Fkannada%2Fsuvarnanewstv-epaper-dh161e333039824748ba6e915b443e0ba8%2Fviralvideoeemahilebattemadisuvateknikgeaanandhmahindrafida-newsid-n487499736

 

 

ಇದನ್ನು ಓದಿ : A policeman’s love story : ವಿಧವೆ ಪಾಲಿಗೆ ರಾಕ್ಷಸನಾದ ಆರಕ್ಷಕ! ಮದುವೆಯಾಗೋದಾಗಿ ನಂಬಿಸಿ ಮಾಡಿಸಿದ 3 ಬಾರಿ ಗರ್ಭಪಾತ! 

Leave A Reply