Indian prime ministers Education: ಅತೀ ಕಡಿಮೆ ಹಾಗೂ ಅತೀ ಹೆಚ್ಚು ಓದಿದ ನಮ್ಮ ಪ್ರಧಾನಿಗಳಿವರು, ಯಾರೆಂದು ನೀವೇ ನೋಡಿ!
Indian prime ministers Education : ಇತ್ತೀಚೆಗೆ ದೆಹಲಿಯ ಮುಖ್ಯಮಂತ್ರಿ(Delhi CM)ಮತ್ತು ಎಎಪಿ(AAP) ಮುಖಂಡ ಅರವಿಂದ ಕೇಜ್ರಿವಾಲ್(Arvind Kejriwal) ಅವರು ಭಾರತದ ಪ್ರಧಾನಿಯ(Indian PM) ವಿದ್ಯಾರ್ಹತೆಯ ಬಗ್ಗೆ ಪ್ರಶ್ನಿಸಿದ್ದಾರೆ. ‘ಕಡಿಮೆ ವಿದ್ಯಾವಂತರು ಮತ್ತು ಅಸುಕ್ಷಿತರು ದೇಶ ಮುನ್ನಡೆಸಲು ಅಸಾಧ್ಯ’ ಎನ್ನುವ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಅರವಿಂದ ಕೇಜ್ರಿವಾಲ್. ಈ ಹಿನ್ನೆಲೆಯಲ್ಲಿ ನಮ್ಮ ಭಾರತದ ಹಾಲಿ ಮತ್ತು ಆಗಿಹೋದ ಹಲವು ಪ್ರಧಾನಮಂತ್ರಿಗಳ ವಿದ್ಯಾರ್ಥಿ (Indian prime ministers Education) ಏನು ಎಂಬುದನ್ನು ಗಮನಿಸೋಣ.
ಜವಾಹರ್ ಲಾಲ್ ನೆಹರು: ಜವಾಹರ್ ಲಾಲ್ ನೆಹರು ಅವರು ಭಾರತದ ಮೊದಲ ಪ್ರಧಾನಿ. ನೆಹರು ಅವರು ತಮ್ಮ ಶಿಕ್ಷಣವನ್ನು ಇಂಗ್ಲೆಂಡಿನಲ್ಲಿ ಪೂರೈಸಿದ್ದಾರೆ. ಅವರು ಮೊದಲು ಹಾರೋ ವಿಶ್ವವಿದ್ಯಾನಿಲಯದಲ್ಲಿ ಓದಿ ನಂತರ ಟ್ರಿನಿಟಿ ಕಾಲೇಜಿನಲ್ಲಿ ನ್ಯಾಚುರಲ್ ಸೈನ್ಸ್ ವಿಭಾಗದಲ್ಲಿ ಪದವಿಯನ್ನು ಪಡೆದಿದ್ದಾರೆ.
ಲಾಲ್ ಬಹದ್ದೂರ್ ಶಾಸ್ತ್ರಿ: ಲಾಲ್ ಬಹುದ್ದೂರ್ ಶಾಸ್ತ್ರಿ ಅವರು ಸ್ವತಂತ್ರ ಭಾರತದ ಎರಡನೆಯ ಪ್ರಧಾನಿ. ಶಾಸ್ತ್ರಿಯವರು ಕಾಶಿ ವಿದ್ಯಾಪೀಠದಲ್ಲಿ ತನ್ನ ವಿದ್ಯಾಭ್ಯಾಸವನ್ನು ಮಾಡಿದ್ದು ಅವರು ಸಂಸ್ಕೃತದಲ್ಲಿ ಡಿಗ್ರಿಯನ್ನು ಪಡೆದಿದ್ದಾರೆ.
ಶ್ರೀಮತಿ ಇಂದಿರಾ ಗಾಂಧಿ: ಭಾರತವನ್ನು ಸುಧೀರ್ಘವಾಗಿ ಆಳಿದ ಮತ್ತೊಬ್ಬ ಪ್ರಧಾನಿ ಅಂದ್ರೆ ಶ್ರೀಮತಿ ಇಂದಿರಾಗಾಂಧಿಯವರು. ಶ್ರೀಮತಿ ಇಂದಿರಾ ಗಾಂಧಿಯವರು ತನ್ನ ಮೂಲ ಶಿಕ್ಷಣವನ್ನು ವಿಶ್ವ ಭಾರತಿ ವಿದ್ಯಾಲಯದಿಂದ ಪಡೆದಿದ್ದು ನಂತರ ‘ ಸೈಟೇಷನ್ ಆಫ್ ಡಿಸ್ಟಿಂಕ್ಷನ್ ‘ ಅನ್ನು ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಪಡೆದಿದ್ದಾರೆ. ಅಲ್ಲದೆ ಆಕೆ ಸೋಮರ್ವಿಲ್ಲೆ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಪಡೆದಿದ್ದಾರೆ.
ಮೊರಾರ್ಜಿ ದೇಸಾಯಿ: ಮೊರಾರ್ಜಿಯವರು ತಮ್ಮ ಬಾಲ್ಯ ಶಿಕ್ಷಣವನ್ನು ಸೈಂಟ್ ಬಿಸಾರ್ ಹೈಸ್ಕೂಲಿನಲ್ಲಿ ಪೂರೈಸಿದ್ದು, ನಂತರ ಮುಂಬೈ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ನಡೆಸಿದ್ದರು. ನಂತರ ಅವರು ವಿಲ್ಸನ್ ಸಿವಿಲ್ ಸರ್ವಿಸ್ ನಲ್ಲಿ ತಮ್ಮ ಡಿಗ್ರಿ ಶಿಕ್ಷಣವನ್ನು ಪೂರೈಸಿದ್ದಾರೆ.
ಚರಣ್ ಸಿಂಗ್: ಚರಣ್ ಸಿಂಗ್ ಅವರು ಮೂಲತಹ ಬಿಎಸ್ಸಿ ಪದವೀಧರ, ಆಗ್ರಾ ಕಾಲೇಜಿನಿಂದ ಬಿ ಎಸ್ ಸಿ ಪದವಿ ನಂತರ ಅವರು ಹಿಸ್ಟರಿಯಲ್ಲಿ ಎಂಎ ಪದವಿಯನ್ನು ಪಡೆದಿದ್ದಾರೆ. ಅಲ್ಲದೇ ಅವರು ಕಾನೂನು ಶಾಸ್ತ್ರದಲ್ಲಿ ಕೂಡ ಪರಿಣತಿಯನ್ನು ಹೊಂದಿದ್ದರು.
ರಾಜೀವ್ ಗಾಂಧಿ: ಇಂದಿರಾ ಗಾಂಧಿಯವರ ಮಗ ರಾಜೀವ್ ಗಾಂಧಿಯವರು ಇಂಗ್ಲೆಂಡಿನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಮೆಕಾನಿಕಲ್ ಪದವಿಯನ್ನು ಪಡೆದಿದ್ದಾರೆ.
ವಿಪಿ ಸಿಂಗ್ : ವಿಶ್ವನಾಥ ಪ್ರತಾಪ್ ಸಿಂಗ್ ಅವರು ಉತ್ತರ ಪ್ರದೇಶದ ಅಲಹಾಬಾದ್ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿಯನ್ನು ಪಡೆದಿದ್ದಾರೆ ಅಲ್ಲದೆ ಅವರು ಭೌತಶಾಸ್ತ್ರದಲ್ಲಿ ಬಿಎಸ್ಎಯನ್ನು ಕೂಡ ಓದಿದ್ದಾರೆ.
ಚಂದ್ರಶೇಖರ್: ಮಾಜಿ ಪ್ರಧಾನಿ ಚಂದ್ರಶೇಖರ್ ಅವರು ಅಲಹಾಬಾದ್ ವಿಶ್ವವಿದ್ಯಾಲಯದಲ್ಲಿ ಪೊಲಿಟಿಕಲ್ ಸೈನ್ಸ್ ನಲ್ಲಿ ಎಂಎ ಪದವಿಯನ್ನು ಹೊಂದಿದ್ದಾರೆ.
ಪಿ ವಿ ನರಸಿಂಹರಾವ್: ಮಾಜಿ ಪ್ರಧಾನಿ ನರಸಿಂಹರಾವ್ ಅವರು ಡಬ್ಬಲ್ ಗ್ರಾಜುಯೇಟ್. ಅವರು ಹೊಸಮನಿಯಾ ಯೂನಿವರ್ಸಿಟಿಯಿಂದ ಬ್ಯಾಚುಲರ್ ಆಫ್ ಆರ್ಟ್ಸ್ ಪದವಿಯನ್ನು ಪಡೆದಿದ್ದಾರೆ. ಅಲ್ಲದೆ ಅವರು ಮುಂಬೈ ಯುನಿವರ್ಸಿಟಿಯಿಂದ ಕಾನೂನು ಪದವಿಯನ್ನು ಗಳಿಸಿದ್ದಾರೆ.
ಅಟಲ್ ಬಿಹಾರಿ ವಾಜಪೇಯಿ: ವಾಜಪೇಯಿಯವರು ಪೊಲಿಟಿಕಲ್ ಸೈನ್ಸ್ ನಲ್ಲಿ ಎಂಎ ಪದವಿಯನ್ನು ಕಾನ್ಪುರದ ಡಿಎವಿ ಕಾಲೇಜಿನಿಂದ ಪಡೆದಿದ್ದಾರೆ.
ಎಚ್ ಡಿ ದೇವೇಗೌಡ: ಹರದನಹಳ್ಳಿ ದೊಡ್ಡೇಗೌಡ ದೇವೇಗೌಡ ಅವರು ಹಾಸನದ ಎಲ್ ವಿ ಪಾಲಿಟೆಕ್ನಿಕ್ ನಲ್ಲಿ ಸಿವಿಲ್ ಇಂಜಿನಿಯರಿಂಗ್ ಡಿಪ್ಲೋಮಾ ಓದು ಮುಗಿಸಿದ್ದಾರೆ. ಅಂದಹಾಗೆ ನಮ್ಮ ಇದುವರೆಗಿನ ಪ್ರಧಾನಿಗಳಲ್ಲಿ ದೇವೇಗೌಡರೇ ಅತೀ ಕಡಿಮೆ ಶಿಕ್ಷಣವನ್ನು ಪಡೆದಿರುವಂತದ್ದು. ಅಲ್ಲದೆ ಸಾಮಾನ್ಯ ರೈತನ ಮಗನಾಗಿ ದೇಶದ ಅತ್ಯುನ್ನತ ಪದವಿಯೇರಬಹುದೆಂದು ತೋರಿಸಿ ಕೊಟ್ಟ ಖ್ಯಾತಿ ನಮ್ಮ ದೊಡ್ಡ ಗೌಡರದ್ದು. ವಿದ್ಯೆ ಕಡಿಮೆಯಿದ್ದರೂ ಬುದ್ಧಿಯಲ್ಲಿ ಗೌಡರನ್ನು ಯಾರೂ ಮೀರಿಸಲಾಗದು.
ಇಂದ್ರ ಕುಮಾರ್ ಗುಜ್ರಾಲ್: ಗುಜ್ರಾಲ್ ಅವರು ಡಬ್ಬಲ್ ಗ್ರಾಜುಯೇಟ್. ಅವರು ಬಿಕಾಂ ಮತ್ತು ಎಂ ಎ ಪದವಿಯನ್ನು ಪಡೆದಿದ್ದು ನಂತರ ಹೆಚ್ಚಿನ ಅಧ್ಯಯನ ನಡೆಸಿ ಪಿ ಎಚ್ ಡಿ ಮತ್ತು ಡಿಲಿಟ್ ಆನರ್ಸ್ ಗಳಿಸಿದ್ದಾರೆ.
ಮನಮೋಹನ್ ಸಿಂಗ್: ಮಾಜಿ ಮುಖ್ಯಮಂತ್ರಿ ಮನಮೋಹನ್ ಸಿಂಗ್ ಅವರು ಅರ್ಥಶಾಸ್ತ್ರದಲ್ಲಿ ಪೋಸ್ಟ್ ಗ್ರಾಜುಯೇಟ್ ಪದವಿಯನ್ನು ಹೊಂದಿದ್ದು ಅದನ್ನು ಅವರು ಕೇಂಬ್ರಿಜ್ ವಿಶ್ವವಿದ್ಯಾಲಯದಿಂದ ಪಡೆದಿದ್ದಾರೆ. ಅಲ್ಲದೆ ಅವರು ಡಿಫಿಲ್ ಅನ್ನು ಕೂಡ ಗಳಿಸಿದ್ದರು. ಅತೀ ಹೆಚ್ಚು ಶಿಕ್ಷಣ ಪಡೆದ ಹೆಗ್ಗಳಿಕೆ ಇವರದಾದರೆ ವಿಶ್ವವೇ ಕಂಡ ಅತ್ಯಂತ ಶ್ರೇಷ್ಠ ಆರ್ಥಿಕಜ್ಞನಾಗಿ ಮೆರೆದ ಖ್ಯಾತಿ ಇವರದ್ದು. ಎರಡು ಅವಧಿಗೆ ದೇಶದ ಪ್ರಧಾನಿ ಆಗಿ ಆಯ್ಕೆಯಾಗಿ ಯಶಸ್ವಿಯಾಗಿ ರಾಷ್ಟ್ರವನ್ನು ಮುನ್ನಡೆಸಿದ ರಾಜಕೀಯ ಹಾಗೂ ಅರ್ಥಿಕ ಮುತ್ಸದ್ಧಿ ಇವರು.
ಹಾಲಿ ಪ್ರಧಾನಿ ನರೇಂದ್ರ ಮೋದಿ: ಹಾಲಿ ಪ್ರಧಾನಿ ನರೇಂದ್ರ ಮೋದಿಯವರು ದೆಹಲಿ ವಿಶ್ವವಿದ್ಯಾಲಯದಿಂದ ಪೊಲಿಟಿಕಲ್ ಸೈನ್ಸ್ ನಲ್ಲಿ ಬಿಎ ಪದವಿಯನ್ನು ಪಡೆದಿದ್ದಾರೆ. ಅವರಿಗೆ ಬಾಲ್ಯದಲ್ಲಿ ಉನ್ನತ ಶಿಕ್ಷಣ ದೊರೆಯಲಿಲ್ಲ. ಆದುದರಿಂದ ಅವರು ದೂರ ಶಿಕ್ಷಣದ ಮೂಲಕ ಡಿಗ್ರಿ ಮುಗಿಸಿದ್ದು ಅಲ್ಲಿ ಅವರು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾದರು. ಆದರೂ ಇದೀಗ ಅವರು ದೇಶವನ್ನು ಎರಡನೇ ಬಾರಿಗೆ ಪ್ರತಿನಿಧಿಸಿ ಪ್ರಧಾನಿಯಾಗಿ ಆಡಳಿತ ನಡೆಸುತ್ತಿದ್ದಾರೆ. ನಾಯಕನಿಗೆ ವಿದ್ಯಾರ್ಹತೆ ಮುಖ್ಯವೇ ಅಥವಾ ನಾಯಕತ್ವದ ಗುಣ ಮುಖ್ಯವೇ ? ಓದುಗರೆ ನೀವೇ ನಿರ್ಧರಿಸಿ.