Home Karnataka State Politics Updates Assembly Elections: ಎಲೆಕ್ಷನ್ ಡೇಟ್ ಅನೌನ್ಸ್ ಬೆನ್ನಲ್ಲೇ ವೈರಲ್ ಆಗ್ತಿದೆ ಉಪ್ಪಿ ಟ್ವೀಟ್, ಏನಿದೆ...

Assembly Elections: ಎಲೆಕ್ಷನ್ ಡೇಟ್ ಅನೌನ್ಸ್ ಬೆನ್ನಲ್ಲೇ ವೈರಲ್ ಆಗ್ತಿದೆ ಉಪ್ಪಿ ಟ್ವೀಟ್, ಏನಿದೆ ಅಂತಾದ್ದು?

Assembly Elections

Hindu neighbor gifts plot of land

Hindu neighbour gifts land to Muslim journalist

Assembly Elections : ಅನೇಕ ದಿನಗಳಿಂದ ರಾಜಕಾರಣಿಗಳು, ಅಧಿಕಾರಿಗಳು, ಮತದಾರರು ಒಟ್ನಲ್ಲಿ ಇಡೀ ನಾಡಿನ ಜನರು ಕಾತರದಿಂದ ಕಾದಿದ್ದ ದಿನಕ್ಕೆ ಇಂದು ಚುನಾವಣಾ ಆಯೋಗ(Election Commission) ಉತ್ತರಿಸಿದೆ. ಅಂತೂ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯ(Assembly Elections) ದಿನಾಂಕ ಘೋಷಣೆಗಾಗಿ ಮತ ಎಣಿಕೆ, ಫಲಿತಾಂಶ ಪ್ರಕಟ ದಿನಾಂಕ ಎಲ್ಲವೂ ಫಿಕ್ಸ್ ಆಗಿದೆ. ಆದರೆ ಇದರ ಬೆನ್ನಲ್ಲೇ ರಿಯಲ್ ಸ್ಟಾರ್ ಉಪೇಂದ್ರ(Upendra) ಮಾಡಿದ ಟ್ವೀಟ್ ಒಂದು ಭಾರೀ ವೈರಲ್ ಆಗ್ತಿದೆ.

ಹೌದು, ದೆಹಲಿಯ ವಿಜ್ಞಾನ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಚುನಾವಣಾ ಆಯೋಗ ಕರ್ನಾಟಕ ವಿಧಾನಸಭಾ ಎಲೆಕ್ಷನ್ ದಿನಾಂಕ ಹಾಗೂ ಇತರ ಮಾಹಿತಿಯನ್ನು ಅನೌನ್ಸ್ ಮಾಡಿದೆ.ಮೇ 10ರಂದು ರಾಜ್ಯದಲ್ಲಿ ಒಂದು ಹಂತದ ಮತದಾನ ನಡೆಯಲಿದೆ. ಮೇ 13 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

ಚುನಾವಣಾ ಡೇಟ್ ಹೊರಬೀಳುತ್ತಿದ್ದಂತೆ ಇದರ ಬಗ್ಗೆ ಕನ್ನಡದ ಖ್ಯಾತ ನಟ, ಪ್ರಜಾಕೀಯ ಪಕ್ಷದ ಸಂಸ್ಥಾಪಕ, ಜನಪರ ಯೋಜನೆಗಳ ಕುರಿತು ಅನೇಕ ಕನಸು ಕಂಡ ಕನಸುಗಾರ ಉಪೇಂದ್ರ ಟ್ವೀಟ್ ಮಾಡಿದ್ದು, ಅದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಂದಹಾಗೆ ಆ ಟ್ವೀಟ್ ಅಲ್ಲಿ ಏನಿದೆ ಅಂದ್ರೆ,
“ಕರ್ನಾಟಕದಲ್ಲಿ ಮೇ 10 ಬುಧವಾರದಂದು ಒಂದೇ ಹಂತದ ಮತದಾನ ಮತ್ತು ಮೇ 13 ಶನಿವಾರ ಫಲಿತಾಂಶ ಪ್ರಕಟ. ಮತ ಎಣಿಕೆಗೆ ಎರಡು ದಿನ ಬೇಕೆ ?! ಏಕೆಂದು ಬಲ್ಲವರು ತಿಳಿಸುತ್ತೀರಾ ? ಎಂದು ಉಪೇಂದ್ರ ಟ್ವೀಟ್ ಮಾಡಿದ್ದಾರೆ.

ಒಂದು ವಿಚಾರವನ್ನು ಹಲವರಾರು ರೀತಿಯಲ್ಲಿ ಯೋಚಿಸೋ ಉಪ್ಪಿ, ಇಂದು ಘೋಷಣೆ ಆದ ಚುನಾವಣಾ ದಿನಾಂಕದ ಕುರಿತು ಹೊಸ ಪ್ರಶ್ನೆಯೊಂದನ್ನು ಹುಟ್ಟು ಹಾಕಿದ್ದಾರೆ. ಇದು ಅಭಿಮಾನಿಗಳಿಗೆ, ನಾಡಿನ ಜನತೆಗೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಒಂದು ವೇಳೆ ಮುಂದೆ ಉಪ್ಪಿಯೇ ಇದಕ್ಕೆ ಉತ್ತರ ನೀಡಬಹುದು. ಕಾದು ನೋಡಬೇಕಿದೆ.

ಅಂದಹಾಗೆ ಅಂತೂ ವಿಧಾನಸಭಾ ಚುನಾವಣೆಯ ದಿನಾಂಕದಲ್ಲಿ ಸ್ಪಷ್ಟನೆ ಸಿಕ್ಕಿದ್ದು ಕೊನೆಗೂ ಈ ವಿಚಾರದಲ್ಲಿ ಎಲ್ಲಾ ಡೇಟ್​ಗಳ ಬಗ್ಗೆ ಸರಿಯಾದ ಚಿತ್ರಣ ಸಿಕ್ಕಿದೆ. ಇದೇ ಮೊದಲ ಬಾರಿಗೆ ರಾಜ್ಯದಲ್ಲಿ 80 ವರ್ಷ ಮೇಲ್ಪಟ್ಟ ಎಲ್ಲಾ ಹಿರಿಯ ನಾಗರಿಕರಿಗೆ (Senior Citizens) ಮನೆಯಲ್ಲೇ ಮತದಾನ ಮಾಡಲು ಕೂಡಾ ಅವಕಾಶ ನೀಡಲಾಗಿದೆ.