Actress Samantha : “ನೀವು ಯಾರನ್ನಾದರೂ ಡೇಟ್ ಮಾಡಿ”- ಅಭಿಮಾನಿಯ ಮನವಿಗೆ ನಟಿ ಸಮಂತಾ ಪ್ರತಿಕ್ರಿಯೆ ವೈರಲ್ !
Actress Samantha : ಬಹುಭಾಷಾ ನಟಿ ಶಾಕುಂತಲೆ ಸಮಂತಾ ರುತ್ ಪ್ರಭು ಸಣ್ಣ ಮಟ್ಟದ ಆರೋಗ್ಯ ಸಮಸ್ಯೆಯಿಂದ ಹೊರಬಂದು ಚೇತರಿಸಿಕೊಳ್ಳುತ್ತಿದ್ದಾರೆ. ಸದ್ಯ ʼಶಾಕುಂತಲಂʼ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿರುವ ಸಮಂತಾ ಅಭಿಮಾನಿಯೊಬ್ಬರ ಪ್ರಶ್ನೆಗೆ ಕೊಟ್ಟಿರುವ ಪ್ರತಿಕ್ರಿಯೆ ವೈರಲ್ ಆಗಿದೆ.
ಈ ನಡುವೆ ಚಿತ್ರರಂಗದಲ್ಲೂ ಸಕ್ರಿಯವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಆಕೆ ಫಿಟ್ನೆಸ್ ಕುರಿತ ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದು ಎಲ್ಲಾ ಇತರ ನಟಿಯರ ಹಾಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಸ್ತುತವಾಗಿ ಇದ್ದಾರೆ. ಆಕೆ
ತನ್ನ ಪತಿ ನಾಗಚೈತನ್ಯ ಅವರಿಂದ ವಿಚ್ಛೇದನ ಪಡೆದುಕೊಂಡು ಕೊಂಚ ಡಿಪ್ರೆಸ್ನಲ್ಲಿ ಇರೋದು ಎಲ್ಲರಿಗೂ ತಿಳಿದ. ವಿಷಯವೇ. ಈಗ ಬೇರೆಯಾದ ಮೇಲೆ ಅನೇಕ ಬಾರಿ ಸಮಂತಾ ಅವರ ಹೊಸ ಮದುವೆ ಬಗ್ಗೆ ಗಾಸಿಪ್ ಗಳು ಎದ್ದಿವೆ. ಎದ್ದಷ್ಟೇ ವೇಗದಿಂದ ಗಾಸಿಪ್ ಗಳು ತಣ್ಣಗಾಗಿ ಹೋಗಿವೆ.
ಹೀಗಿರುವಾಗ ಮೊನ್ನೆ ಆಕೆಯ ಅಭಿಮಾನಿಯೊಬ್ಬರು ಸಮಂತಾ ಅವರಿಗೆ ಟ್ವಿಟರ್ ನಲ್ಲಿ ಪರ್ಸನಲ್ ಸಲಹೆ ನೀಡಿದ್ದಾರೆ.“ದಯವಿಟ್ಟು ನೀವು ಯಾರನ್ನಾದರೂ ಡೇಟ್ ಮಾಡಿ” ಎಂದು ಆ ವ್ಯಕ್ತಿ ಹೇಳಿದ್ದು, ಇದಕ್ಕೆ ಸಮಂತಾ (Actress Samantha ) ನೀಡಿದ ಉತ್ತರ ಅಸಾಮಾನ್ಯವೆನಿಸಿದೆ. ಆಕೆ ನೀಡಿದ ಉತ್ತರ ಆಕೆಯ ಅಭಿಮಾನಿಗಳ ಮಾತ್ರವಲ್ಲದೆ ಇತರರ ಮನಸ್ಸನ್ನು ಕೂಡಾ ಗೆದ್ದಿದೆ.
ಅಭಿಮಾನಿಯ ಪ್ರಶ್ನೆಗೆ ಪ್ರೀತಿಯಿಂದಲೇ ಸಮಂತಾ ಪ್ರತಿಕ್ರಿಯೆ ನೀಡಿದ್ದಾರೆ. “ನೀವು ಪ್ರೀತಿಸುವಷ್ಟು ನನ್ನನ್ನು ಬೇರೆ ಯಾರು ಪ್ರೀತಿಸುತ್ತಾರೆ” ಎಂದು ಆಕೆ ಪ್ರತಿಕ್ರಿಯೆ ನೀಡಿದ್ದಾರೆ. ಸದ್ಯ ಈ ಟ್ವೀಟ್ ವೈರಲ್ ಆಗಿದ್ದು, ಸಮಂತಾರ ಸರಳತೆಯನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಈ ಮೂಲಕ ರೂಪ ಯೌವನ ಸಂಪತ್ತಿನ ಖನಿ ಸಮಂತಾ ಬುದ್ದಿವಂತಿಕೆಯಲ್ಲೂ ಹಿಂದೆ ಬಿದ್ದಿಲ್ಲ ಎಂದು ತೋರಿಸಿದ್ದಾಳೆ.
https://twitter.com/Sravanthi_sam/status/1639904124245364736?ref_src=twsrc%5Etfw%7Ctwcamp%5Etweetembed%7Ctwterm%5E1640033906597453826%7Ctwgr%5E5ca35ed3e13da1bb432636a8223eed9913b32d1c%7Ctwcon%5Es3_&ref_url=https%3A%2F%2Fd-2111566843226243338.ampproject.net%2F2303151529000%2Fframe.html