Aunty Anasuya: ಆಂಟಿ ಅಂದ್ರೆ ಅನುಸೂಯಳಿಗೆ ಸಿಟ್ಯಾಕಂತೆ ಗೊತ್ತ? ಭಾರೀ ವೈರಲ್ ಆಗ್ತಿದೆ ಅನುಸೂಯ ಕೊಟ್ಟ ಆ ರೀಸನ್!
Anasuya Bharadwaj : ಟಾಲಿವುಡ್ನ(Tollywood) ನಟಿ(Acter) ಕಮ್ ನಿರೂಪಕಿ(Anchor) ಅನಸೂಯ ಭಾರದ್ವಾಜ್(Anasuya Bharadwaj) ಯಾವಾಗಲೂ ಒಂದಿಲ್ಲೊಂದು ವಿಚಾರಗಳಿಂದ ಟ್ರೋಲ್ ಆಗುತ್ತಲೆ ಇರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಒಂದಿಲ್ಲೊಂದು ಪೋಸ್ಟ್ ಹಾಕುತ್ತಾ, ತಮ್ಮ ಹಿಂಬಾಲಕರಿಗೆ ಮನರಂಜನೆ ನೀಡುತ್ತಾ ಇರೋ ಈಕೆ ಸದ್ಯ ‘ಆಂಟಿ'(Aunty) ಪದದ ಮೂಲಕ ಸಖತ್ ಸುದ್ದಿಯಲ್ಲಿದ್ದಾರೆ. ಇಷ್ಟು ದಿನ ಆಂಟಿ ಅಂದದಕ್ಕೆ ರೇಗಾಡುತ್ತಿದ್ದ ಅನಸೂಯ ಅವರು ಇದೀಗ ಆಂಟಿ ಪದದ ವಿವಾದಕ್ಕೆ ಮತ್ತೊಮ್ಮೆ ಪ್ರತಿಕ್ರಿಯೆ ನೀಡಿದ್ದಾರೆ.
ಹೌದು, ಆಂಟಿ ಎಂಬ ಪದ ಕೇಳಿದರೆ ಸಾಕು ಅನಸೂಯ ಅವರಿಗೆ ಕೋಪ ನೆತ್ತಿಗೆ ಏರುತ್ತದೆ ಎಂದಿದ್ದರು. ಆದರೀಗ
ಆಂಟಿ ಎಂದು ಕರೆದರೆ ನನಗೇನು ಬೇಸರವಿಲ್ಲ ಎಂದಿರುವ ಅನಸೂಯ ಒಂದನ್ನು ಸ್ಪಷ್ಟಪಡಿಸಿದ್ದಾರೆ. ಅದೇನೆಂದರೆ ಸಣ್ಣ ಮಕ್ಕಳು ಆಂಟಿ ಎಂದು ಕರೆದರೆ ಓಕೆ. ಆದರೆ ವಿವಾಹಿತ ಯುವಕರು ಆಂಟಿ ಎಂದು ಕರೆಯುತ್ತಾರೆ. ಇದನ್ನು ಸಹಿಸಲು ಆಗುವುದಿಲ್ಲ. ಗಡ್ಡ ಮತ್ತು ಮೀಸೆ ಬೆಳೆದಿರುವವರು ಆಂಟಿ ಎಂದು ಕರೆದರೆ ಅದನ್ನು ಸ್ವೀಕರಿಸಲು ಸಾಧ್ಯವೇ ಇಲ್ಲ ಎಂದಿದ್ದಾರೆ.
ಅಲ್ಲದೆ ಇತ್ತೀಚೆಗೆ ಅನಸೂಯ ಇನ್ಸ್ಟಾಗ್ರಾಂನಲ್ಲಿ(Instagram) ಅಭಿಮಾನಿಗಳ ಜತೆ ಸಂವಾದ ನಡೆಸಿದ್ದು, ಈ ಆಂಟಿ ವಿಚಾರವಾಗಿ ಅನೇಕರು ಪ್ರಶ್ನೆಯ ಸುರಿ ಮಳೆ ಗೈದಿದ್ದಾರೆ. ಸಹೋದರಿ, ನಿಮ್ಮ ಆಂಟಿ ಎಂದರೆ ನಿಮಗೇಕೆ ತುಂಬಾ ಕೋಪ ಬರುತ್ತದೆ? ಎಂದು ಅಭಿಮಾನಿಯೊಬ್ಬ ಪ್ರಶ್ನೆ ಮಾಡಿದ್ದು ಇದಕ್ಕೆ ಅನಸೂಯ ನನ್ನನ್ನು ಗುರಿಯಾಗಿಸಿಕೊಂಡು ಆಂಟಿ ಎಂದು ಕರೆಯುತ್ತಾರೆ. ಇದೀಗ ಅದು ನನಗೆ ಮನವರಿಕೆಯಾಗಿದ್ದು, ಎಷ್ಟೇ ಹೇಳಿದರೂ ಆಂಟಿ ಎಂದು ಕರೆಯುವವರನ್ನು ತಿದ್ದಲು ಆಗುವುದಿಲ್ಲ. ಅಂತವರನ್ನು ನಿರ್ಲಕ್ಷಿಸುವುದೇ ಒಳಿತು ಎಂದಿದ್ದಾರೆ.
ಅಲ್ಲದೆ ಮೊದಲೆಲ್ಲ ನನಗೆ ತುಂಬಾ ಕೋಪ ಬರುತ್ತಿತ್ತು. ಈಗ ನನಗೆ ಕೋಪ ಬರುವುದಿಲ್ಲ. ಏಕೆಂದರೆ, ಅದನ್ನು ಅವರವರ ಹಣೆಬರಹಕ್ಕೆ ಬಿಟ್ಟಿದ್ದೇನೆ. ಅದಲ್ಲದೆ, ನಾನು ಮಾಡಬೇಕಿರುವ ಕೆಲಸ ಬೇಕಾದಷ್ಟಿದೆ. ಹೀಗಾಗಿ ನಾನು ಇಂತಹ ವಿಚಾರಗಳು ಹಾಗೂ ಕೆಟ್ಟ ಕಾಮೆಂಟ್ಗಳ ಮೇಲಿನ ಗಮನವನ್ನು ನಿಲ್ಲಿಸಿದ್ದೇನೆ ಎಂದು ಅನಸೂಯ ತಿಳಿಸಿದ್ದಾರೆ.
ಅಂದಹಾಗೆ ಇತ್ತೀಚೆಗೆ ಅನುಸೂಯ ಪೋಸ್ಟ್ ಮಾಡಿದ ಆಕೆಯ ಫೋಟೋಗೆ ಕೆಲವರು ಕಿಚಾಯಿಸಲು ‘ಆಂಟಿ’ (Aunty) ಎಂದು ಕರೆದಿದ್ದರು. ಈ ‘ಆಂಟಿ ‘ ಪದ ಕೇಳಿಯೇ ಅನಸೂಯಾ ‘ anty ‘ ಆಗಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ಅವರು ಆಂಟಿ ಎಂಬ ಪದವು ಕಿರುಕುಳದ ವ್ಯಾಪ್ತಿಗೆ ಬರುತ್ತದೆ. ಆ ರೀತಿಯಲ್ಲಿ ಕಾಮೆಂಟ್ ಮಾಡುವವರಿಗೆ ಕಾನೂನು (Complaint) ರೀತಿಯ ಕ್ರಮಕ್ಕೆ ಮುಂದಾಗುತ್ತೇನೆ. ನೀವು ಹಾಗೆ ಕರೆಯುವುದರ ಹಿಂದಿನ ಉದ್ದೇಶವನ್ನು ನಾನು ಬಲ್ಲೆ. ಹಾಗಾಗಿ ಎಚ್ಚರಿಕೆಯಿಂದ ಕಾಮೆಂಟ್ ಮಾಡಿ ಎಂದು ಹೇಳಿ, ಯಾರಿಗೂ ಆಂಟಿ ಅಂತ ಕರೆಯಬೇಡಿ ಎಂದು ಕೂಡ ಮನವಿ ಮಾಡಿದ್ದರು.