Pressure Cooker : ಕುಕ್ಕರ್‌ ಲೀಕೇಜ್‌ ಸಮಸ್ಯೆ ಅತಿಯಾಗಿದೆಯೇ? ಇಲ್ಲಿದೆ ನಿಮಗೊಂದು ಟಿಪ್ಸ್‌!

Pressure Cooker : ಇತ್ತೀಚಿಗೆ ಕುಕ್ಕರ್ ಉಪಯೋಗ ಪ್ರತೀ ಮನೆಯಲ್ಲೂ ಇದೆ. ಯಾಕೆಂದರೆ ಕುಕ್ಕರ್ (Pressure Cooker)ನಲ್ಲಿ ಅಡುಗೆ ಬೇಗ ಆಗುತ್ತೆ ಅನ್ನೋ ಕಾರಣಕ್ಕೆ. ಆದರೆ ಪ್ರತಿ ಬಾರಿಯೂ ಕುಕ್ಕರ್ ವಿಸೆಲ್ ಕೂಗುವಾಗ ನೀರೆಲ್ಲಾ ಹೊರ ಬಂದು ಸ್ಟವ್ ಸುತ್ತಮುತ್ತ ಕೊಳಕಾಗಿ ಹೋಗುತ್ತೆ . ಕುಕ್ಕರ್ ನಿಂದ ನೀರೆಲ್ಲಾ ಹೊರಗೆ ಬಂದರೆ ಆಹಾರ ಕೂಡ ಸರಿಯಾಗಿ ಬೇಯುವುದಿಲ್ಲ. ಕುಕ್ಕರ್ ನಲ್ಲಿ ಅಡುಗೆ ಮಾಡುವ ಪ್ರತಿಯೊಬ್ಬರಿಗೂ ಇದೊಂದು ದೊಡ್ಡ ಸಮಸ್ಯೆ ಆಗಿದೆ. ಈ ಸಮಸ್ಯೆಗೆ ಸುಲಭ ಪರಿಹಾರ ಇಲ್ಲಿದೆ.

 

ಮುಖ್ಯವಾಗಿ ಅಡುಗೆ ಮಾಡುವಾಗ ಕುಕ್ಕರ್ ನಿಂದ ನೀರು ಹೊರ ಬರಲು ಸಾಮಾನ್ಯ ಕಾರಣ ಸ್ವಚ್ಛತೆಯ ಕೊರತೆ. ಮಾಮೂಲಿ ಪಾತ್ರೆಗಳಂತೆ ಕುಕ್ಕರ್ ಅನ್ನೂ ತೊಳೆಯುವವರೇ ಹೆಚ್ಚು. ಆದರೆ ಕುಕ್ಕರ್ ಕ್ಲೀನಿಂಗ್ ನಲ್ಲಿ ಕೆಲವೊಂದು ಕ್ರಮ ಬಳಸಬೇಕು. ಆಗ ನೀರು ಹೊರಬರುವ ಸಮಸ್ಯೆ ಎದುರಾಗಲ್ಲ.

 

ವಿಸೆಲ್ ಅನ್ನು ಕ್ಲೀನ್ ಮಾಡಿ:

ಅನೇಕ ಸಲ ಆಹಾರವು ಕುಕ್ಕರ್ ನಲ್ಲಿನ ಸೀಟಿಯಲ್ಲಿ ಸಿಲುಕಿಕೊಳ್ಳುತ್ತದೆ. ಸೀಟಿಯು ಕೊಳಕಾಗಿದ್ದರೆ ಸರಿಯಾಗಿ ಹಬೆ ಹೋಗಲು ಸಾಧ್ಯವಾಗಲ್ಲ. ಹಾಗಾಗಿ ಕುಕ್ಕರ್ ನ ಸೀಟಿಯನ್ನು ತೆರೆದು ಪರೀಕ್ಷಿಸಿ. ಬ್ರಷ್ ನಿಂದ ಚೆನ್ನಾಗಿ ಸ್ವಚ್ಛಗೊಳಿಸಿ ನಂತರ ಬಳಸಿ.

 

ರಬ್ಬರ್ ಪರಿಶೀಲಿಸಿ:

ದಿನ ಪ್ರತೀ ಬಳಸಿದ ಕೆಲ ತಿಂಗಳಗಳ ಬಳಿಕ ಕುಕ್ಕರ್ ಮುಚ್ಚಳದ ರಬ್ಬರ್ ಸಡಿಲವಾಗುತ್ತೆ. ಇದರಿಂದಾಗಿ ಕುಕ್ಕರ್ ನಿಂದ ನೀರು ಹೊರ ಬರುತ್ತೆ. ಗ್ಯಾಸ್ ಕೆಟ್ ಲೂಸ್ ಆಗಿದ್ದರೆ ಬದಲಿಸಬೇಕಾಗುತ್ತೆ. ಅಡುಗೆ ಮಾಡಿದ ಬಳಿಕ ರಬ್ಬರ್ ಅನ್ನು ತಣ್ಣೀರಿನಲ್ಲಿ ಹಾಕಿದ್ರೆ ಹೆಚ್ಚು ಬಾಳಿಕೆ ಬರುತ್ತೆ.

 

ಎಣ್ಣೆ ಸೇರಿಸಿ:

ಕುಕ್ಕರ್ ನಿಂದ ನೀರು ಬರದಂತೆ ತಡೆಯಲು ನೀವು ಎಣ್ಣೆಯನ್ನು ಬಳಸಬಹುದು. ಕುಕ್ಕರ್ ನ ಮುಚ್ಚಳದ ಸುತ್ತಲೂ ಎಣ್ಣೆಯನ್ನು ಹಚ್ಚಿ. ಇದು ಕುಕ್ಕರ್ ನಲ್ಲಿರುವ ನೀರು ಹೊರಹೋಗಲು ಬಿಡುವುದಿಲ್ಲ.

 

ತಣ್ಣೀರು ಬಳಸಿ:

ತಣ್ಣೀರಿನ ಸಹಾಯದಿಂದ ನೀವು ಕುಕ್ಕರ್ ನಿಂದ ನೀರು ಬರದಂತೆ ತಡೆಯಬಹುದು. ಕುಕ್ಕರ್ ನಿಂದ ನೀರು ಬಂದರೆ ಮುಚ್ಚಳ ತೆರೆದು ತಣ್ಣೀರಿನಿಂದ ತೊಳೆದು ಮತ್ತೆ ಮುಚ್ಚಿದರೆ ನೀರು ಬರಲ್ಲ.

 

  1. ಮುಖ್ಯವಾಗಿ ಕುಕ್ಕರ್ ಗೆ ಹೆಚ್ಚು ನೀರು ಹಾಕುವುದು ಅಥವಾ ಕುಕ್ಕರ್ ಅನ್ನು ಹೆಚ್ಚಿನ ಉರಿಯಲ್ಲಿ ಇಡುವುದರಿಂದ ಕೂಡ ನೀರು ಲೀಕ್ ಆಗುತ್ತದೆ. ಆದ್ದರಿಂದ ಕುಕ್ಕರ್ ನಲ್ಲಿ ಆಹಾರವನ್ನು ಬೇಯಿಸುವಾಗ ನೀರಿನ ಪ್ರಮಾಣ ಸರಿಯಾಗಿರಬೇಕು. ಮಧ್ಯಮ ಜ್ವಾಲೆಯಲ್ಲಿ ಬೇಯಿಸಿದರೆ ಕುಕ್ಕರ್ ನಲ್ಲಿರುವ ನೀರು ಹೊರಬರುವುದಿಲ್ಲ. ಈ ಅಂಶಗಳನ್ನು ಪ್ರಮುಖವಾಗಿ ಗಮನದಲ್ಲಿ ಇರಿಸಿಕೊಂಡರೆ ಅನವಶ್ಯಕವಾಗಿ ನೀರು ಲೀಕ್ ಆಗುವುದು ತಪ್ಪಿಸಬಹುದು .
Leave A Reply

Your email address will not be published.