Vivo Foldable Phone : Samsung-Oppo ನಂತರ ಈಗ ವಿವೋದಿಂದ ಮುಂದಿನ ತಿಂಗಳು ಬಿಡುಗಡೆಯಾಗಲಿದೆ ಫೋಲ್ಡೇಬಲ್ ಫೋನ್!
Vivo X Fold 2 : ದೊಡ್ಡ ಸ್ಮಾರ್ಟ್‌ಫೋನ್ ಕಂಪನಿಗಳು ಈಗ ಫೋಲ್ಡೇಬೆಲ್ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ತಂದಿದೆ. ಇದರ ಬೆನ್ನಲ್ಲೇ ಅನೇಕ ಕಂಪನಿಗಳು ತಮ್ಮ ಹೊಸ ಫೋಲ್ಡೇಬಲ್ ಸ್ಮಾರ್ಟ್‌ಫೋನ್ ಅನ್ನು ತರಲು ತಯಾರಿ ನಡೆಸುತ್ತಿವೆ. ಇವುಗಳಲ್ಲಿ ವಿವೋ ಕೂಡ ಸೇರಿದೆ. ವಿವೋ ತನ್ನ ಹೊಸ ಫೋಲ್ಡೇಬಲ್ ಸ್ಮಾರ್ಟ್‌ಫೋನ್ ಅನ್ನು ತರಲಿದೆ ಎಂದು ಬಹಳ ದಿನಗಳಿಂದ ಮಾತು ಕೇಳಿ ಬರುತ್ತಿತ್ತು. ಇದಕ್ಕೆ ವಿವೋ ಎಕ್ಸ್ ಫೋಲ್ಡ್ 2 ಎಂಬ ಹೆಸರಿಡಲಾಗಿದೆ. ಈಗ ಕಂಪನಿಯು ಚೀನಾದಲ್ಲಿ ವಿವೋ ಎಕ್ಸ್ ಫೋಲ್ಡ್ 2 ಬಿಡುಗಡೆಯ ಟೀಸರ್ ಅನ್ನು ಬಿಡುಗಡೆ ಮಾಡಿದೆ. Vivo ಮಂಗಳವಾರ Weibo ನಲ್ಲಿ ಅಧಿಕೃತ ಪೋಸ್ಟ್ ಮೂಲಕ Vivo X Fold 2 ಅನ್ನು ಖಚಿತಪಡಿಸಿದೆ.
ಈ ಪೋಸ್ಟ್‌ನಲ್ಲಿ ಈ ಸ್ಮಾರ್ಟ್‌ಫೋನ್ ವಿಶೇಷತೆಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಲಾಗಿಲ್ಲ. ಏಪ್ರಿಲ್‌ನಲ್ಲಿ ಈ ಫೋಲ್ಡೇಬೆಲ್ ಸ್ಮಾರ್ಟ್‌ಫೋನನ್ನು ಲಾಂಚ್ ಮಾಡಲಾಗುತ್ತೆ ಎಂದು Vivo ದೃಢಪಡಿಸಿದೆ. ಅಥವಾ ಮುಂದಿನ ತಿಂಗಳಾದರೂ ಯಾವುದೇ ರೀತಿಯಲ್ಲಾದರೂ ಘೋಷಣೆಯಾಗಲಿದೆ.
ಇದರ ಹೊರತಾಗಿ, ವಿವೋ ಎಕ್ಸ್ ಫೋಲ್ಡ್ 2 ಇದುವರೆಗೆ ವಿವೋ ತಯಾರಿಸಿದ ಅತ್ಯಂತ ಪವರ್‌ಫುಲ್ ಸ್ಕ್ರೀನ್ ಹೊಂದಿರುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ವಿನ್ಯಾಸದ ಬಗ್ಗೆ ಹೇಳಿದರೆ, ಕಂಪನಿಯು ಅದನ್ನು ಸ್ಲಿಮ್ ಮತ್ತು ಲೈಟ್ ಆಗಿ ಇರಿಸುತ್ತದೆ. ಈ ಸ್ಮಾರ್ಟ್‌ಫೋನ್‌ನ ಇತರ ಸಂಭಾವ್ಯ ವಿಶೇಷತೆಗಳ ಹೇಳುವುದಾದರೆ, ಫೋನ್ 12GB RAM ಮತ್ತು 256GB ಇಂಟರ್‌ನಲ್ ಸ್ಟೋರೇಜ್ ಹೊಂದಿರಬಹುದು ಎಂದು ಹೇಳಲಾಗಿದೆ.
ಈ ಫೋಲ್ಡೇಬೆಲ್ ಸ್ಮಾರ್ಟ್‌ಫೋನ್ ಇತ್ತೀಚಿನ Android 13 ಆಧಾರಿತ OriginOS 13 ಅನ್ನು ಹೊಂದಿರುತ್ತದೆ ಎಂದು ನಿರೀಕ್ಷೆ ಇಡಲಾಗಿದೆ. ಈ ಫೋಲ್ಡೇಬಲ್ ಫೋನ್‌ನ ಕ್ಯಾಮೆರಾಗಳ ಕುರಿತು ಹೇಳಿದರೆ, ವರದಿಗಳ ಪ್ರಕಾರ, 50-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 12-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ ಮತ್ತು 12-ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾವನ್ನು ವಿವೋ ಎಕ್ಸ್ ಫೋಲ್ಡ್ 2 ನಲ್ಲಿ ಇರುತ್ತೆ ಎಂದು ಹೇಳಲಾಗಿದೆ. ಇದರ ಹೊರತಾಗಿ, Vivo ನ ಮುಂಬರುವ ಹೊಸ ಫೋನ್ 120W ವೇಗದ ಚಾರ್ಜಿಂಗ್ ಬೆಂಬಲ ಮತ್ತು USB ಟೈಪ್ C ಪೋರ್ಟ್‌ನೊಂದಿಗೆ 4,800mAh ಬ್ಯಾಟರಿಯನ್ನು ಪಡೆಯುವ ನಿರೀಕ್ಷೆಯಿದೆ.