Home Interesting Big Auction: ಸ್ಟಾರ್ ನಟ ತಿಂದು ಉಗುಳಿದ ಚೂಯಿಂಗ್ ಗಮ್ ಹರಜಾದ ಬೆಲೆ ಕೇಳಿದರೆ ಶಾಕ್...

Big Auction: ಸ್ಟಾರ್ ನಟ ತಿಂದು ಉಗುಳಿದ ಚೂಯಿಂಗ್ ಗಮ್ ಹರಜಾದ ಬೆಲೆ ಕೇಳಿದರೆ ಶಾಕ್ ಆಗೋದು ಗ್ಯಾರಂಟಿ!

Big Auction, Chewing gum

Hindu neighbor gifts plot of land

Hindu neighbour gifts land to Muslim journalist

Chewing gum : ಕೆಲವೊಂದು ಕಹಾನಿ ಕೇಳಿದಾಗ ಅಚ್ಚರಿಯಾಗುತ್ತದೆ. ಸಾಮಾನ್ಯವಾಗಿ ಸ್ಟಾರ್ ಗಳು ಬಳಕೆ ಮಾಡಿದ ವಸ್ತುಗಳು ದುಬಾರಿ ಬೆಲೆಗೆ ಹರಾಜು ಆಗೋದು ಸಹಜ. ಹಾಗೆಂದ ಮಾತ್ರಕ್ಕೆ ಬಟ್ಟೆ, ಬಳಕೆ ಮಾಡಿದ ವಸ್ತುಗಳು ಕೋಟಿಗಟ್ಟಲೇ ರೂಪಾಯಿಗೆ ಮಾರಾಟವಾಗುತ್ತದೆ. ಆದರೆ, ನಟನೊಬ್ಬ ತಿಂದು ಉಗುಳಿದ ಚೂಯಿಂಗ್ ಗಮ್ (Chewing Gum) ಹರಾಜು ಆಗಿದೆಯಂತೆ. ಅದು ಎಷ್ಟು ಬೆಲೆಗೆ ಗೊತ್ತಾ? ಕೇಳಿದರೆ ಶಾಕ್ ಆಗೋದು ಪಕ್ಕಾ!!

ಅರೇ, ಇದೇನು? ತಿಂದ ಚೂಯಿಂಗ್ (Chewing gum) ಗಮ್ ಅನ್ನು ಕೂಡ ಹರಾಜು ಮಾಡಿದ್ದಾರಾ ಎಂಬ ಅನುಮಾನ, ಗೊಂದಲ ನಿಮ್ಮನ್ನು ಕಾಡಬಹುದು. ಕೇಳಿದಾಗ ಅಚ್ಚರಿ ಎಂದೆನಿಸಿದರೂ ಕೂಡ ಸತ್ಯ. ಹಾಲಿವುಡ್ ನಟ ರಾಬರ್ಟ್ ಡೌನಿ ಜೂನಿಯರ್ (Robert Downey Jr.)(American actor) ಹೆಚ್ಚಿನ ಸಂಖ್ಯೆಯ ಅಭಿಮಾನಿಗಳನ್ನ(Fan Followers) ಹೊಂದಿದ್ದಾರೆ. ಮಾರ್ವೆಲ್ ಚಲನಚಿತ್ರಗಳಲ್ಲಿ ಟೋನಿ ಸ್ಟಾರ್ಕ್ ಇಲ್ಲವೇ ಐರನ್ ಮ್ಯಾನ್ ಪಾತ್ರಕ್ಕೆ ಈ ರಾಬರ್ಟ್ ಜೀವ ನೀಡಿದ್ದರು. ಇದೀಗ, ರಾಬರ್ಟ್ ಡೌನಿ ಜೂನಿಯರ್​ ತಿಂದು ಉಗುಳಿದ ಚೂಯಿಂಗ್​ ಗಮ್​ ಅನ್ನು ಹರಾಜಿಗೆ ಇಡಲಾಗಿದ್ದು, ಈ ಕುರಿತು ಇಬೇ ವೆಬ್​ಸೈಟ್​ನಲ್ಲಿ ಚೂಯಿಂಗ್ ಗಮ್ ಮಾರಾಟ ಮಾಡುತ್ತಿರುವ ವ್ಯಕ್ತಿ ಮಾಹಿತಿ ಹಂಚಿಕೊಂಡಿದ್ದಾರೆ.

ನಟ ರಾಬರ್ಟ್ ಸಿನಿಮಾ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದು, ಈ ಸಂದರ್ಭ ಐರನ್​ ಮ್ಯಾನ್ ಸಿನಿಮಾ ನಿರ್ದೇಶಕರಿಗೆ ಸನ್ಮಾನ ಮಾಡಿ ಸ್ಟಾರ್​ ಚಿತ್ರವಿರುದ ಚಿತ್ರಪಟವನ್ನು ನೀಡಲಾಗಿದೆ. ಈ ಸಂದರ್ಭ ನಟ ರಾಬರ್ಟ್ ತಮ್ಮ ಬಾಯಲ್ಲಿದ್ದ ಚೂಯಿಂಗ್​ ಗಮ್​ ಅನ್ನು ಆ ಚಿತ್ರಪಟದ ಮೇಲೆ ಉಗುಳಿದ್ದು, ಆ ಚೂಯಿಂಗ್ ಗಮ್ ಸದ್ಯ ಚಿತ್ರಪಟದಲ್ಲೇ ಉಳಿದಿದೆಯಂತೆ. ಈ ಚಿತ್ರಪಟದಲ್ಲಿರುವ ಚೂಯಿಂಗ್​ ಗಮ್​ ಅನ್ನು ಹರಾಜಿಗೆ (Big Auction)ಇಡಲಾಗಿತ್ತು. ಸಾಮಾನ್ಯವಾಗಿ ಯಾರು ಹೆಚ್ಚು ಬಿಡ್ ಮಾಡುತ್ತಾರೋ ಅವರಿಗೆ ಈ ಚ್ಯೂಯಿಂಗ್ ಗಮ್ ಅನ್ನು ಒಂದು ಸಿಲ್ವರ್​ ಕಂಟೇನರ್​ನಲ್ಲಿ ಹಾಕಿ ನೀಡಲಾಗುತ್ತದೆ.

ಸದ್ಯ, ಈ ಚ್ಯೂಯಿಂಗ್ ಗಮ್ $4000 ಸಾವಿರ ಅಂದ್ರೆ ಭಾರತದ ಕರೆನ್ಸಿ ಪ್ರಕಾರ 4 ಲಕ್ಷದಿಂದ ಈ ಬಿಡ್​ ಶುರುವಾಗಲಿದೆ ಎಂದು ಇಬೇ ಬಳಕೆದಾರರು ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.ಸದ್ಯಕ್ಕೆ ಈ ಚಿತ್ರಪಟದಲ್ಲಿರುವ ಚೂಯಿಂಗ್​ ಗಮ್​ ಅನ್ನು ಹರಾಜಿಗೆ ಇಟ್ಟಿದ್ದು, ಬರೋಬ್ಬರಿ 4 ಲಕ್ಷದಿಂದ ಈ ಬಿಡ್​ ಅರಂಭವಾಗಿದ್ದು, ಈ ಸುದ್ದಿ ಕೇಳಿದಾಗ ಯಾರಿಗಾದರೂ ಸರಿ ಆಶ್ಚರ್ಯ ಆಗದೇ ಇರಲು ಸಾಧ್ಯವೇ ಇಲ್ಲ.