Blue Adhar : ನಿಮಗೆ ‘ಬ್ಲೂ ಆಧಾರ್’ ಬಗ್ಗೆ ಗೊತ್ತಿದೆಯೇ? ಇದರ ಪ್ರಯೋಜನ ತಿಳಿಯಿರಿ!
Blue Aadhaar Card : 12 ಅಂಕಿಗಳ ವಿಶಿಷ್ಟ ಗುರತಿನ ಸಂಖ್ಯೆಯೇ ಆಧಾರ್ ಸಂಖ್ಯೆಯಾಗಿದ್ದು, ಇದನ್ನು ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಭಾರತದ ಜನರಿಗೆ ನೀಡುವ ದಾಖಲೆಯಾಗಿದೆ. ಬಯೋಮೆಟ್ರಿಕ್, ಡೆಮಾಗ್ರಾಫಿಕ್ ಮಾಹಿತಿ ಇದರಲ್ಲಿ ಇರುತ್ತದೆ. ವಿಶ್ವದ ಅತೀ ದೊಡ್ಡ ಬಯೋಮೆಟ್ರಿಕ್ ಐಡೆಂಟಿಫಿಕೇಷನ್ ವ್ಯವಸ್ಥೆ ಎಂದರೆ ಅದು ಆಧಾರ್ ಆಗಿದೆ (Aadhaar Card). ಸರ್ಕಾರದ ಸಬ್ಸಿಡಿ, ಹಣಕಾಸು ವಹಿವಾಟು, ಫಿಂಗರ್‌ಪ್ರಿಂಟ್ ವಿವರಗಳು, ವಿಳಾಸ, ಸಂಪರ್ಕ ವಿವರಗಳು ಮತ್ತು ಇತರ ವೈಯಕ್ತಿಕ ಮಾಹಿತಿ ಸೇರಿದಂತೆ ಬಹು ಗುರುತಿನ ಪುರಾವೆಗಳನ್ನು ಒಳಗೊಂಡಿದೆ.
ಆದರೆ, ಕೆಲವರಿಗೆ ನೀಲಿ ಆಧಾರ್ ಕಾರ್ಡ್ (Blue Aadhaar Card)ಮತ್ತು ಸಾಮಾನ್ಯ ಆಧಾರ್ ಕಾರ್ಡ್ ನಡುವೆ ಗೊಂದಲವಿದೆ. ಬ್ಲೂ ಆಧಾರ್ ಬಗ್ಗೆ ಎಂದಾದರು ಕೇಳಿರುವಿರಾ. ಏನಿದು ಬ್ಲೂ ಆಧಾರ್ ಬನ್ನಿ ನೋಡೋಣ.
ಈ ಹಿಂದೆ ನವಜಾತ ಶಿಶುಗಳಿಗೆ ಅಥವಾ 5 ವರ್ಷದೊಳಗಿನ ಮಕ್ಕಳಿಗೆ ಆಧಾರ್ ಕಾರ್ಡ್ ಸೌಲಭ್ಯ ಲಭ್ಯವಿರಲಿಲ್ಲ. 2018 ರಲ್ಲಿ, ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಮಕ್ಕಳಿಗಾಗಿ ಆಧಾರ್ ಕಾರ್ಡ್ ಅನ್ನು ಬಿಡುಗಡೆ ಮಾಡಿತು. ಅದಕ್ಕೆ ಬಾಲ್ ಆಧಾರ್ ಕಾರ್ಡ್ ಎಂದು ಹೆಸರಿಡಲಾಗಿದೆ. ಇದು ನೀಲಿ ಬಣ್ಣದಲ್ಲಿ ಲಭ್ಯವಾಗುವುದರಿಂದ ಇದನ್ನು ನೀಲಿ ಆಧಾರ್, ಬ್ಲೂ ಆಧಾರ್ ಎಂತಲೂ ಕರೆಯಲಾಗುತ್ತದೆ. ಮುಖ್ಯವಾಗಿ ಈ ಕಾರ್ಡ್ ಅನ್ನು ಮಕ್ಕಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.
ಬಾಲ್ ಆಧಾರ್ ಕಾರ್ಡ್ ವಿಶಿಷ್ಟವಾದ 12-ಅಂಕಿಯ ಗುರುತಿನ ಸಂಖ್ಯೆಯನ್ನು ಸಹ ಒಳಗೊಂಡಿದೆ ಮತ್ತು ನೀಲಿ ಛಾಯೆಯಲ್ಲಿ ಬರುತ್ತದೆ. ಅಲ್ಲದೆ , ಮಗುವಿಗೆ ಐದು ವರ್ಷ ತುಂಬಿದ ನಂತರ, ಪೋಷಕರು ಕಾರ್ಡ್ ಅನ್ನು ನವೀಕರಿಸಬೇಕು ಇಲ್ಲದಿದ್ದರೆ ಅದು ಅಮಾನ್ಯವಾಗಿರುತ್ತದೆ. ಪೋಷಕರು ತಮ್ಮ ಐದು ವರ್ಷದ ಮಗುವಿನ ಭಾವಚಿತ್ರ, ಬೆರಳಚ್ಚು ಮತ್ತು ಐರಿಸ್ ಸ್ಕ್ಯಾನ್ ಅನ್ನು ನವೀಕರಿಸಬೇಕಾಗುತ್ತದೆ.
ಮುಖ್ಯವಾಗಿ ಬಾಲ್ ಆಧಾರ್ ಕಾರ್ಡ್‌ನ ಸಿಂಧುತ್ವವು ಐದು ವರ್ಷಗಳು. ಇನ್ನು ನಿಗದಿತ ಮಾರ್ಗಸೂಚಿಗಳನ್ನು ಅನುಸರಿಸಿ ಪೋಷಕರು ಮಾನ್ಯತೆಯನ್ನು ವಿಸ್ತರಿಸಬಹುದು. ಇದನ್ನು ಮಾಡುವುದರಿಂದ, ಮಗುವಿಗೆ ಐದು ವರ್ಷ ತುಂಬಿದ ನಂತರವೂ ಬಾಲ್ ಆಧಾರ್ ಕಾರ್ಡ್ ಅನ್ನು ಮಾನ್ಯ ಐಡಿ ದಾಖಲೆ ಆಗಿ ಬಳಸಬಹುದು. ಮಕ್ಕಳು ತಮ್ಮ ಮಾಹಿತಿಯನ್ನು ತಮ್ಮ ಆಧಾರ್ ವಿವರಗಳಿಗೆ ನವೀಕರಿಸಲು ಸರ್ಕಾರವು ಯಾವುದೇ ಶುಲ್ಕವನ್ನು ವಿಧಿಸುವುದಿಲ್ಲ.
ಒಟ್ಟಿನಲ್ಲಿ ನೀಲಿ ಆಧಾರ್ ಕಾರ್ಡ್‌ಗಳು ವಯಸ್ಕರಿಗೆ ನೀಡಲಾಗುವ ಆಧಾರ್ ಕಾರ್ಡ್‌ಗಿಂತ ಸ್ವಲ್ಪ ಭಿನ್ನವಾಗಿರುತ್ತವೆ. ಈ ಆಧಾರ್ ಕಾರ್ಡ್‌ಗಳಿಗೆ ಮಗುವಿನ ಐರಿಸ್ ಮತ್ತು ಫಿಂಗರ್‌ಪ್ರಿಂಟ್ ಸ್ಕ್ಯಾನ್ ಅಗತ್ಯವಿಲ್ಲ. ಬಾಲ್ ಆಧಾರ್ ಕಾರ್ಡ್ ಅನ್ನುಪರಿಶೀಲಿಸಲು, ಪೋಷಕರಲ್ಲಿ ಒಬ್ಬರು ತಮ್ಮ ಮೂಲ ಆಧಾರ್ ಕಾರ್ಡ್ ಮತ್ತು ಮಕ್ಕಳ ಅಧಿಕೃತ ಜನನ ಪ್ರಮಾಣಪತ್ರವನ್ನು ಒದಗಿಸಬೇಕಾಗುತ್ತದೆ.