Health Tips : ಬಸಳೆ ಸೊಪ್ಪಿನ ಅದ್ಭುತ ಪ್ರಯೋಜನ ನೀವೊಮ್ಮೆ ತಿಳಿಯಲೇ ಬೇಕು!
Basale leaf : ಬಸಳೆ ಸೊಪ್ಪು (Basale leaf )ಸದಾ ಕಾಲ ಹಚ್ಚ ಹಸಿರಿನಿಂದ ಕಂಗೊಳಿಸುವ ಬಳ್ಳಿಯಾಗಿದ್ದು, ಸುಮಾರು 9 ಮೀಟರ್ ಎತ್ತರ ಬೆಳೆಯಬಲ್ಲದು. ಬಸಳೆ ಬಳ್ಳಿಯ ಎಲೆಗಳು ನೋಡಲು ವೀಳ್ಯದ ಎಲೆಗಳಂತೆ ಇದ್ದು 3 ರಿಂದ 9 ಸೆಂಟಿಮೀಟರ್ ಅಗಲ ಹೊಂದಿರುತ್ತವೆ.
ಬಸಳೆ ತುಂಬಾ ನೀರಿನಾಂಶ ಹೆಚ್ಚಾದಲ್ಲಿ ಇದು ಬದುಕುವ ಸಾಧ್ಯತೆ ಕಡಿಮೆ. ಹೆಚ್ಚು ನೀರು ಬೀಳುವ ಜಾಗದಲ್ಲಿ ಇದನ್ನು ನೆಡಬಾರದು. ಬೇರೆಲ್ಲಾ ಹಸಿರು ಎಲೆ ತರಕಾರಿಗಳನ್ನು ಮೀರಿಸುವಂತಹ ಸತ್ವಗಳು ಬಸಳೆ ಸೊಪ್ಪಿನಲ್ಲಿ ಅಡಗಿವೆ. ಇದರಲ್ಲಿ ಕಡಿಮೆ ಕ್ಯಾಲೋರಿ ಅಂಶವಿದ್ದು, ವಿಟಮಿನ್ ‘ ಎ ‘, ವಿಟಮಿನ್ ‘ ಸಿ ‘, ವಿಟಮಿನ್ ‘ ಬಿ9 ‘, ಕಬ್ಬಿಣ, ಕ್ಯಾಲ್ಸಿಯಂ, ತಾಮ್ರ, ಮೆಗ್ನೀಷಿಯಂ, ಪೋಸ್ಫ್ಯಾರಸ್, ಪೊಟ್ಯಾಸಿಯಂ ಮತ್ತು ಇನ್ನಿತರ ಖನಿಜ ಸತ್ವಗಳನ್ನು ಹೊಂದಿದೆ. ಬನ್ನಿ ಬಸಳೆಯ ಅದ್ಭುತ ಪ್ರಯೋಜನಗಳನ್ನು ತಿಳಿಯೋಣ.
ರಕ್ತಹೀನತೆ ಸಮಸ್ಯೆ ನಿವಾರಣೆ ಮಾಡುತ್ತದೆ : ಬಸಳೆ ಸೊಪ್ಪಿನಲ್ಲಿ ಕಬ್ಬಿಣದ ಅಂಶವು ಹೇರಳವಾಗಿದೆ. ದೇಹದಲ್ಲಿ ಕಬ್ಬಿಣ ಅಂಶ ಹೆಚ್ಚಿದಷ್ಟು ರಕ್ತಹೀನತೆಯ ಸಮಸ್ಯೆಯನ್ನು ತಡೆಯುತ್ತದೆ. ದೇಹದಲ್ಲಿ ನಿಶಕ್ತಿ ತಡೆಗೆ ಕಬ್ಬಿಣ ಅಂಶ ಸಹಕಾರಿ
ಕಣ್ಣುಗಳ ಸಮಸ್ಯೆ ನಿವಾರಣೆ :
ಬಸಳೆ ಸೊಪ್ಪು ಕಣ್ಣಿನ ಪೊರೆ, ವಯಸ್ಸಿಗೆ ಸಂಬಂಧಿಸಿದ ಮ್ಯಾಕ್ಯುಲರ್ ಡಿಜೆನರೇಶನ್ ಮತ್ತು ಇತರ ಕಣ್ಣಿನ ಸಮಸ್ಯೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಇದರಲ್ಲಿರುವ ವಿಟಮಿನ್ ಎ ಸಾಮಾನ್ಯ ದೃಷ್ಟಿಗೆ ಅಗತ್ಯವಾದ ಲೋಳೆಯ ಪೊರೆಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.
ಬಾಯಿ ಹುಣ್ಣು ನಿವಾರಣೆ : ಬಸಳೆ ಎಲೆಯನ್ನು ಹಸಿಯಾಗಿ ತಿನ್ನುವುದರಿಂದ ಬೇಸಿಗೆ ಉಷ್ಣದಿಂದ ಆಗುವ ಬಾಯಿ ಹುಣ್ಣನ್ನು ಕಡಿಮೆ ಮಾಡುತ್ತದೆ.
ಹೀಮೋಸಿಸ್ಟಿನ್ ಅಂಶ ನಿಯಂತ್ರಣ : ಬಸಳೆ ಸೊಪ್ಪಿನಲ್ಲಿ ಫೋಲೇಟ್ ಅಂಶ ಹೆಚ್ಚಿರುವುದರಿಂದ ರಕ್ತದಲ್ಲಿನ ಹಿಮೋಸಿಸ್ಟಿನ್ ಅಂಶವನ್ನು ನಿಯಂತ್ರಿಸುತ್ತದೆ. ಈ ಹೀಮೋಸಿಸ್ಟಿನ್ ಅಂಶವು ಹಾರ್ಟ್ ಅಟ್ಯಾಕ್ ಗೆ ಹೆಚ್ಚು ಕಾರಣವಾಗುತ್ತದೆ.
ಮಾನಸಿಕ ಖಿನ್ನತೆ ನಿವಾರಣೆ : ಫೋಲೇಟ್ ಸಾರವು ಮನಸ್ಸಿನ ಮೇಲೆ ಹೆಚ್ಚು ಪ್ರಭಾವಿತವಾಗಲು ಕಾರಣವಾಗುತ್ತದೆ ಆದ್ದರಿಂದ ಪ್ರತಿನಿತ್ಯ ಬಸಳೆ ಸೊಪ್ಪನ್ನು ಸೇವಿಸುವುದರಿಂದ ಮಾನಸಿಕ ಒತ್ತಡವನ್ನು ಕಡಿಮೆಮಾಡುತ್ತದೆ. ಬಸಳೆ ಸೊಪ್ಪನ್ನು ನಿಯಮಿತವಾಗಿ ಸೇವಿಸುವುದರಿಂದ ಪ್ರತಿ ದಿನದ ಕೆಲವು ಕ್ಲಿಷ್ಟಕರ ಅನುಭವಗಳಿಂದ ಉಂಟಾಗುವ ಮಾನಸಿಕ ಖಿನ್ನತೆ ಮತ್ತು ಆತಂಕ ಯಾವುದೇ ಔಷಧಿಗಳಿಲ್ಲದೆ ದೂರವಾಗಬಲ್ಲದು.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ:
ಬಸಳೆ ಸೊಪ್ಪಿನಲ್ಲಿ ಕಂಡುಬರುವ ವಿಟಮಿನ್ ಎ ಅಂಶವು ಮಾನವ ದೇಹದಲ್ಲಿನ ಉಸಿರಾಟ, ಕರುಳುಗಳು ಮತ್ತು ಲೋಳೆಯ ಪೊರೆಗಳನ್ನು ಬಲಪಡಿಸುತ್ತದೆ ಎಂದು ಹೇಳಲಾಗುತ್ತದೆ. ಆದ್ದರಿಂದ ನೀವು ಪ್ರತಿದಿನ ಒಂದು ಕಪ್ ಬಸಳೆ ಸೊಪ್ಪನ್ನು ಸೇವಿಸುವುದರಿಂದ ಆರೋಗ್ಯವಾಗಿರಬಹುದು.
ಕಬ್ಬಿಣದ ಅಂಶ ಹೆಚ್ಚಿಸುತ್ತದೆ : ದೇಹದಲ್ಲಿ ಕಬ್ಬಿಣದ ಅಂಶದ ಕೊರತೆ ಇದ್ದರೆ, ಅದರ ಪರಿಣಾಮವಾಗಿ ಅನೇಕ ರೋಗಗಳು ದೇಹಕ್ಕೆ ಅವಾರಿಸುತ್ತವೆ. ಆದ್ದರಿಂದ ಕಬ್ಬಿಣ ಅಂಶ ಹೆಚ್ಚಿಸಲು ಬಸಳೆ ಸೊಪ್ಪು ಸಹಕಾರಿ.
ಸ್ನಾಯುಗಳ ಬಲ ಹೆಚ್ಚಿಸುತ್ತದೆ : ಬಸಳೆ ಸೊಪ್ಪುನ್ನು ಆಹಾರದಲ್ಲಿ ಹೆಚ್ಚಾಗಿ ಬಳಸುವುದರಿಂದ ದೇಹದ ಸ್ನಾಯುಗಳನ್ನು ಸಧೃಡವಾಗಿಸಲು ಸಹಕರಿಸುತ್ತದೆ. ಮೂಳೆಗಳ ಆರೋಗ್ಯಕ್ಕೆ ಹೆಚ್ಚು ಉಪಯೋಗವಾಗಿದೆ.
ಕ್ಯಾನ್ಸರ್ ನಿಯಂತ್ರಣ : ಬಸಳೆ ಸೊಪ್ಪು ನಿಮ್ಮ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಹೆಚ್ಚಿಸುತ್ತದೆ. ಕ್ಯಾನ್ಸರ್ ತಡೆಯುವಲ್ಲಿ ಇದು ತುಂಬಾನೆ ಸಹಕಾರಿಯಾಗಿದೆ..ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಮಧುಮೇಹದ ನಿಯಂತ್ರಣದಲ್ಲೂ ಸಹಕಾರಿಯಾಗಿದೆ.
ರಕ್ತದೊತ್ತಡ ನಿಯಂತ್ರಣ : ರಕ್ತದೊತ್ತಡ ಸಮಸ್ಯೆಯಿಂದ ಬಳಲುವವರಿಗೆ ಬಸಳೆ ಸೊಪ್ಪು ಪ್ರಯೋಜನವಾಗಿದೆ. ಇದರಲ್ಲಿರುವ ಪೊಟ್ಯಾಶಿಯಂ ಅಂಶವು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.
ತೂಕ ಇಳಿಕೆಗೆ ಸಹಕಾರಿ : ಬಸಳೆ ಕಡಿಮೆ ಕ್ಯಾಲೋರಿಗಳನ್ನು ಹೊಂದಿದ್ದು, ಹಾಗೂ ಹೆಚ್ಚು ಫೈಬರ್ ಅಂಶವನ್ನು ಹೊಂದಿದೆ. ಇದರಲ್ಲಿನ ಫೈಬರ್ ಅಂಶವು ಉತ್ತಮ ಜೀರ್ಣಕ್ರಿಯೆಗೆ ಸಹಕರಿಸುತ್ತದೆ.
ಸೌಂದರ್ಯಕ್ಕೂ ಪ್ರಯೋಜನ :
ಬಸಳೆ ಆರೋಗ್ಯಕ್ಕೆ ಮಾತ್ರವಲ್ಲದೇ ಸೌಂದರ್ಯಕ್ಕೂ ಪ್ರಯೋಜನವಾಗಿದೆ. ಸೌಂದರ್ಯ ಬಯಸುವ ಯುವತಿಯರು ಇದನ್ನು ಸೇವಿಸಬಹುದು ಅಥವಾ ಬಸಳೆ ಸೊಪ್ಪನ್ನು ಅರೆದು ಪೇಸ್ಟ್ ರೀತಿ ಮಾಡಿ ಮುಖಕ್ಕೆ ಫೇಸ್ ಮಾಸ್ಕ್ ಆಗಿ ಬಳಸಬಹುದು. ಬಸಳೆ ಸೊಪ್ಪನ್ನು ಪೇಸ್ಟ್ ಮಾಡಿ ಅದಕ್ಕೆ ಸ್ವಲ್ಪ ನೀರು ಸೇರಿಸಿ ಮುಖಕ್ಕೆ ಮಾಸ್ಕ್ ರೀತಿ ಬಳಸಬಹುದು. 20 ನಿಮಿಷಗಳ ನಂತರ ಮುಖ ತೊಳೆದರೆ ಮುಖದ ಕಾಂತಿ ಹೆಚ್ಚುತ್ತದೆ. ಇದು ನಿಮ್ಮ ಚರ್ಮದಲ್ಲಿನ ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಮೊಡವೆಗೆ ಕಾರಣವಾಗುವ ಕೊಳೆ ಮತ್ತು ಹೆಚ್ಚುವರಿ ಎಣ್ಣೆಯನ್ನು ತೆಗೆದುಹಾಕುತ್ತದೆ.
ಗರ್ಭಿಣಿಯರಿಗೆ ಸಹಕಾರಿ : ಗರ್ಭಿಣಿ ಮಹಿಳೆಯರು ತಮ್ಮ ಗರ್ಭಾವಸ್ಥೆಯ ಸಮಯದಲ್ಲಿ ನಿತ್ಯ ನಿಯಮಿತವಾಗಿ ವೈದ್ಯರ ಸೂಚನೆಯ ಮೇರೆಗೆ ಬಸಳೆ ಸೊಪ್ಪನ್ನು ಸೇವಿಸುವ ಅಭ್ಯಾಸ ಇಟ್ಟುಕೊಂಡರೆ ಎಲ್ಲ ವಿಧದಲ್ಲೂ ಒಳ್ಳೆಯದು.
ಒಟ್ಟಿನಲ್ಲಿ ಬಸಳೆ ಸೊಪ್ಪಿನ ಉಪಯೋಗಗಳು ಹತ್ತು ಹಲವಾರು ಇವೆ. ನೀವು ಬಸಳೆ ಸೇವಿಸುವ ಮೂಲಕ ಈ ಎಲ್ಲಾ ಪ್ರಯೋಜನ ಪಡೆಯಬಹುದು.