Home Interesting School Bus : ಸ್ಕೂಲ್ ಬಸ್ ಹಳದಿ ಬಣ್ಣದಲ್ಲೇ ಇರಲು ವಿಶೇಷ ಕಾರಣವಿದೆ!...

School Bus : ಸ್ಕೂಲ್ ಬಸ್ ಹಳದಿ ಬಣ್ಣದಲ್ಲೇ ಇರಲು ವಿಶೇಷ ಕಾರಣವಿದೆ! ಏನದು ? ಇಲ್ಲಿದೆ ಸಂಪೂರ್ಣ ಮಾಹಿತಿ

School Bus

Hindu neighbor gifts plot of land

Hindu neighbour gifts land to Muslim journalist

School Bus : ನೀವು ಸ್ಕೂಲ್ ಬಸ್ ಬಣ್ಣವನ್ನು ಗಮನಿಸಿರಬಹುದು. ಎಲ್ಲಾ ಸ್ಕೂಲ್ ಬಸ್ (School Bus) ಬಣ್ಣವು ಸಾಮಾನ್ಯವಾಗಿ ಹಳದಿ ಬಣ್ಣವನ್ನು ಹೊಂದಿರುತ್ತದೆ. ಅದರ ಕಾರಣ ನಿಮಗೆ ಗೊತ್ತಿದೆಯೇ. ಬನ್ನಿ ಹಳದಿ ಬಣ್ಣ (yellow ) ಇರಲು ಕಾರಣ ಏನೆಂದು ನೋಡೋಣ.

ಮುಖ್ಯವಾಗಿ ವಿದ್ಯಾರ್ಥಿಗಳ ಸುರಕ್ಷತೆ ತುಂಬಾ ಮುಖ್ಯವಾಗಿರುವುದರಿಂದ ಅಫಘಾತ ಸಂಖ್ಯೆಯನ್ನು ಕಡಿಮೆ ಮಾಡುವ ಸಲುವಾಗಿ ಶಾಲಾ ವಾಹನಗಳಿಗೆ ಹಳದಿ ಬಣ್ಣವನ್ನು ಹಚ್ಚಲಾಗುತ್ತದೆ. ಹಳದಿ ಕಣ್ಣಿಗೆ ಎದ್ದು ಕಾಣುತ್ತದೆ. ಇತರ ವಾಹನಗಳಿಗೆ ಅಂತರ ಕಾಪಾಡಿಕೊಂಡು ಸಾಗಲು ಸಹಾಯವಾಗುತ್ತದೆ ಎಂದು ಹೇಳಲಾಗುತ್ತದೆ.

ಕೆಂಪು, ನೀಲಿ, ಹಳದಿ ಮತ್ತು ಹಸಿರು ಈ ಬಣ್ಣಗಳನ್ನು ರಸ್ತೆ ವಿಷಯಗಳಿಗೆ ಸಂಬಂಧಿಸಿದಂತೆ ಬಳಸಲಾಗುತ್ತದೆ. ಇನ್ನು ಹಳದಿ ಬಣ್ಣ ಶಾಲಾ ಬಸ್​ಗಳಿಗೆ ಒಂದು ಗುರುತಾಗಿರುತ್ತದೆ. ಇತತರಿಗೂ ಹುಡುಕಲು ಸುಲಭವಾಗಿರುತ್ತದೆ.

ವಿಜ್ಞಾನಿಗಳ ಪ್ರಕಾರ ಕೆಂಪು ಬಣ್ಣಕ್ಕೆ ಹೋಲಿಸಿದರೆ ಹಳದಿ ಬಣ್ಣವನ್ನು ಗುರುತಿಸುವ ಇಲ್ಲವೇ ಕಾಣುವ ಮನುಷ್ಯರ ಕಣ್ಣಿನ ಸಾಮರ್ಥ್ಯ 1.24 ಪಟ್ಟು ಹೆಚ್ಚಾಗಿರುತ್ತದೆಯಂತೆ.

ಇನ್ನು ಮಳೆ, ಮಂಜು, ಹಿಮ ಹೀಗೆ ಯಾವ ಸಂದರ್ಭದಲ್ಲಿ ಬೇಕಾದರೂ ಬಹು ಬೇಗ ಕಾಣುವುದು ಎಂದರೆ ಅದು ಹಳದಿ ಬಣ್ಣ ಆ ಕಾರಣದಿಂದ ಶಾಲಾ ಬಸ್​ಗಳ ಬಣ್ಣವನ್ನು ಹಚ್ಚಿರುತ್ತಾರೆ.

ಅದಲ್ಲದೆ ಸುರಕ್ಷಿತ ಅಂತರವನ್ನು ಕಾಪಾಡಿಕೊಂಡು ಸಾಗಲು ಸಹಾಯವಾಗುತ್ತದೆ. ಪೇರಿ ಪರ್ ಖಾಯಿಲೆ ಇರುವ ವ್ಯಕ್ತಿಗಳು ಹಳದಿ ಬಣ್ಣವನ್ನು ಮಾತ್ರ ಗುರುತಿಸಲು ಸಮರ್ಥರಾಗಿರುತ್ತಾರೆ. ಹಾಗೇ ಹಗಲು, ರಾತ್ರಿ ಯಾವುದೇ ಸಮಯವಿರಲಿ ಕೆಂಪು ಬಣ್ಣವನ್ನು ಬಿಟ್ಟರೆ ಹಳದಿಯು ಎಲ್ಲರ ಕಣ್ಣನ್ನು ಬೇಗ ತಲುಪುತ್ತದೆ.

1930 ರಲ್ಲಿ ಅಮೇರಿಕಾದ ಕೊಲಂಬಿಯ ಯುನಿವರ್ಸಿಟಿಯ ಪ್ರಾಧ್ಯಾಪಕರು ಶಾಲಾ ವಾಹನಗಳಿಗೆ ಹಳದಿಬಣ್ಣ ಇದ್ದರೆ ತುಂಬಾ ಒಳ್ಳೆಯದು ಎಂದು ಕಾನ್ಫರೆನ್ಸ್ ನಲ್ಲಿ ತಿಳಿಸಿದ್ದರಂತೆ ಹಾಗಾಗಿ ಅಂದಿನಿಂದಲೂ ಇದೇ ಬಣ್ಣವನ್ನು ಬಳಸಲಾಗುತ್ತಿದೆ.

ಒಟ್ಟಿನಲ್ಲಿ ಇತರ ಬಣ್ಣಗಳಿಗಿಂತ ಹೆಚ್ಚು ಹಳದಿ ಬಣ್ಣ ನಮ್ಮ ಗಮನ ಸೆಳೆಯುತ್ತದೆ. ಅದಲ್ಲದೆ ನಮ್ಮ ಕಣ್ಣು ಹೆಚ್ಚು ಸೆನ್ಸಿಟಿವ್​​ ಆಗಿರುತ್ತದೆ. ಹಾಗೇ ಕೆಲವು ಮುಖ್ಯ ಬಣ್ಣಗಳನ್ನು ಬಹುಬೇಗ ಗುರುತಿಸುತ್ತದೆ. ಆ ಕಾರಣದಿಂದ ಕೆಲವು ವಸ್ತುಗಳಿಗೆ ನಿಗದಿತವಾಗಿ ಇದೇ ಬಣ್ಣವನ್ನು ಹಚ್ಚಬೇಕು ಎಂದಿರುತ್ತದೆ.