Best Mileage Seven Seater Cars : ಬಂದಿದೆ ನೋಡಿ ಬೆಸ್ಟ್‌ ಮೈಲೇಜ್‌ ನೀಡುವ 7ಸೀಟರ್‌ ಕಾರು!

Best Mileage Seven Seater Cars: ಇಂದಿನ ದಿನಗಳಲ್ಲಿ ಓಡಾಟ ನಡೆಸಲು ವಾಹನಗಳು ಅಗತ್ಯವಾಗಿದ್ದು, ಪ್ರತಿಯೊಬ್ಬರ ಮನೆಯಲ್ಲಿ ಕೂಡ ವಾಹನಗಳು ಇರೋದು ಕಾಮನ್. ಆದರೆ, ಇತ್ತೀಚಿನ ದಿನಗಳಲ್ಲಿ ಪ್ರೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಹೆಚ್ಚಳ ಕಂಡುಬರುತ್ತಿರುವ ನಡುವೆ ಹೆಚ್ಚಿನವರು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ನೀವೇನಾದರೂ ಕಾರು ಖರೀದಿ ಮಾಡಬೇಕು ಅಂದುಕೊಂಡಿದ್ದರೆ, ಬೆಸ್ಟ್ ಮೈಲೇಜ್ ನೀಡಬಲ್ಲ(Best Mileage Seven Seater Cars) ಏಳು ಆಸನಗಳ ಕಾರುಗಳ ಕುರಿತ ಮಾಹಿತಿ ಇಲ್ಲಿದೆ ನೋಡಿ.

ಹೊಸ ವರ್ಷದಲ್ಲಿ ಆಟೊಮೊಬೈಲ್ (Automobile )ಕ್ಷೇತ್ರವು ಸಾಕಷ್ಟು ಸುಧಾರಣೆ ಕಂಡಿದ್ದು, 2023ರ ಅಂಕಿ ಅಂಶ ಪ್ರಕಾರ ಕಾರು (Car) ಉದ್ಯಮದ ಮಾರುಕಟ್ಟೆಯಲ್ಲಿ (Market ) ಭಾರತದಲ್ಲಿ( India)ಅತಿ ಹೆಚ್ಚು ಮಾರಾಟವಾದ ಟಾಪ್ 10 ಕಾರುಗಳ ಪೈಕಿ ಮಾರುತಿ ಸುಜುಕಿ(Maruti Suzuki) ಅಗ್ರಗಣ್ಯ (Top Position)ಸ್ಥಾನದಲ್ಲಿದೆ. ಪ್ರತಿಯೊಬ್ಬರಿಗೂ ಕಾರು ಖರೀದಿ ಮಾಡಬೇಕು ಎಂದು ಬಯಕೆ ಇರುವುದು ಸಹಜ. ಆದರೆ, ಕಾರು ಖರೀದಿ ಮಾಡುವ ಮುನ್ನ ದರ, ಮೈಲೇಜ್ ಬಗ್ಗೆ ತಿಳಿದಿರುವುದು ಅವಶ್ಯಕ

ಮಾರುತಿ ಸುಜುಕಿ XL6(Maruti Suzuki XL6)
ಮೈಲ್ಡ್-ಹೈಬ್ರಿಡ್ ತಂತ್ರಜ್ಞಾನದ ಜೊತೆಗೆ ಬರುವ ಮಾರುತಿ ಸುಜುಕಿ(Maruti Suzuki XL6) 1.5-ಲೀಟರ್ ಪೆಟ್ರೋಲ್ ಎಂಜಿನ್ (103 PS/137 Nm) ನಿಂದ ಚಾಲಿತವಾಗಿದೆ. ಮಾರುತಿ ಸುಜುಕಿ XL6 ಮೈಲೇಜ್ ಬಗ್ಗೆ ಗಮನ ಹರಿಸಿದರೆ, ಮ್ಯಾನುವಲ್‌ಗೆ 20.97 kmpl ಮೈಲೇಜ್ ಹೊಂದಿದ್ದು, ಸ್ವಯಂಚಾಲಿತವಾಗಿ 20.27 kmpl. ಆಗಿದೆ. ಇದು 5-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಲಭ್ಯವಿದ್ದು, ಇದರ ಬೆಲೆ ಗಮನಿಸಿದರೆ 11.29 ಲಕ್ಷದಿಂದ 14.55 ಲಕ್ಷ ರೂ.ವರೆಗೆ ಆಗಿದೆ.

ರಿನಾಲ್ಟ್ ಟ್ರಿಬರ್ (Renault Triber)
ದೇಶದ ಅತ್ಯಂತ ಅಗ್ಗದ 7 ಸೀಟರ್ ಕಾರ್ ಗಳಲ್ಲಿ ಒಂದಾಗಿರುವ ರಿನಾಲ್ಟ್ ಟ್ರಿಬರ್ 1 ಲೀಟರ್ ನ್ಯಾಚುರಲ್ ಎಸ್ಪಿರೇಟೆಡ್, 3 ಸಿಲಿಂಡರ್ ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗುವ ಈ ಕಾರ್ 72 PS ಪವರ್ ಮತ್ತು 96 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.ರಿನಾಲ್ಟ್ ಟ್ರಿಬರ್ ಮೈಲೇಜ್ ಹೀಗಿದೆ: ಮ್ಯಾನುವಲ್‌ಗೆ 20.0 kmpl ಆಗಿದ್ದು, ಸ್ವಯಂಚಾಲಿತವಾಗಿ 18.2 kmpl ಆಗಿದೆ. ಇನ್ನು ಇದರ ಬೆಲೆ 5.92 ಲಕ್ಷದಿಂದ 8.51 ಲಕ್ಷದವರೆಗೆ ಇದ್ದು, ಇದರಲ್ಲಿ 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ AMT ಗೇರ್‌ಬಾಕ್ಸ್‌ ಲಭ್ಯವಿರಲಿದೆ.

ಮಾರುತಿ ಎರ್ಟಿಗಾ(Maruti Suzuki Ertiga)
ಮಾರುತಿ ಕಾರುಗಳು ಮಾರುಕಟ್ಟೆಯಲ್ಲಿ ತಮ್ಮದೇ ಬ್ರಾಂಡ್ ಸೃಷ್ಟಿ ಮಾಡಿದ್ದು, 5-ಸ್ಪೀಡ್ ಮ್ಯಾನ್ಯುವಲ್ ಅಥವಾ 6-ಸ್ಪೀಡ್ ಟಾರ್ಕ್ ಪರಿವರ್ತಕ ಗೇರ್‌ಬಾಕ್ಸ್‌ನೊಂದಿಗೆ ಸಂಯೋಜಿತವಾಗಿರುವ ಈ ಕಾರ್ 88 PS ಪವರ್ ಮತ್ತು 121.5 Nm ಟಾರ್ಕ್ ಅನ್ನು ಉತ್ಪಾದಿಸುವ ಸಿ‌ಎನ್‌ಜಿ ಕಿಟ್ ಅನ್ನು ಹೊಂದಿದೆ.ಮಾರುತಿ ಎರ್ಟಿಗಾ ಬೆಲೆ ಗಮನಿಸಿದರೆ, 8.41 ಲಕ್ಷ ರೂ.ಗಳಿಂದ ಆರಂಭವಾಗಿ 12.79 ಲಕ್ಷದವರೆಗೆ ಇರಲಿದೆ. ಮಾರುತಿ ಎರ್ಟಿಗಾ ಮೈಲೇಜ್ ಬಗ್ಗೆ ಗಮನ ಹರಿಸಿದರೆ, ಮ್ಯಾನುಯಲ್ ಟ್ರಾನ್ಸ್‌ಮಿಷನ್‌ಗೆ 20.5 ಕಿಮೀ/ಲೀ ಆಗಿದ್ದು, ಸ್ವಯಂಚಾಲಿತ ಪ್ರಸರಣಕ್ಕೆ 20.3 ಕಿಮೀ/ಲೀ ಹಾಗೆಯೇ ಸಿಎನ್‌ಜಿಗೆ 26.1 ಕಿಮೀ/ಕೆಜಿ. ಆಗಿದೆ. ಹೈಬ್ರಿಡ್ ತಂತ್ರಜ್ಞಾನದೊಂದಿಗೆ 1.5-ಲೀಟರ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುವ ಮಾರುತಿ ಎರ್ಟಿಗಾ 103 PS ಮತ್ತು 137 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಒಳಗೊಂಡಿದೆ.

ಕಿಯಾ ಕ್ಯಾರೆನ್ಸ್(Kia Carens)
ಕಿಯಾ ಕ್ಯಾರೆನ್ಸ್ ಮೂರು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದ್ದು,1.5 L ಡೀಸೆಲ್ (115 PS/250 Nm, 6-ಸ್ಪೀಡ್ ಮ್ಯಾನುವಲ್/6-ಸ್ಪೀಡ್ ಸ್ವಯಂಚಾಲಿತವಾಗಿದ್ದು, MPV- ಇಕೋ, ನಾರ್ಮಲ್ ಮತ್ತು ಸ್ಪೋರ್ಟ್ ಎಂಬ ಮೂರು ಡ್ರೈವ್ ಮೋಡ್‌ಗಳಲ್ಲಿ ದೊರೆಯಲಿದೆ. ಕಿಯಾ ಕ್ಯಾರೆನ್ಸ್ ಮೈಲೇಜ್ ಗಮನಿಸಿದರೆ, ಮ್ಯಾನುಯಲ್ ಟ್ರಾನ್ಸ್‌ಮಿಷನ್‌ಗೆ 21.3 ಕಿಮೀ/ಲೀ ಆಗಿದ್ದು, ಸ್ವಯಂಚಾಲಿತ ಪ್ರಸರಣಕ್ಕೆ 16.2 ಕಿಮೀ/ಲೀ ಅದೇ ರೀತಿ ಸಿಎನ್‌ಜಿಗೆ 21.3 ಕಿಮೀ/ಲೀ. ಆಗಿದೆ. 1.5L ಪೆಟ್ರೋಲ್ (115 PS/114 Nm, 6-ಸ್ಪೀಡ್ ಮ್ಯಾನುವಲ್), 1.4L ಟರ್ಬೊ ಪೆಟ್ರೋಲ್ (140 PS/242 Nm, 6-ಸ್ಪೀಡ್ ಮ್ಯಾನುವಲ್/7-ಸ್ಪೀಡ್ DCT ) ಹೊಂದಿದೆ.

ಇದನ್ನೂ ಓದಿ: 5 SUV car : Maruti ಯಿಂದ ಹಿಡಿದು TATA ವರೆಗೆ, ಈ 5 SUV ಗಳು ಶೀಘ್ರದಲ್ಲೇ ಬಿಡುಗಡೆಯಾಗಲಿವೆ!!

Leave A Reply

Your email address will not be published.