Plant : ಈ ‘ಗಿಡ’ಗಳನ್ನು ಮನೆಯಲ್ಲಿ ಬೆಳೆಸಿ ಧೂಳು ರಹಿತ ‘ಶುದ್ಧ’ ಗಾಳಿ ಪಡೆದು ಆರೋಗ್ಯವಂತರಾಗಿ!!

Plants : ಆಧುನಿಕ ಯುಗದಲ್ಲಿ ಎಲ್ಲವೂ ಕಲಬೆರಕೆ ತುಂಬಿದ ಉತ್ಪನ್ನಗಳಾಗಿವೆ. ಇನ್ನು ನಾವು ಉಸಿರಾಡುವ ಗಾಳಿಯು ಕೂಡ ಧೂಳು, ರಾಸಾಯನಿಕಗಳು ಸೇರಿದಂತೆ ವಿವಿಧ ಹಾನಿಕಾರಕ ಕಣಗಳನ್ನು ಹೊಂದಿದೆ. ಸದ್ಯ ವರ್ಷಗಳು ಕಳೆದಂತೆ ನಮ್ಮ ಸುತ್ತಮುತ್ತಲೂ ಮರಗಳ ಸಂಖ್ಯೆ ಕಡಿಮೆಯಾಗುತ್ತಿವೆ. ಮರಗಳು ಕಡಿಮೆಯಾದಂತೆ ಶುದ್ಧ ಗಾಳಿ ಪ್ರಮಾಣವೂ ಕಡಿಮೆಯಾಗುತ್ತಿದೆ. ಶುದ್ಧ ಗಾಳಿಯ ಅಭಾವದಿಂದ ಹಲವು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಈ ಸಮಸ್ಯೆಗಳಿಂದ ದೂರವಾಗಲು ಒಂದು ಮಾರ್ಗವೆಂದರೆ ಮನೆಯಲ್ಲಿ ಶುದ್ಧವಾದ ಗಾಳಿ ಕೊಡುವ ಗಿಡಗಳನ್ನು (Plants) ಬೆಳೆಸುವುದು. ಹೌದು ಮನೆ ಒಳಗಡೆ ಕೆಲವೊಂದು ಗಿಡಗಳನ್ನು ನೆಡುವುದರಿಂದ ಶುದ್ಧ ಗಾಳಿಯನ್ನು ಪಡೆಯಬಹುದು.

ಗಾಳಿಯಿಂದ ಧೂಳನ್ನು ತೆಗೆದುಹಾಕುವಲ್ಲಿ ನಿರ್ದಿಷ್ಟವಾಗಿ ಪರಿಣಾಮಕಾರಿ ಎಂದು ಗುರುತಿಸಲಾದ ಕೆಲವು ನಿರ್ದಿಷ್ಟ ಗಿಡಗಳನ್ನು ಇಲ್ಲಿ ತಿಳಿಸಲಾಗಿದೆ.

ಹಾವಿನ ಗಿಡ(ಸ್ನೇಕ್ ಸಸ್ಯಗಳು):
ಸಾನ್ಸೆವೇರಿಯಾ ಎಂದೂ ಕರೆಯಲ್ಪಡುವ ಹಾವಿನ ಸಸ್ಯಗಳು ಗಾಳಿಯನ್ನು ಶುದ್ಧೀಕರಿಸುವ ಗುಣಗಳನ್ನು ಹೊಂದಿವೆ. ಇವು ಮನೆಯ ಉತ್ಪನ್ನಗಳಾದ ಕ್ಲೀನಿಂಗ್ ಏಜೆಂಟ್‌ಗಳು, ಪೇಂಟ್‌ಗಳು ಮತ್ತು ಪ್ಲಾಸ್ಟಿಕ್‌ಗಳಲ್ಲಿ ಕಂಡುಬರುವ ಹಾನಿಕಾರಕಗಳನ್ನು ತೊಡೆದು ಹಾಕುತ್ತವೆ.

ಸ್ಪೈಡರ್ ಸಸ್ಯ :
ಕ್ಲೋರೊಫೈಟಮ್ ಕೊಮೊಸಮ್ ಎಂದೂ ಕರೆಯಲ್ಪಡುವ ಸ್ಪೈಡರ್ ಸಸ್ಯಗಳು ಗಾಳಿಯನ್ನು ಶುದ್ಧೀಕರಿಸಲು ಸಹಾಯ ಮಾಡುವ ಸಸ್ಯಗಳಾಗಿವೆ. ಆಲಂಕಾರಿಕ ಗಿಡವಾಗಿರುವ ಸ್ಪೈಡರ್‌ ಪ್ಲಾಂಟ್‌ ಮನೆ ಅಂದವನ್ನು ಹೆಚ್ಚಿಸುವುದರೊಂದಿಗೆ ಮನೆ ತುಂಬಾ ಶುದ್ಧ ಗಾಳಿಯನ್ನು ನೀಡುತ್ತದೆ. ಈ ಗಿಡವನ್ನು ಮನೆಯ ಒಳಗಡೆ ಇಟ್ಟರೆ ಸಾಕು ಕಡಿಮೆ ಸೂರ್ಯನ ಬೆಳಕಿನಲ್ಲಿಯೂ ದ್ಯುತಿ ಸಂಶ್ಲೇಷಣೆ ಕ್ರಿಯೆ ನಡೆಸುವುದರಿಂದ ಶುದ್ಧಗಾಳಿ ನೀಡುತ್ತದೆ.

ತುಳಸಿ
ಸನಾತನ ಸಂಸ್ಕೃತಿಯಲ್ಲಿ ಮಹತ್ವ ಸ್ಥಾನ ಹೊಂದಿರುವ, ಅನೇಕ ಆರೋಗ್ಯಕಾರ ಅಂಶಗಳನ್ನು ಹೊಂದಿರುವ ತುಳಸಿಯೂ ಶುದ್ಧ ಗಾಳಿಯನ್ನು ನೀಡುತ್ತದೆ. ಇಂಗಾಲದ ಡಯಾಕ್ಸೆ„ಡ್‌, ಕಾರ್ಬನ್‌ ಮಾನಾಕ್ಸೆ„ಡ್‌ಗಳನ್ನು ಹೀರಿಕೊಂಡು ಆಮ್ಲಜನಕವನ್ನು ಹೊರ ಸೂಸುತ್ತದೆ.

ಆರ್ಕಿಡ್ಗಳು :
ಆರ್ಕಿಡ್ಗಳು ನಿಮ್ಮ ಮಲಗುವ ಕೋಣೆಯ ಮೂಲೆಯಲ್ಲಿ ಇಡಲು ಸೂಕ್ತವಾದ ಆಯ್ಕೆಯಾಗಿದೆ. ಇವು ಶುದ್ಧವಾದ ಗಾಳಿಯನ್ನು ನೀಡಲು ತುಂಬಾನೇ ಉಪಯುಕ್ತವಾಗಿದೆ.

ಪೀಸ್ ಲಿಲ್ಲಿ :
ಪೀಸ್ ಲಿಲ್ಲಿಗಳು, ಸ್ಪಾತಿಫಿಲಮ್ ಎಂದೂ ಕರೆಯಲ್ಪಡುವ ನೆ ಗಿಡಗಳು ಕೂಡ ಗಾಳಿಯಿಂದ ಹಾನಿಕಾರಕ ಮಾಲಿನ್ಯಕಾರಕಗಳನ್ನು ತೆಗೆದುಹಾಕುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿವೆ. ಶುಚಿಗೊಳಿಸುವ ಏಜೆಂಟ್‌ಗಳು, ಪೀಠೋಪಕರಣಗಳು ಮತ್ತು ಕಾರ್ಪೆಟ್‌ಗಳಂತಹ ಮನೆಯ ಉತ್ಪನ್ನಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಫಾರ್ಮಾಲ್ಡಿಹೈಡ್, ಬೆಂಜೀನ್ ಮತ್ತು ಟ್ರೈಕ್ಲೋರೋಎಥಿಲೀನ್ ಅನ್ನು ತೆಗೆದುಹಾಕುವಲ್ಲಿ ಪರಿಣಾಮಕಾರಿಯಾಗಿವೆ.

ಬೋಸ್ಟನ್ ಜರೀಗಿಡಗಳು :
ನೆಫ್ರೊಲೆಪಿಸ್ ಎಕ್ಸಾಲ್ಟಾಟಾ ಎಂದೂ ಕರೆಯಲ್ಪಡುವ ಬೋಸ್ಟನ್ ಜರೀಗಿಡಗಳ ಎಲೆಗಳು ಮತ್ತು ಗಾಳಿಯನ್ನು ಶುದ್ಧೀಕರಿಸುವ ಸಾಮರ್ಥ್ಯಗಳಿಗೆ ಹೆಸರುವಾಸಿಯಾದ ಸಸ್ಯಗಳಾಗಿವೆ. ಮನೆಯ ಶುಚಿಗೊಳಿಸುವ ಉತ್ಪನ್ನಗಳು, ಬಣ್ಣಗಳು ಮತ್ತು ದ್ರಾವಕಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಮಾಲಿನ್ಯಕಾರಕಗಳನ್ನು ಪರಿಣಾಮಕಾರಿಯಾಗಿ ತೆಗೆದುಹಾಕುತ್ತವೆ. ಇವು ಎಲೆ, ಬೇರುಗಳ ಮೂಲಕ ಮಾಲಿನ್ಯಕಾರಕಗಳನ್ನು ಹೀರಿಕೊಳ್ಳುವ ಮೂಲಕ ಗಾಳಿಯನ್ನು ಶುದ್ಧೀಕರಿಸುತ್ತವೆ.

ಶತಾವರಿ :
ಆಯುರ್ವೇದಿಕ್‌ ಗಿಡವಾಗಿರುವ ಶತಾವರಿ ಶುದ್ಧ ಗಾಳಿಯನ್ನು ನೀಡುವ ಗಿಡಗಳಲ್ಲಿ ಒಂದಾಗಿದೆ. ಇದು ಗಾಳಿಯಲ್ಲಿ ರುವ ಬ್ಯಾಕ್ಟಿರಿಯಾ, ಸೋಂಕಾಣುಗಳನ್ನು ನಾಶಮಾಡುತ್ತದೆ.

ಅಲೋವೆರಾ :
ಅಲೋವೆರಾ ಔಷಧೀಯ ಗುಣಗಳು ಮತ್ತು ಉಸಿರಾಡುವ ಗಾಳಿಯನ್ನು ಶುದ್ಧೀಕರಿಸುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದೆ. ಶುಚಿಗೊಳಿಸುವ ಉತ್ಪನ್ನಗಳು, ಬಣ್ಣಗಳು ಮತ್ತು ಪ್ಲಾಸ್ಟಿಕ್‌ಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಫಾರ್ಮಾಲ್ಡಿಹೈಡ್ ಮತ್ತು ಬೆಂಜೀನ್‌ನಂತಹ ಮಾಲಿನ್ಯಕಾರಕಗಳನ್ನು ತೆಗೆದುಹಾಕುವಲ್ಲಿ ಅಲೋವೆರಾ ವಿಶೇಷವಾಗಿ ಪರಿಣಾಮಕಾರಿಯಾಗಿದೆ.

ಇಂತಹ ಗಿಡಗಳನ್ನು ಆರೈಕೆ ಮಾಡಲು ಸುಲಭವಾಗಿದೆ. ಅದಲ್ಲದೆ ಎಲ್ಲಾ ಒಳಾಂಗಣದ ಸ್ಥಳಗಳಲ್ಲಿ ಬೆಳೆಯಬಹುದು. ಸದ್ಯ ಮನೆಯಲ್ಲಿ ಈ ರೀತಿಯ ಗಿಡಗಳನ್ನು ಬೆಳೆಸುವುದರಿಂದ ಅವುಗಳು ಇಂಗಾಲದ ಡಯಾಕ್ಸೆ„ಡ್‌, ಕಾರ್ಬನ್‌ ಮಾನಾಕ್ಸೆ„ಡ್‌ಗಳನ್ನು ಹೀರಿಕೊಂಡು ಧೂಳು ರಹಿತ ಶುದ್ಧ ಆಮ್ಲಜನಕವನ್ನು ಹೊರ ಸೂಸುತ್ತದೆ.

ಇದನ್ನೂ ಓದಿ: Ghost Town Dhanushkoti : ಧನುಷ್ಕೋಟಿ ಎಂಬ ಈ ನಗರ ಘೋಸ್ಟ್ ಟೌನ್ ಗೆ ಪ್ರಖ್ಯಾತಿ! ಯಾಕೆ? ಇಲ್ಲಿದೆ ಕಾರಣ!

Leave A Reply

Your email address will not be published.