Post Office : ಪೋಸ್ಟ್ ಆಫೀಸ್ ಪಬ್ಲಿಕ್ ಪ್ರಾವಿಡೆಂಟ್ ಫಂಡ್ : ಸೇಫ್ ಆಗಿ ನಿಮ್ಮ ಹಣ ಡಬಲ್ ಮಾಡೋ ಈ ಸ್ಕೀಮ್ ಬಗ್ಗೆ ಇಲ್ಲಿದೆ ನೋಡಿ
Post Office Provident Fund : ಉಳಿತಾಯ ಎಂಬುದು ಮನುಷ್ಯನ ಅವಿಭಾಜ್ಯ ಅಂಗವೆಂದರೆ ತಪ್ಪಾಗಲಾರದು ಯಾಕಂದ್ರೆ ಇಂದಿನ ದುಬಾರಿ ದುನಿಯಾದಲ್ಲಿ ಉಳಿತಾಯ ಎಂಬುದು ಇಲ್ಲದೆ ಹೋದರೆ ಬದುಕೆ ಕಷ್ಟ ಎನ್ನುವ ಮಟ್ಟಿಗೆ ತಲುಪಿದೆ ಇಂತಹ ಹೂಡಿಕೆಗಾಗಿ ಹಲವು ಯೋಜನೆಗಳು ಕೂಡ ಜಾರಿಯಲ್ಲಿದೆ ಹಣ ಸುರಕ್ಷಿತವಾಗಿರುವುದರ ಜೊತೆಗೆ ಕಡಿಮೆ ಹೂಡಿಕೆ ಮಾಡಿ ಹೆಚ್ಚಿನ ಆದಾಯ ಪಡೆಯುವಂತಹಹಲವು ಯೋಜನೆಗಳು ಪೋಸ್ಟ್ ಆಫೀಸ್ನಲ್ಲಿವೆ.
ಪೋಸ್ಟ್ ಆಫೀಸ್ ನ ಉತ್ತಮ ಯೋಜನೆಗಳಲ್ಲಿ ಹಲವು ಯೋಜನೆಗಳು ಸೇರಿಕೊಂಡಿದೆ. ಅಂತಹುದೇ ಸ್ಕೀಮ್ಗಳಲ್ಲೊಂದು ಪೋಸ್ಟ್ ಆಫೀಸ್ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (Post Office Provident Fund). ಇದು ದೀರ್ಘಾವಧಿ ಸಮಯದವರೆಗೆ ಹಣ ಉಳಿತಾಯ ಮಾಡಲು ಹಾಗೂ ಹೆಚ್ಚಿನ ಆದಾಯ ಗಳಿಸಲು ಈ ಸ್ಕೀಮ್ ಸೂಕ್ತವಾಗಿದೆ.
ಈ ಹೂಡಿಕೆಯ ಮೊತ್ತಕ್ಕೆ ಭದ್ರತೆ ಸುರಕ್ಷತೆ ಇದ್ದೇ ಇರುತ್ತದೆ. ಹಾಗೆಯೇ ಮಾರುಕಟ್ಟೆಯ ಯಾವುದೇ ಏರಿಳಿತಗಳು ಈ ಯೋಜನೆಯ ಮೇಲೆ ಪರಿಣಾಮ ಬೀರುವುದಿಲ್ಲ. ಯೋಜನೆಯ ಬಡ್ಡಿದರಗಳನ್ನು ಸರ್ಕಾರವು ನಿಗದಿಪಡಿಸುತ್ತದೆ ಮತ್ತು ತ್ರೈಮಾಸಿಕವನ್ನು ಪರಿಶೀಲಿಸುತ್ತದೆ. ಪ್ರಸ್ತುತ, ಪಿಪಿಎಫ್ನಲ್ಲಿ ಶೇಕಡಾ 7.1 ಬಡ್ಡಿಯನ್ನು ಪಡೆಯಲಾಗುತ್ತಿದೆ.
ಖಾತೆಯ ಮುಕ್ತಾಯ ಅವಧಿಯು 15 ವರ್ಷಗಳು. ಆದರೆ ಮುಕ್ತಾಯದ ನಂತರ, ಸೌಲಭ್ಯವನ್ನು ಐದು ವರ್ಷಗಳವರೆಗೆ ವಿಸ್ತರಿಸಬಹುದು. ಪ್ರತಿ ವಿಸ್ತರಣೆಯ ಕೊನೆಯಲ್ಲಿ ಜನರು ತಮ್ಮ ಮೆಚುರಿಟಿ ಅವಧಿಯನ್ನು ಇನ್ನೂ ಐದು ವರ್ಷಗಳವರೆಗೆ ವಿಸ್ತರಿಸಲು ಆಯ್ಕೆ ಮಾಡಬಹುದು.
ಖಾತೆಯಲ್ಲಿ ತಿಂಗಳಿಗೆ 12,500 ರೂಪಾಯಿಗಳನ್ನು ಠೇವಣಿ ಮಾಡಿದರೆ ಮತ್ತು 5 ವರ್ಷಗಳ ನಂತರ ವಿತ್ ಡ್ರಾ ಮಾಡಿದರೆ, ಒಟ್ಟು ಆದಾಯ 40.68 ಲಕ್ಷ ರೂಪಾಯಿ ಪಡೆದುಕೊಳ್ಳಬಹುದು. ಇದರಲ್ಲಿ ಒಟ್ಟು ಹೂಡಿಕೆಯು 22.50 ಲಕ್ಷ ರೂ ಆಗಿರುತ್ತದೆ, ಆದರೆ ರೂ 18.18 ಲಕ್ಷ ಆದಾಯವಾಗಿರುತ್ತದೆ. ವಾರ್ಷಿಕ ಶೇ.7.1ರಷ್ಟು ಬಡ್ಡಿದರ ಎಂಬ ಲೆಕ್ಕಾಚಾರವನ್ನು ಆಧರಿಸಿ ಈ ಮೊತ್ತವನ್ನು ಉಲ್ಲೇಖಿಸಲಾಗಿದೆ.