Standup India scheme: ಏಳು ವರ್ಷಗಳನ್ನು ಪೂರೈಸಿದ ಸ್ಟ್ಯಾಂಡ್‌ಅಪ್ ಇಂಡಿಯಾ ಯೋಜನೆ : SC-ST ಮಹಿಳೆಯರಿಗೆ ರೂ.10 ಲಕ್ಷದಿಂದ 1 ಕೋಟಿವರೆಗೆ ಸಾಲ ಸೌಲಭ್ಯ!

Standup India scheme :ಕೇಂದ್ರ ಸರ್ಕಾರವು ದೇಶದ ಜನತೆಗೆ ಸಹಾಯವಾಗುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಜಾರಿಗೆ ತರುತ್ತಲೇ ಬಂದಿದ್ದು, ಆರ್ಥಿಕವಾಗಿ ಹಿಂದುಳಿದವರಿಗೆ ಅನೇಕ ಪ್ರಯೋಜನಗಳನ್ನು ನೀಡಿದೆ. ಇಂತಹ ಹಲವು ಯೋಜನೆಗಳಲ್ಲಿ ಈ ಒಂದು ಯೋಜನೆಯು ಏಳು ವರ್ಷಗಳನ್ನು ಪೂರೈಸಿ ಖಾತೆದಾರರ ಮನವನ್ನು ಗೆದ್ದಿದೆ.

ಹೌದು. ಸ್ಟ್ಯಾಂಡ್‌ಅಪ್ ಇಂಡಿಯಾ (Standup India scheme) ಹೆಸರಿನಲ್ಲಿ ಪ್ರಾರಂಭಿಸಲಾದ ಯೋಜನೆಯು ಏಳು ವರ್ಷಗಳನ್ನು ಪೂರೈಸಿದ ಡೇಟಾವನ್ನ ಬಿಡುಗಡೆ ಮಾಡಿದೆ. ಈ ಯೋಜನೆಯನ್ನು ಕೇಂದ್ರ ಸರ್ಕಾರವು 2016 ರಲ್ಲಿ ಆರಂಭಿಸಿದ್ದು, ತಳಮಟ್ಟದಲ್ಲಿ ಆರ್ಥಿಕ ಸಬಲೀಕರಣ ಮತ್ತು ಉದ್ಯೋಗ ಸೃಷ್ಟಿಯ ಮೇಲೆ ಕೇಂದ್ರೀಕರಿಸುವ ಗುರಿಯೊಂದಿಗೆ ಪ್ರಾರಂಭವಾಯಿತು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಮಹಿಳೆಯರಿಗೆ ಈ ಯೋಜನೆಯಡಿ ಸಾಲ ನೀಡಲಾಗುತ್ತದೆ. ಕೇಂದ್ರ ಸರ್ಕಾರ ಈ ಯೋಜನೆಯನ್ನ 2025 ರವರೆಗೆ ವಿಸ್ತರಿಸಿದೆ. ಈ ಏಳು ವರ್ಷಗಳಲ್ಲಿ 1.8 ಲಕ್ಷ ಸಾಲಗಾರರಿಗೆ 40,000 ಕೋಟಿಗೂ ಹೆಚ್ಚು ಸಾಲ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಅವರಲ್ಲಿ 1,44,787 ಮಹಿಳಾ ಉದ್ಯಮಿಗಳು, 26,889 ಪರಿಶಿಷ್ಟ ಜಾತಿ ಮತ್ತು 8,960 ಪರಿಶಿಷ್ಟ ಪಂಗಡಕ್ಕೆ ಸೇರಿದವರು. ಈ ಯೋಜನೆಯ ಮೂಲಕ ಕಳೆದ ವರ್ಷ ಏಪ್ರಿಲ್’ವರೆಗೆ ಕೇಂದ್ರ ಸರ್ಕಾರದಿಂದ 30,160 ಕೋಟಿ ಸಾಲ ನೀಡಲಾಗಿದೆ.

ಸಾಲಕ್ಕೆ ಅರ್ಜಿ ಸಲ್ಲಿಸುವ ವಿಧಾನ:

*ಈ ಸಾಲಗಳಿಗೆ ಅರ್ಜಿಗಳನ್ನ ಯಾವುದೇ ನಿಗದಿತ ವಾಣಿಜ್ಯ ಬ್ಯಾಂಕ್ ಶಾಖೆಯಲ್ಲಿ ಮಾಡಬಹುದು.
**ಅಥವಾ ಸ್ಮಾಲ್ ಇಂಡಸ್ಟ್ರೀಸ್ ಡೆವಲಪ್‌ಮೆಂಟ್ ಬ್ಯಾಂಕ್ ಆಫ್ ಇಂಡಿಯಾ (SIDBI) ಸ್ಟ್ಯಾಂಡಪ್ ಇಂಡಿಯಾ ಪೋರ್ಟಲ್ https://www.standupmitra.in/ ಮೂಲಕ ಅರ್ಜಿ ಸಲ್ಲಿಸಬಹುದು.
*ಅಥವಾ ಸಾಲದ ಅರ್ಜಿಯನ್ನು ಲೀಡ್ ಡಿಸ್ಟ್ರಿಕ್ಟ್ ಮ್ಯಾನೇಜರ್‌ಗೆ ಕಳುಹಿಸಬಹುದು.
*ಆನ್‌ಲೈನ್‌ನಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸಲು, https://www.standupmitra.in/ ವೆಬ್‌ಸೈಟ್ ತೆರೆಯಿರಿ.
* ಹೊಸ ಉದ್ಯಮಿ, ಅಸ್ತಿತ್ವದಲ್ಲಿರುವ ವಾಣಿಜ್ಯೋದ್ಯಮಿ, ಸ್ವಯಂ ಉದ್ಯೋಗಿ ವೃತ್ತಿಪರ ಆಯ್ಕೆಗಳು ನಿಮಗೆ ಸೂಕ್ತವಾದ ಆಯ್ಕೆಯನ್ನ ನೀವು ಆರಿಸಿಕೊಳ್ಳಬೇಕು.
*ಹೆಸರು, ಇಮೇಲ್ ಐಡಿ, ಮೊಬೈಲ್ ಸಂಖ್ಯೆ ನಮೂದಿಸಿ ಮತ್ತು OTP ರಚಿಸಿ. OTP ನಮೂದಿಸಿ ಮತ್ತು ನೋಂದಣಿ ಫಾರ್ಮ್ ಪೂರ್ಣಗೊಳಿಸಿ. ವ್ಯಾಪಾರ ವಿವರಗಳು ಮತ್ತು ಸಾಲದ ವಿವರಗಳನ್ನ ನಮೂದಿಸಿ. ಅಗತ್ಯ ದಾಖಲೆಗಳನ್ನ ಅಪ್‌ಲೋಡ್ ಮಾಡಿ ಮತ್ತು ಸಾಲಕ್ಕೆ ಅರ್ಜಿ ಸಲ್ಲಿಸಬಹುದು.

ಈ ಯೋಜನೆಯ ಮೂಲಕ ಎಸ್ಸಿ ಮತ್ತು ಎಸ್ಟಿ ವರ್ಗಗಳಿಗೆ ಸೇರಿದ ಮಹಿಳೆಯರು ರೂ.10 ಲಕ್ಷದಿಂದ 1 ಕೋಟಿವರೆಗೆ ಸಾಲ ಪಡೆಯಬಹುದು. ಈ ಯೋಜನೆಯಡಿಯಲ್ಲಿ ಪ್ರತಿಯೊಬ್ಬ ಬ್ಯಾಂಕ್ ಕನಿಷ್ಠ ಒಬ್ಬ ವ್ಯಕ್ತಿಗೆ ಸಾಲ ನೀಡಬೇಕು ಎಂದು ಕೇಂದ್ರ ಸರ್ಕಾರದ ನಿಯಮಗಳಿವೆ. ಉತ್ಪಾದನಾ ವಲಯ, ಸೇವಾ ವಲಯ ಮತ್ತು ಕೃಷಿ ಸಂಬಂಧಿತ ವ್ಯವಹಾರಗಳನ್ನ ಮಾಡುವವರು ಈ ಸಾಲವನ್ನ ತೆಗೆದುಕೊಳ್ಳಬಹುದು.

Leave A Reply

Your email address will not be published.