Aadhaar, PAN: ಜನಸಾಮಾನ್ಯರೇ ಗಮನಿಸಿ, ಈ ಸಣ್ಣ ಉಳಿತಾಯ ಯೋಜನೆಗಳಲ್ಲಿ ಇನ್ನು ಮುಂದೆ ಹೂಡಿಕೆ ಮಾಡಲು ಆಧಾರ್, ಪ್ಯಾನ್ ವಿವರಗಳು ಕಡ್ಡಾಯ: ಕೇಂದ್ರ

Aadhar PAN  :ಕೇಂದ್ರ ಸರ್ಕಾರ (central government)ನಿಗದಿಪಡಿಸಿದ ದಿನದಲ್ಲಿ ಪಾನ್​​ ಕಾರ್ಡ್​ (PAN) ಮತ್ತು ಆಧಾರ್ ಕಾರ್ಡ್ ( Aadhaar PAN)​ ಲಿಂಕ್ ಮಾಡುವ ಕೊನೆಯ ದಿನವನ್ನು ಮಾರ್ಚ್ 31ಕ್ಕೆ ನಿಶ್ಚಯಿಸಿದ್ದು, ಆದರೆ ಇದೀಗ ಲಿಂಕ್(link) ಮಾಡುವ ದಿನಾಂಕವನ್ನು ಜೂನ್ 30 ರವರೆಗೆ ಕೇಂದ್ರ ಸರ್ಕಾರ ಇನ್ನಷ್ಟು ಮುಂದೂಡಿದೆ . ಇದೀಗ ಕೇಂದ್ರ ಸರ್ಕಾರ ಮತ್ತೊಂದು ಮಹತ್ವದ ಆದೇಶವೊಂದನ್ನು ಜನರಿಗೆ ನೀಡಿದೆ. ಅದೇನಪ್ಪಾ ಅಂದ್ರೆ

ಜನರು ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಲು ಪಾನ್ (pan)ಮತ್ತು ಆಧಾರ್ ಕಾರ್ಡ್​(adhar card) ಮುಖ್ಯ ಎಂದು ಕೇಂದ್ರ ಸರ್ಕಾರ ಕಟ್ಟು ನಿಟ್ಟಿನ ನಿಯಮವನ್ನು ಹೇಳಿದೆ. ಈ ಎರಡು ದಾಖಲೆಗಳು ಇನ್ನೂ ಮುಂದೆ ಎಲ್ಲ ದಾಖಲೆಗಳಿಗೂ ಹಾಗೂ ಯಾವುದೇ ಕೆಲಸ ಮಾಡಬೇಕಾದರೂ ಬಹು ಮುಖ್ಯವಾಗಿರುತ್ತದೆ. ಹೀಗಾಗಿ ಪಾನ್ ಮತ್ತು ಆಧಾರ್ ಕಾರ್ಡ್ KYC (Know Your Customer) ಯ ಒಂದು ಅವಿಭಾಜ್ಯ ಅಂಗವಾಗಿದೆ. ಈಗ, ಸಣ್ಣ ಉಳಿತಾಯ ಯೋಜನೆಗಳಲ್ಲಿ ಹಣವನ್ನು ಹೂಡಿಕೆ ಮಾಡಲು ನಿಮ್ಮ ಪ್ಯಾನ್ ಮತ್ತು ಆಧಾರ್ ಸಂಖ್ಯೆ ಕಡ್ಡಾಯ ಎಂದು ಹಣಕಾಸು ಸಚಿವಾಲಯ ಈ ರೀತಿಯ ಮಾತನ್ನು ಹೇಳಿದೆ.

ಹೌದು, ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ನ ಜೊತೆಯಲ್ಲಿಯೇ, ಮಾರ್ಚ್ 31ರಂದು ಹಣಕಾಸು ಸಚಿವಾಲಯ ಹೊಸ ರೀತಿಯ ನಿಯವನ್ನು ಹೊರಡಿಸಿದ ಪ್ರಕಾರ, ಜನರು ಹೂಡಿಕೆ ಮಾಡುವ ಸಣ್ಣ ಉಳಿತಾಯ ಯೋಜನೆಗಳಿಗಾಗಿ KYCಯು ಮುಖ್ಯವಾಗಿದೆ. ಈ ಹಿಂದೆ ಆಧಾರ್ ಸಂಖ್ಯೆಯನ್ನು ಜನರು ಕೊಡದೆ ಇದ್ದರು ಅವರು ಈ ಯೋಜನೆಗಳಲ್ಲಿ ಹಣವನ್ನು ಹೂಡಿಕೆ ಮಾಡಬಹುದಾಗಿತ್ತು. ಆದರೆ, ಈಗ ಈ ಯೋಜನೆಗಳಲ್ಲಿ ಹಣವನ್ನು ಹೂಡಿಕೆ ಮಾಡಲು ಕನಿಷ್ಠ ಆಧಾರ್ ಸಂಖ್ಯೆಯನ್ನಾದರೂ ನೀಡಬೇಕಾಗುತ್ತದೆ. ಇಲ್ಲದಿದ್ದರೆ ಹಣವನ್ನು (money)ಹೂಡಿಕೆ ಮಾಡುದು ಕಷ್ಟದ ಮಾತು.

ಕಡಿಮೆ ಹಣದ ಹೂಡಿಕೆಗೆ ಪಾನ್ ಕಾರ್ಡ್ ನ(pan card) ಅಗತ್ಯತೆ ಕಡಿಮೆ ಇರುತ್ತದೆ. ಆದರೆ, ಚಂದಾದಾರರು ಲೆಕ್ಕಕ್ಕಿಂತ ಹೆಚ್ಚಿನ ಹಣದ ಹೂಡಿಕೆಯನ್ನು ಮಾಡಿದರೆ ಪಾನ್ ಸಂಖ್ಯೆಯನ್ನು(pan number) ನೀಡಬೇಕಾಗುತ್ತದೆ ಎಂಬ ನಿಯಮವನ್ನು ಹಣಕಾಸು ಸಚಿವಾಲಯ ತಿಳಿಸಿದ್ದಾರೆ.

ಹಾಗೆಯೇ ಸಣ್ಣ ಉಳಿತಾಯ ಯೋಜನೆಗಳನ್ನು ಹೊಂದಿರುವ, ಅಂದರೆ PPF, ಸುಕನ್ಯಾ ಸಮೃದ್ಧಿ ಯೋಜನೆ (SSY), ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಯೋಜನೆಗಳಲ್ಲಿ ಹಣವನ್ನು ಹೂಡಿಕೆ ಮಾಡಿದ ಬಳಕೆದಾರರು ಸೆಪ್ಟೆಂಬರ್ 30ರೊಳಗೆ ಆಧಾರ್ ಸಂಖ್ಯೆಯನ್ನು ಸಲ್ಲಿಸಬೇಕು ಎಂಬ ಕಟ್ಟು ನಿಟ್ಟಿನ ನಿಯಮವನ್ನು ತಿಳಿಸುತ್ತದೆ.ಹೀಗೆ ಮಾಡಲು ಇಷ್ಟಪಡುವವರು ಹಾಗೂ ಹೊಸ ವ್ಯಕ್ತಿಗಳು ಆರು ತಿಂಗಳೊಳಗೆ ಆಧಾರ್ ವಿವರಗಳನ್ನು ಸಲ್ಲಿಸಬೇಕು.ವಆದರೆ ಖಾತೆ (account) ತೆರೆದ ಆರು ತಿಂಗಳೊಳಗೆ ಆಧಾರ್ ವಿವರಗಳನ್ನು ಸಲ್ಲಿಸದಿದ್ದರೆ, ಈ ವರ್ಷ ಅಕ್ಟೋಬರ್(October) 1ರಿಂದ ಸಣ್ಣ ಉಳಿತಾಯ ಯೋಜನೆ ಖಾತೆಯನ್ನು ನಿಲ್ಲಿಸಲಾಗುತ್ತದೆ ಎಂಬ ಮಾಹಿತಿಯನ್ನು ಹೇಳಿದೆ.

ಒಂದು ವೇಳೆ ಚಂದಾದಾರರಿಗೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದಿಂದ (UIDAI) ಆಧಾರ್ ಸಂಖ್ಯೆಯನ್ನು ನಿಯೋಜಿಸದಿದ್ದರೆ, ನಿಮ್ಮ ನೋಂದಣಿ ಸಂಖ್ಯೆ ಕಾರ್ಯನಿರ್ವಹಿಸುತ್ತದೆ. ಉಳಿತಾಯ ಖಾತೆ ಚಂದಾದಾರರು ತೆರೆಯುವಾಗ ಪಾನ್ ಸಂಖ್ಯೆಯನ್ನು ನೀಡಬೇಕು ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಹಾಗೆಯೇ ನಿಮ್ಮ ಖಾತೆ ತೆರೆಯುವ ಸಮಯದಲ್ಲಿ ಈ ಎರಡು ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು, ಅದನ್ನು ಕೂಡ ಎರಡು ತಿಂಗಳೊಳಗೆ (monthly) ಸಲ್ಲಿಸಬೇಕು. ತಡವಾಗಿ ಸಲ್ಲಿಸಕೂಡದು. ಹಾಗೆಯೇ ನಿಮ್ಮ ಖಾತೆಯಲ್ಲಿ 50,000 ರೂಪಾಯಿಗಿಂತ ಹೆಚ್ಚಿನ ಹಣವನ್ನು ಹೊಂದಿರಬೇಕು. ಇಲ್ಲದಿದ್ದರೆ ಹಣದ ವಹಿವಾಟು ಮಾಡಲು ಕಷ್ಟವೆನಿಸುತ್ತದೆ ಎಂದು ತಿಳಿಸಿದೆ. ಒಂದು ತಿಂಗಳಲ್ಲಿ ಎಲ್ಲಾ ವ್ಯವಹಾರ ವಹಿವಾಟು ನಡೆಸುವಾಗ ಒಟ್ಟು ಮೊತ್ತವು 10,000 ಕ್ಕಿಂತ ಹೆಚ್ಚಿದ್ದರೆ ಮತ್ತು ಯಾವುದೇ ಹಣಕಾಸಿನ ವರ್ಷದಲ್ಲಿ ಖಾತೆಯಲ್ಲಿನ ಕ್ರೆಡಿಟ್‌ಗಳ(account credit) ಒಟ್ಟು ಮೊತ್ತವು 1 ಲಕ್ಷಕ್ಕಿಂತ ಹೆಚ್ಚಿದ್ದರೆ ಎಲ್ಲ ರೀತಿಯ PAN ವಿವರಗಳನ್ನು ನೀಡಬೇಕಾಗುತ್ತದೆ.

ನೀಡಿದ ಅವಧಿಯೊಳಗೆ ಚಂದಾದಾರರು ಪಾನ್ ವಿವರಗಳನ್ನು ಸರಿಯಾಗಿ ನೀಡದಿದ್ದರೆ, ಚಂದದಾರರು ಪಾನ್ ಸಂಖ್ಯೆಯನ್ನು ಒದಗಿಸುವವರೆಗೆ ಖಾತೆಯು (account) ಯಾವುದೇ ರೀತಿಯಾಗಿ ಕಾರ್ಯನಿರ್ವಹಿಸುವುದಿಲ್ಲ(work) ಎಂದು ಕಟ್ಟುನಿಟ್ಟಿನ ನಿಯಮಾವಳಿಗಳ (rules )ಜೊತೆಗೆ ತಿಳಿಸಲಾಗಿದೆ.

Leave A Reply

Your email address will not be published.