Home Breaking Entertainment News Kannada Actress Rakshita Prem Birthday : ರಕ್ಷಿತಾ ಹುಟ್ಟುಹಬ್ಬಕ್ಕೆ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಸ್ಪೆಷಲ್‌ ಆಗಿ...

Actress Rakshita Prem Birthday : ರಕ್ಷಿತಾ ಹುಟ್ಟುಹಬ್ಬಕ್ಕೆ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಸ್ಪೆಷಲ್‌ ಆಗಿ ವಿಶ್‌ ಮಾಡಿದ್ದು ಯಾವ ರೀತಿ ಗೊತ್ತಾ?

Actress Rakshita Prem Birthday

Hindu neighbor gifts plot of land

Hindu neighbour gifts land to Muslim journalist

Actress Rakshita Prem Birthday : ಚಂದನವನದ ಕ್ರೇಜಿ ಕ್ವಿನ್ ಎಂದೇ ಪ್ರಸಿದ್ಧವಾಗಿರುವ ನಟಿ ರಕ್ಷಿತಾ ಪ್ರೇಮ್ ಅವರು ಇಂದು ತಮ್ಮ (ಮಾರ್ಚ್ 31) ಹುಟ್ಟುಹಬ್ಬವನ್ನು(Actress Rakshita Prem Birthday) ಆಚರಿಸಿಕೊಳ್ಳುತ್ತಿದ್ದಾರೆ. 2002ರಲ್ಲಿ ಕನ್ನಡ ಇಂಡಸ್ಟ್ರಿಗೆ ಕಾಲಿಟ್ಟ ನಟಿ ರಕ್ಷಿತಾ ಪ್ರೇಮ್, ನಂತರ 2007 ರಲ್ಲಿ ನಿರ್ದೇಶಕ ಪ್ರೇಮ್ ಅವರನ್ನು ಮದುವೆ ಆಗಿ, ವೈವಾಹಿಕ ಜೀವನಕ್ಕೆ ಕಾಲಿಟ್ಟು, ನಟನೆಗೆ ಫುಲ್ ಸ್ಟಾಪ್ ಇಟ್ಟಿದರು.

ಕೆಲವೇ ವರ್ಷಗಳ ಕಾಲ ಸಿನೆಮಾ ಇಂಡಸ್ಟ್ರಿಯಲ್ಲಿ ಇದ್ದರೂ ಕೂಡ ರಕ್ಷಿತ ಅವರು ಕನ್ನಡ, ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ನಟನೆ ಮಾಡಿ ಹೆಸರು ಮಾಡಿದ್ದಾರೆ. ರಕ್ಷಿತ ಅವರು ಮೊದಲು ಇಂಡಸ್ಟ್ರಿಗೆ ಕಾಲಿಟ್ಟಿದ್ದು 2002ರಲ್ಲಿ. ಅಪ್ಪು ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟ ರಕ್ಷಿತಾ ಬಳಿಕ ತೆಲುಗು ಇಂಡಸ್ಟ್ರಿಗೆ ಕಾಲಿಟ್ಟರು. ರಕ್ಷಿತ ಅವರು ಕನ್ನಡದ ಸ್ಟಾರ್ ನಟರಾದ ಕಿಚ್ಚ ಸುದೀಪ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ಪವರ್ ಸ್ಟಾರ್ ಪುನೀತ್ ರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಸ್ಯಾಂಡಲ್‌ವುಡ್ ಕಿಂಗ್ ಶಿವ ರಾಜ್‌ಕುಮಾರ್ ಜೊತೆ ನಟಿಸಿದ್ದಾರೆ. ತೆಲುಗಿನಲ್ಲಿ ರವಿತೇಜಾ, ಚಿರಂಜೀವಿ, ಮಹೇಶ್ ಬಾಬು, ಜೂನಿಯರ್ ಎನ್‌ಟಿಆರ್, ಜಗಪತಿ ಬಾಬು ನಟರ ಚಿತ್ರಗಳಲ್ಲಿ ನಟನೆ ಮಾಡಿದ್ದಾರೆ. ತಮಿಳಿನಲ್ಲಿಯೂ ಕೂಡ ಸ್ಟಾರ್ ನಟರಾದ ಸಿಳಂಬರಸನ್ ಹಾಗೂ ದಳಪತಿ ವಿಜಯ್ ಅವರ ಜೊತೆ ತೆರೆ ಹಂಚಿಕೊಂಡಿದ್ದಾರೆ.

ಕೇವಲ ಐದು ವರ್ಷಗಳ ಕಾಲ ಚಿತ್ರದಲ್ಲಿ ನಟನೆ ಮಾಡಿದ್ದರೂ ಕೂಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿಯೇ ಹೆಸರು ಮಾಡಿದ್ದಾರೆ. ಇವರ ಈ ಹುಟ್ಟುಹಬ್ಬದ ಕ್ಕೆ ಚಿತ್ರರಂಗದ ಹಲವಾರು ನಟ ನಟಿಯರು ಶುಭಾಶಯಗಳನ್ನು ಕೋರಿದ್ದಾರೆ. ಹಾಗೂ ರಕ್ಷಿತ ಅವರ ಅಭಿಮಾನಿಗಳು ಕೂಡ ಹುಟ್ಟು ಹಬ್ಬಕ್ಕೆ ಶುಭ ಕೋರಿದ್ದಾರೆ.

ಕನ್ನಡ ಚಲನಚಿತ್ರರಂಗದಲ್ಲಿ ಹಿಟ್ ಜೋಡಿ ಎಂದೇ ಹೆಸರು ಪಡೆದಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಕ್ಷಿತ ಪ್ರೇಮ್. ಇಬ್ಬರು ಸೇರಿ ಕಲಾಸಿಪಾಳ್ಯ, ಅಯ್ಯಾ, ಸುಂಟರಗಾಳಿ, ಮತ್ತು ಮಂಡ್ಯ ಒಟ್ಟು ನಾಲ್ಕು ಚಿತ್ರದಲ್ಲಿ ನಟಿಸಿದ್ದಾರೆ.

ಇವರಿಬ್ಬರ ಸ್ನೇಹದ ಬಗ್ಗೆ ಪ್ರತಿಯೊಬ್ಬರಿಗೂ ತಿಳಿದೆ ಇದೆ. ಇವರಿಬ್ಬರಲ್ಲಿ ಯಾರದ್ದೇ ಹುಟ್ಟು ಹಬ್ಬ ಇದ್ದರು ಇಬ್ಬರು ತಪ್ಪದೇ ವಿಶ್ ಮಾಡುತ್ತಾರೆ. ಇದೀಗ ರಕ್ಷಿತ ಅವರ ಹುಟ್ಟು ಹಬ್ಬಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಜೊತೆಗಿರುವ ಫೋಟೋ ಒಂದನ್ನು ಪೋಸ್ಟ್ ಮಾಡಿ “ಜನುಮ ದಿನದ ಈ ಸಂಭ್ರಮಾಚರಣೆಯ ಸವಿ ಘಳಿಗೆಯಲ್ಲಿ ನಿನ್ನ ಹೃದಯ ಬಯಸಿದ್ದು ನಿನಗೆ ಫಲಿಸಲಿ ಎಂದು ಆಶಿಸುತ್ತಾ ನೂರಾರು ವರುಷ ನೀನು ನಗು ನಗುತಾಯಿರು ಎಂದು ಹಾರೈಸುವೆ ರಕ್ಷಿತಾ ಪ್ರೇಮ್” ಎಂಬ ಕ್ಯಾಪ್ಶನ್ ಮೂಲಕ ವಿಶ್ ಮಾಡಿದ್ದಾರೆ.

ಕಳೆದ ತಿಂಗಳಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟು ಹಬ್ಬವಿದ್ದಾಗ ನಟಿ ರಕ್ಷಿತಾ ಅವರು ವಿಶ್ ಮಾಡಲು ಬಳಸಿದ್ದ ಫೋಟೊವನ್ನೇ ಇದೀಗ ದರ್ಶನ್ ಅವರು ಕೂಡಾ ಬಳಸಿದ್ದಾರೆ.

ರಕ್ಷಿತಾ ಪ್ರೇಮ್ ಅವರ ಹುಟ್ಟುಹಬ್ಬವನ್ನು ಬಹಳ ಅದ್ದೂರಿಯಾಗಿ ಮಧ್ಯರಾತ್ರಿ ನಿರ್ದೇಶಕ ಪ್ರೇಮ್ ಆಚರಿಸಿದ್ದು, ಕುಟುಂಬ ಹಾಗೂ ಸ್ನೇಹಿತರ ಜೊತೆ ಕೇಕ್ ಕತ್ತರಿಸಿ ಹುಟ್ಟು ಹಬ್ಬವನ್ನು ಸಂಭ್ರಮಿಸಿದ್ದಾರೆ. ಹುಟ್ಟು ಹಬ್ಬ ಆಚರಣೆಯ ಫೋಟೋ ಸಮಾಜಿಕ ಜಾಲತಾಣದಲ್ಲಿ ಎಲ್ಲೆಡೆ ಹರಿದಾಡುತ್ತಿದೆ.