Home latest BJP Candidate : ಚುನಾವಣಾ ಕಣದಿಂದ ಹಿಂದೆ ಸರಿದ ಹಿರಿಯ ಶಾಸಕ ; ಹಾಲಾಡಿ ಹಾದಿ...

BJP Candidate : ಚುನಾವಣಾ ಕಣದಿಂದ ಹಿಂದೆ ಸರಿದ ಹಿರಿಯ ಶಾಸಕ ; ಹಾಲಾಡಿ ಹಾದಿ ಹಿಡಿದ ಮತ್ತೋರ್ವ ಬಿಜೆಪಿ ಶಾಸಕ

Hindu neighbor gifts plot of land

Hindu neighbour gifts land to Muslim journalist

 

BJP Candidate : ಬೆಂಗಳೂರು : ಕುಂದಾಪುರದ ಬಿಜೆಪಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಚುನಾವಣಾ ಕಣದಿಂದ ಹಿಂದೆ ಸರಿದ ಬಳಿಕ ಇದೀಗ ಬಿಜೆಪಿಯ ಇನ್ನೊಬ್ಬ ಶಾಸಕ (BJP Candidate) ಚುನಾವಣಾ ಕಣದಿಂದ ಹಿಂದೆ ಸರಿಯುವ ಘೋಷಣೆ ಮಾಡಿದ್ದಾರೆ.

ಎಸ್.ಎ ರವೀಂದ್ರನಾಥ್ ಅವರು ಚುನಾವಣಾ ಕಣದಿಂದ ಹಿಂದೆ ಸರಿದ ಇನ್ನೋರ್ವ ಬಿಜೆಪಿ ಶಾಸಕರು.

ದಾವಣಗೆರೆ ಉತ್ತರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಸೋಮವಾರವಷ್ಟೇ ಕುಂದಾಪುರದ ಬಿಜೆಪಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ತಾನು ಸ್ಪರ್ಧಿಸುವುದಿಲ್ಲ ಎಂದು ಘೋಷಣೆ ಮಾಡಿದ್ದರು.ಈ ಕುರಿತು ಬಿಜೆಪಿ ಕಾರ್ಯಕರ್ತರು ಹಾಗೂ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿತ್ತು.

ಇದೀಗ ಎಸ್.ಎ ರವೀಂದ್ರನಾಥ್ ಅವರು ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದಿದ್ದಾರೆ.

ದಾವಣಗೆರೆ ಜಿಲ್ಲೆಯ ಎಸ್.ಎ.ರವೀಂದ್ರನಾಥ್ ಇದುವರೆಗೂ 5 ಬಾರಿ ಶಾಸಕರಾಗಿದ್ದಾರೆ. 1994, 1999, 2004 ರಲ್ಲಿ ಮಾಯಕೊಂಡ ವಿಧಾನಸಭಾ ಕ್ಷೇತ್ರದಿಂದ ಗೆದ್ದಿದ್ದಾರೆ.