Defecation: ಇದೊಂದು ಅದ್ಭುತ ಶೌಚಾಲಯ! ಮಲವನ್ನೇ ಬೂದಿಯಾಗಿಸೋ ಮ್ಯಾಜಿಕ್ ಇಲ್ಲಿ ನಡೆಯುತ್ತೆ!
Defecation : ನಮ್ಮ ದೇಹಕ್ಕೆ ಪೌಷ್ಟಿಕತೆ ಮತ್ತು ಶಕ್ತಿಗಾಗಿ ಆಹಾರ ಸೇವನೆ ಮಾಡುತ್ತೇವೆ. ಹೀಗೆ ದೇಹದ ಒಳಗೆ ಸೇರಿದ ಆಹಾರ ಜೀರ್ಣವಾಗಿ ಉಳಿದ ಕಲ್ಮಶ ಮಲದ ರೂಪದಲ್ಲಿ(Defecation) ಹೊರ ಹೋಗುವುದು ಒಂದು ನೈಸರ್ಗಿಕ ಪ್ರಕ್ರಿಯೆಯಾಗಿದೆ. ಈ ನೈಸರ್ಗಿಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ಬಳಿಕವೇ ಪ್ರತಿಯೊಬ್ಬರ ದಿನಚರಿ ಆರಂಭವಾಗುತ್ತದೆ. ಆದರೇ, ಈ ಕಲ್ಮಶವನ್ನು ಪರಿಸರ ಸ್ನೇಹಿಯಾಗಿ ವಿಲೇವಾರಿ ಮಾಡಬಹುದು ಎಂದರೆ ನೀವು ನಂಬುತ್ತೀರಾ? ಹೌದು!! ಈ ರೀತಿಯ ವಿಭಿನ್ನ ಪ್ರಯೋಗ ಪ್ರಯತ್ನಕ್ಕೆ ವ್ಯಕ್ತಿಯೊಬ್ಬರು ಮುಂದಾಗಿದ್ದಾರೆ.
ಒಂದು ಹನಿ ನೀರನ್ನು(Water)ಕೂಡ ಬಳಕೆ ಮಾಡದೇ ನಿಮ್ಮ ಮಲವನ್ನು ಪರಿಣಾಮಕಾರಿಯಾಗಿ ವಿಲೇವಾರಿ ಮಾಡುವ ಪರಿಸರ ಸ್ನೇಹಿ (Eco Friendly Toilet)ಶೌಚಾಲಯ ಎಂದಾಗ ಅಚ್ಚರಿಯಾಗುವುದು ಸಹಜ. ಅರೇ, ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬ ಪ್ರಶ್ನೆ ನಿಮಗೂ ಮೂಡಿರಬಹುದು!! .ಸದ್ಯ, ನೀರಿಲ್ಲದ ಶೌಚಾಲಯವನ್ನು ಒಳಗೊಂಡಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ(Social Media) ವೈರಲ್ (Viral News) ಆಗಿ ಸದ್ದು ಮಾಡುತ್ತಿದ್ದು, ಈ ವೀಡಿಯೊವನ್ನು Instagram ಪುಟ @vanwives ನಲ್ಲಿ ಶೇರ್ (Share) ಮಾಡಲಾಗಿದೆ.
ಈ ವಿಡಿಯೋವನ್ನು ಹಂಚಿಕೊಂಡಿರುವ ಇನ್‌ಸ್ಟಾಗ್ರಾಮ್ ಪೋಸ್ಟ್ ( Instagram Post) ಮಾಡಲಾಗಿದೆ.
‘ಒಂದು ದಿನ ನೀವು ನಿಮ್ಮ ಮಲವನ್ನು ಸುಡಬಹುದು, ಅದನ್ನು ಸ್ಪರ್ಶಿಸುವ ಜೊತೆಗೆ ವಾಸನೆ ಬರುವುದಿಲ್ಲ ಎಂದು ಯಾರಾದರೂ ನಿಮಗೆ ಹೇಳುವುದನ್ನು ನೀವು ನಂಬಬಲ್ಲೀರಾ’ ಎಂದು ವೈರಲ್ ಆಗಿರುವ ವಿಡಿಯೋದಲ್ಲಿ ಭವಿಷ್ಯದ ಕುರಿತು ಪ್ರಶ್ನೆಯೊಂದಿಗೆ ಶೀರ್ಷಿಕೆ ನೀಡಲಾಗಿದೆ.
ಈ ಶೌಚಾಲಯ (Toilet)ಮಾನವನ ದೇಹದ ತ್ಯಾಜ್ಯವನ್ನು(Poop) ವಾಸನೆ ಕೂಡ ಇಲ್ಲದೆ ಬೂದಿಯಾಗಿ(Ash) ಸುಡುವ ವಿಶಿಷ್ಟತೆಯನ್ನು ಒಳಗೊಂಡಿದೆ. ಈ ಶೌಚಾಲಯವನ್ನು ಸಿಂಡರೆಲ್ಲಾ ಇನ್ಸಿನರೇಶನ್ ಟಾಯ್ಲೆಟ್ ಎಂದು ಕರೆಯಲಾಗಿದ್ದು, ಇದು ತ್ಯಾಜ್ಯವನ್ನು ಸುಡಲು ವಿಕಿರಣ ಶಾಖದ ಮೂಲಕ ಕೆಳಗಿನಿಂದ ಒತ್ತಡವನ್ನು ಸಂಯೋಜಿಸುವ ಮುಖಾಂತರ ಕಾರ್ಯನಿರ್ವಹಿಸುತ್ತದೆ. ಆ ಬಳಿಕ, ನಿಷ್ಕಾಸ ಅನಿಲಗಳನ್ನು ಫಿಲ್ಟರ್ ಮಾಡುವ ಪ್ರಕ್ರಿಯೆ ನಡೆಯಲಿದೆ.ಶೌಚಾಲಯವು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ವೈರಲ್ ಆಗಿರುವ ವೀಡಿಯೋದಲ್ಲಿ ಮಹಿಳೆಯೊಬ್ಬರು ವಿವರಣೆ ನೀಡಿದ್ದಾರೆ.
ಟಾಯ್ಲೆಟ್ ಸೀಟ್(Toilet Seat) ಅನ್ನು ತೆರೆದು, ಲೈನರ್ ಅನ್ನು ಸೇರಿಸಬೇಕು. ಈ ಪ್ರಕ್ರಿಯೆಯನ್ನು ಸಕ್ರಿಯಗೊಳಿಸಲು ಬಟನ್ ಒತ್ತಿರಿ ಎಂದು ಮಾಹಿತಿ ನೀಡಿದ್ದು, ಈ ವೀಡಿಯೊ ನೋಡಿದ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದು, ಈ ಶೌಚಾಲಯದಿಂದ ಪರಿಸರದ (Nature) ಮೇಲೆ ಹೇಗೆ ಪ್ರಭಾವ ಬೀರುವುದೋ ಎಂದು ನೆಟ್ಟಿಗರು ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ತ್ಯಾಜ್ಯವನ್ನು ಸುಡಲು ಅಗತ್ಯವಿರುವ ಶಕ್ತಿಯು ನೈಸರ್ಗಿಕ ವಿಘಟನೆಯ ಪ್ರಕ್ರಿಯೆಗಿಂತ ಹೆಚ್ಚು ಕಲುಷಿತವಾಗುವ ಕುರಿತು ಕೂಡ ನೆಟ್ಟಿಗರು ತಮ್ಮ ಸಂದೇಹದ ಬಗ್ಗೆ ಕೇಳಿದ್ದಾರೆ. ಇನ್ನೂ ಕೆಲವರು ಸುಡುವ ಪ್ರಕ್ರಿಯೆಯಿಂದ ಅನಿಲಗಳು ಎಲ್ಲಿಗೆ ಹೋಗುತ್ತವೆ ಎಂದು ಪ್ರಶ್ನೆ ಮಾಡಿದ್ದಾರೆ. ಒಟ್ಟಿನಲ್ಲಿ ವೈರಲ್ ಆಗಿರುವ ವೀಡಿಯೋ ನೆಟ್ಟಿಗರಲ್ಲಿ ಕುತೂಹಲ ಮೂಡಿಸಿದ್ದು, ಸದ್ಯ 2 ಮಿಲಿಯನ್ ವೀಕ್ಷಣೆಗಳು ಮತ್ತು 267,000 ಲೈಕ್‌ಗಳನ್ನು ವೀಡಿಯೋ ಗಳಿಸಿದೆ.
ಇದನ್ನೂ ಓದಿ: Leopard Surya Namaskara: ಸೂರ್ಯ ನಮಸ್ಕಾರ ಮಾಡ್ತಿರೋ ಚಿರತೆ ವಿಡಿಯೋ ವೈರಲ್, ಯೋಗ ಕಲಿಸಿದ್ದು ಯಾರು?