Kia EV6: ಇಲೆಕ್ಟ್ರಿಕ್ ಕಾರು ಖರೀದಿಸುವ ಯೋಚನೆಯಲ್ಲಿದ್ದೀರಾ? ಇಲ್ಲಿದೆ ನೋಡಿ 708 ಕಿ.ಮೀ ಮೈಲೇಜ್ ನೀಡುವ ಅತ್ಯುತ್ತಮ EV!!

Kia EV6 Bookings: ಇತ್ತೀಚೆಗೆ ಎಲೆಕ್ಟ್ರಿಕ್ ವಾಹನಗಳ (electric vehicle) ಹವಾ ಹೆಚ್ಚಿದೆ. ಎಲ್ಲರೂ ಎಲೆಕ್ಟ್ರಿಕ್ ವಾಹನಗಳತ್ತನೇ ಮುಖ ಮಾಡುತ್ತಿದ್ದಾರೆ. ಅದಕ್ಕೆ ತಕ್ಕಂತೆ ಕಂಪನಿಗಳು ಕೂಡ ನೂತನ ವಿಭಿನ್ನ ವಿನ್ಯಾಸ, ಅತ್ಯುತ್ತಮ ಫೀಚರ್ಸ್ ಇರುವ ವಾಹನಗಳನ್ನು ಬಿಡುಗಡೆ ಮಾಡುತ್ತಿದೆ. ಅಂತೆಯೇ ಶೀಘ್ರದಲ್ಲೇ ಕಿಯಾ ಇಂಡಿಯಾ 2023 Kia EV6 ಬುಕ್ಕಿಂಗ್ (Kia EV6 Bookings) ಅನ್ನು ಪ್ರಾರಂಭಿಸುತ್ತದೆ ಎಂದು ಘೋಷಿಸಿದೆ.

ಕಿಯಾ ಬಿಡುಗಡೆಯಾದ ಕೇವಲ 7 ತಿಂಗಳಲ್ಲೇ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗಿದ್ದು, ಪ್ರೀಮಿಯಂ ಎಲೆಕ್ಟ್ರಿಕ್ ಕಾರು ಎಂಬ ಹೆಸರು ಗಳಿಸಿದೆ. ಕಿಯಾ ಭಾರತದ ಮಾರುಕಟ್ಟೆಗೆ ತನ್ನ ಮೊದಲ ಎಲೆಕ್ಟ್ರಿಕ್ ಕಾರು EV6 ಅನ್ನು 2022 ಜೂನ್‌ನಲ್ಲಿ ಬಿಡುಗಡೆ ಮಾಡಿತ್ತು. 2022 ರ ಅಂತ್ಯದ ವೇಳೆಗೆ, 432 ಯೂನಿಟ್ ಗಳು ಮಾರಾಟವಾಗಿವೆ ಎನ್ನಲಾಗಿದೆ.

Kia EV6 ಕಾರು ಉತ್ತಮ ವಿನ್ಯಾಸ ಹೊಂದಿದೆ. 2023 Kia EV6 GT ಲೈನ್ ಮತ್ತು GT ಲೈನ್ AWD ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದ್ದು, ಇವುಗಳ ಎಕ್ಸ್ ಶೋ ರೂಂ ಬೆಲೆ ಕ್ರಮವಾಗಿ ರೂ 60.95 ಲಕ್ಷ ಮತ್ತು ರೂ 65.95 ಲಕ್ಷ ಆಗಿದೆ. ಹಾಗೆಯೇ ರನ್ವೇ ರೆಡ್, ಯಾಚ್ಟ್ ಬ್ಲೂ, ಮೂನ್ಸ್ಕೇಪ್, ಅರೋರಾ ಬ್ಲ್ಯಾಕ್ ಪರ್ಲ್ ಮತ್ತು ಸ್ನೋ ವೈಟ್ ಪರ್ಲ್ ಎಂಬ ಐದು ಬಣ್ಣದ ಆಯ್ಕೆಗಳಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಾಗಲಿದೆ.

ಕಿಯಾದ ಎಲೆಕ್ಟ್ರಿಕ್ ಗ್ಲೋಬಲ್ ಮಾಡ್ಯುಲರ್ ಪ್ಲಾಟ್‌ಫಾರ್ಮ್ (e-GMP) ಅನ್ನು ಆಧರಿಸಿದ್ದು, ಇದು ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್‌ಗಾಗಿ ಡ್ಯುಯಲ್ ಕರ್ವ್ಡ್ 12.3-ಇಂಚಿನ ಡಿಸ್ಪ್ಲೇಯನ್ನು ಪಡೆಯುತ್ತದೆ. ಈ ಕಾರು ಇದು ADAS ಜೊತೆಗೆ ಬರಲಿದ್ದು, 14-ಸ್ಪೀಕರ್ ಮೆರಿಡಿಯನ್ ಸೌಂಡ್ ಸಿಸ್ಟಮ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ಡ್ಯುಯಲ್ ಝೋನ್ ಕ್ಲೈಮೇಟ್ ಕಂಟ್ರೋಲ್ ಮುಂತಾದ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

ಈ ಕಾರು 77.4 kWh ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, 708 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ. ಹಿಂದಿನ ಚಕ್ರ ಡ್ರೈವ್ ಮತ್ತು ಆಲ್ ವೀಲ್ ಡ್ರೈವ್ ಎಂಬ ಎರಡು ರೂಪಾಂತರಗಳು ಡ್ರೈವ್‌ಟ್ರೇನ್ ಆಯ್ಕೆಗಳನ್ನು ಪಡೆಯುತ್ತದೆ. ಇದರ ಸಿಂಗಲ್-ಮೋಟಾರ್ ರಿಯರ್-ವೀಲ್-ಡ್ರೈವ್ ರೂಪಾಂತರವು 229 PS ಪವರ್ ಮತ್ತು 350 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. ಡ್ಯುಯಲ್-ಮೋಟರ್ ಆಲ್-ವೀಲ್-ಡ್ರೈವ್ ಆವೃತ್ತಿಯು 325 PS ಮತ್ತು 605 Nm ಅನ್ನು ಉತ್ಪಾದಿಸುತ್ತದೆ.

ಇದನ್ನು 50 kW DC ಫಾಸ್ಟ್ ಚಾರ್ಜರ್ ಬೆಂಬಲದೊಂದಿಗೆ 1 ಗಂಟೆ 13 ನಿಮಿಷಗಳಲ್ಲಿ 10 ರಿಂದ 80 ಪ್ರತಿಶತದಷ್ಟು ಚಾರ್ಜ್ ಮಾಡಬಹುದು. ಆದರೆ ದೇಶೀಯ ಸಾಕೆಟ್‌ನೊಂದಿಗೆ 36 ಗಂಟೆಗಳಲ್ಲಿ 0 ರಿಂದ 100 ಪ್ರತಿಶತದವರೆಗೆ ಚಾರ್ಜ್ ಮಾಡಬಹುದು ಎನ್ನಲಾಗಿದೆ.

Leave A Reply

Your email address will not be published.