A policeman’s love story : ವಿಧವೆ ಪಾಲಿಗೆ ರಾಕ್ಷಸನಾದ ಆರಕ್ಷಕ! ಮದುವೆಯಾಗೋದಾಗಿ ನಂಬಿಸಿ ಮಾಡಿಸಿದ 3 ಬಾರಿ ಗರ್ಭಪಾತ!

A policeman’s love story : ಪೋಲೀಸ್ ಎಂದರೆ ಇಂದಿಗೂ ಎಲ್ಲರೂ ಏನೋ ಭಯ. ಅದು ಪೇದೆ ಆಗಿರಲಿ, ಎಸ್ಐ ಆಗಿರಲಿ, ಎಸ್ಪಿ ಆಗಿರಲಿ. ಒಟ್ನಲ್ಲಿ ಖಾಕಿ ಕಂಡರೆ ಏನೋ ಒಂದು ಅಳುಕ. ಅಂದರೆ ಸಮಾಜ ಎಡರು-ತೊಡರುಗಳನ್ನು ಸರಿಪಡಿಸಿ, ಸದಾ ಶಾಂತಿ ನೆಲೆಸುವಂತೆ ಮಾಡುತ್ತಾರೆ. ಅನ್ಯಾಯ, ಮೋಸ-ವಂಚನೆಗಳು ನಡೆಯದಂತೆ ತಡೆದು ಪ್ರತಿಯೊಬ್ಬರನ್ನೂ ರಕ್ಷಿಸುತ್ತಾರೆ. ಆದರೆ ಈ ಪೋಲೀಸರೆ ತಪ್ಪಿತಸ್ಥರಾದರೆ ಬೇಲಿಯೇ ಎದ್ದು ಹೊಲಮೆಯ್ದಂತಾಗುತ್ತದೆ. ಅಂತೆಯೇ ಇಲ್ಲೊಂದು ಪ್ರೇಮ ಪ್ರಕರಣ ಬೆಳಕಿಗೆ ಬಂದಿದ್ದು, ಪೋಲಿಸಪ್ಪನ (A policeman’s love story ) ಲವ್ವಿ ಡವ್ವಿ ವಿಚಾರ ಕೇಳಿದ್ರೆ ನೀವೇ ಹೌಹಾರುತ್ತೀರ.

ಹೌದು, ಕೊಪ್ಪಳ(Koppal) ಜಿಲ್ಲೆ ಮುನಿರಾಬಾದ್​ IRB ಪೊಲೀಸ್ ಆಗಿರುವ ಯಮನೂರಪ್ಪ, ವಿಧವೆ ಜತೆ ಲವ್ವಿ ಡವ್ವಿ ಆಟ ಆಡಿ ಕೈಕೊಟ್ಟಿರುವ ಆರೋಪ ಬೆಳಕಿಗೆ ಬಂದಿದೆ. ಈ ಐನಾತಿ ಯಮನೂರಪ್ಪ, ಗಂಡನನ್ನು ಕಳೆದುಕೊಂಡು, ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡೋ ಸುಮಾ(ಹೆಸರು ಬದಲಾಯಿಸಿಲಾಗಿದೆ) ಎನ್ನುವ ಮಹಿಳೆಯೊಬ್ಬಳನ್ನು ಮೋಹಿಸಿದ್ದ. ಅಲ್ಲದೇ ಮದ್ವೆಯಾಗುದಾಗಿಯೂ ನಂಬಿಸಿದ್ದ. ಆಕೆಯೊಂದಿಗೆ 5 ವರ್ಷ ಲಿವಿಂಗ್ ಟು ಗೆದರ್ ಸಂಬಂಧ ಇಟ್ಟುಕೊಂಡಿದ್ದ.

ಬಟ್ಟೆ ಅಂಗಡಿಯಿಟ್ಟುಕೊಂಡು ಜೀವನ ನಡೆಸುತ್ತಿದ್ದ ಸುಮಾಳಿಗೆ ಅದಾಗಲೇ 2 ಮದ್ವೆಯಾಗಿತ್ತು. ಮೊದಲ ಪತಿ ತೀರಿಕೊಂಡ್ರೆ, 2ನೇ ಪತಿ ಡೈವೋರ್ಸ್​ ಪಡೆದುಕೊಂಡಿದ್ದ.. ಮಗುವಿನ ಜೊತೆ ಒಂಟಿಯಾಗಿ ಜೀವನ ನಡೆಸುತ್ತಿದ್ದಳು. ಆದ್ರೆ ಈಕೆಗೆ ಬಾಳು ಕೊಡ್ತೀನಿ ಅಂತಾ ಬಂದ ಪೊಲೀಸ್ ಕಾನ್ಸ್‌ಟೇಬಲ್ ಕೂಡ ನಂಬಿಸಿ ಕೈಕೊಟ್ಟಿದ್ದಾನೆ. ದಿಕ್ಕು ತೋಚದ ಮಹಿಳೆಯ ನ್ಯಾಯಕ್ಕಾಗಿ ಅಂಗಲಾಚುತ್ತಿದ್ದಾಳೆ.

ಅಂದಹಾಗೆ ಕೊಪ್ಪಳ ತಾಲೂಕಿನ ಹಿಟ್ನಾಳ್ ಗ್ರಾಮದಲ್ಲಿ ಬಾಡಿಗೆ ಮನೆ ಮಾಡಿದ್ದ ಯಮನೂರಪ್ಪ, ಸುಮಾಳ ಜೊತೆ ಗಂಡನಂತೇ ಜೀವನ ನಡೆಸಿದ್ದಾನೆ. ಇದು ಬಿಡಿ ಸಮಾನ್ಯ ವಿಚಾರ. ಆದರೆ ಈತನ ಕೆಲವು ಕೃತ್ಯಗಳನ್ನು ಕೇಳಿದ್ರೆ ನೀವೇ ಹೌಹಾರುತ್ತೀರ. ಯಾಕೆಂದರೆ ಕಳೆದ ಐದು ವರ್ಷಗಳಿಂದಲೂ ಈಕೆಯೊಂದಿಗಿರುವ ಈ ಪೋಲೀಸಪ್ಪ ಸುಮಾಳನ್ನು ಮೂರು ಭಾರಿ ಗರ್ಭವತಿ ಮಾಡಿದ್ದಾನೆ. ಇಷ್ಟೇ ಅಲ್ಲದೆ ಮದ್ವೆಗೂ ಮುಂಚೆ ಗರ್ಭಿಣಿಯಾದ್ರೆ ಸಮಾಜ ಒಪ್ಪೋದಿಲ್ಲ ಎಂದು ನಾಟಕ ಮಾಡಿ, ಸುಮಾಳಿಗೆ ಸುಳ್ಳು ಹೇಳಿ ಗರ್ಭಪಾತ ಬೇರೆ ಮಾಡಿಸಿದ್ದನಂತೆ. ಆದ್ರೆ, ಮತ್ತೊಮ್ಮೆ ಸುಮಾ ಗರ್ಭಿಣಿ ಯಾಗಿದ್ದಾಳೆ. ಮತ್ತೆ ಯಮನೂರಪ್ಪ ಹಳೇ ಚಾಳಿಯನ್ನೇ ಮುಂದುವರೆಸಿದ್ದಾನೆ. ಇದಕ್ಕೆ ಒಪ್ಪದೆ ಮದ್ವೆಯಾಗುವಂತೆ ಹಠ ಹಿಡಿದಿದ್ದಾಳೆ. ಪೇಚಿಗೆ ಸಿಲುಕಿದ ಯಮನೂರಪ್ಪ ವಿಧವೆಗೆ ಕೈಕೊಟ್ಟು ಎಸ್ಕೇಪ್ ಆಗಿದ್ದಾನೆ.

ಸದ್ಯ ಪೊಲೀಸಪ್ಪನ ಲವ್ವಡವ್ವಿ ಕಹಾನಿ ಎಸ್ಪಿ ಕಚೇರಿಗೂ ತಲುಪಿದೆ. ಎಲ್ಲ ಪಡೆದುಕೊಂಡು ನೀನು ಬೇಡ ಎಂತಿರುವ ಪೊಲೀಸ್‌ನಿಂದ ನ್ಯಾಯ ಕೊಡಿಸಿ ಎಂದು ಸಂತ್ರಸ್ತೆ ಠಾಣೆ ಮೆಟ್ಟಿಲೇರಿದ್ದಾಳೆ. ಅದೇನೆ ಇರಲಿ ಜನರ ಪಾಲಿಗೆ ಆರಕ್ಷರರಾಗಬೇಕಿದ್ದ ಪೊಲೀಸಪ್ಪನೇ ವಿಧವೆ ಪಾಲಿಗೆ ರಾಕ್ಷಸನಾಗಿದ್ದು ನಿಜಕ್ಕೂ ದುರಂತವೇ ಸರಿ.

 

ಇದನ್ನು ಓದಿ : Indian Navy Jobs : SSLC ಪಾಸಾಗಿದ್ದೀರಾ? ನಿಮಗಿದೋ ನೌಕಾಪಡೆಯಲ್ಲಿದೆ ಹಲವು ಹುದ್ದೆ! 

Leave A Reply

Your email address will not be published.