Organic fertilizer: ಸಗಣಿಗೂ ಬಂತು ಚಿನ್ನದ ಬೆಲೆ! ರೈತರಿಂದ ಸಾವಯವ ಗೊಬ್ಬರದತ್ತ ಒಲವು ಹೆಚ್ಚಳ!

Organic fertilizer: ಇದೀಗ ಸಾವಯವ ಗೊಬ್ಬರದತ್ತ (Organic fertilizer) ಒಲವು ಹೆಚ್ಚಿದ್ದು, ಮಾರುಕಟ್ಟೆಯಲ್ಲಿ ಇದರ ಬೇಡಿಕೆಯು ಹೆಚ್ಚಾಗಿದೆ. ರೈತರು ರಾಸಾಯನಿಕವಿಲ್ಲದ ಉತ್ಪನ್ನಗಳ ಖರೀದಿಗೆ ಮುನ್ನುಗ್ಗುತ್ತಿದ್ದಾರೆ. ಸಗಣಿ (dung), ಗೊಬ್ಬರಗಳನ್ನು ಹೆಚ್ಚು ಬಳಸುತ್ತಿದ್ದಾರೆ. ಹಾಗಾಗಿ ಇದೀಗ ಕೊಟ್ಟಿಗೆ ಗೊಬ್ಬರಕ್ಕೆ ಚಿನ್ನದ ಬೆಲೆ (gold rate) ಬಂದಿದೆ.

ಒಂದು ಟ್ರ್ಯಾಕ್ಟರ್ ಹಸುವಿನ (cow) ಸಗಣಿಗೆ ಈ ಹಿಂದೆ 3,000 ರೂ ಇತ್ತು. ಆದರೆ ಈಗ ಸುಮಾರು 6,000 ರಿಂದ 8,000 ರೂಗೆ ಹೆಚ್ಚಾಗಿದೆ. ಅದರಲ್ಲೂ ಕಳೆದ ವರ್ಷ ಗದಗ ಸೇರಿದಂತೆ ರಾಜ್ಯದ ಹಲವೆಡೆ ಭಾರೀ ಮಳೆಯಾಗಿತ್ತು. ಹೀಗಾಗಿ ರೈತರಿಗೆ ಅಪಾರ ಪ್ರಮಾಣ ನಷ್ಟ ಉಂಟಾಗಿತ್ತು. ಈ ಸಂದರ್ಭದಲ್ಲಿ ಮಣ್ಣಿನ ಫಲವತ್ತತೆ ಹೆಚ್ಚಿಸಿಕೊಳ್ಳಲು ಗೋಮಾಳದ ಗೊಬ್ಬರದ ಮೊರೆ ಹೋಗಿದ್ದು, ಸದ್ಯ ಸಾವಯವ ಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿದೆ.

ಅಲ್ಲದೆ, ನಿರಂತರ ಮಳೆಯಿಂದಾಗಿ (rain) ಮಣ್ಣಿನ ಸವೆತ ಹೆಚ್ಚಾಗುತ್ತಿದೆ. ಇದು ಮಣ್ಣಿನ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಈ ಋತುವಿನಲ್ಲಿ ಉತ್ತಮ ಫಸಲು ಪಡೆಯಲು ರೈತರು ಮಣ್ಣಿನ ಪರೀಕ್ಷೆಗಳನ್ನು ನಡೆಸುತ್ತಿದ್ದಾರೆ. ಈ ವೇಳೆ ಮಣ್ಣಿನ ಗುಣಮಟ್ಟ ಕಾಯ್ದುಕೊಳ್ಳಲು ಸಾವಯವ ಗೊಬ್ಬರ ಬಳಸುವಂತೆ ಕೃಷಿ ತಜ್ಞರು ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಸಾವಯವ ಗೊಬ್ಬರದ ಬಗ್ಗೆ ಜಾಗೃತಿ ಮೂಡಿಸುತ್ತಿರುವ ರೈತ ವೀರೇಶ ನೇಗಲಿ ಮಾತನಾಡಿ, ನೀರಾವರಿ ಸೌಲಭ್ಯವಿರುವ ರೈತರು ಹಸುವಿನ ಸಗಣಿ ಸರಿಯಾಗಿ ಮಿಶ್ರಣವಾಗುವಂತೆ ಮಣ್ಣಿನಲ್ಲಿ ನೀರು ಚಿಮುಕಿಸಬೇಕು. ಇಲ್ಲವಾದರೆ ಸಗಣಿ ಕೆಸರಿನಲ್ಲಿ ಬೆರೆತು ವ್ಯರ್ಥವಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ. ಸರಿಯಾದ ಪ್ರಮಾಣದ ಪೋಷಕಾಂಶ ಸಿಗಬೇಕು ಎಂದಿದ್ದಾರೆ.

ಈ ಬಗ್ಗೆ ಗದಗದ ಕೃಷಿ ಇಲಾಖೆಯ ಅಧಿಕಾರಿಯೊಬ್ಬರು ಮಾತನಾಡಿ, ಹಲವು ರೈತರು ಸಾವಯವ ಗೊಬ್ಬರದತ್ತ ಮುಖ ಮಾಡುತ್ತಿದ್ದಾರೆ. ಒಮ್ಮೆ ಮಳೆಯಾದರೂ ಮಣ್ಣಿನ ಜೊತೆಗೆ ಹಸುವಿನ ಸಗಣಿಯನ್ನು ಸರಿಯಾದ ರೀತಿಯಲ್ಲಿ ಮಿಶ್ರಣ ಮಾಡುವಂತೆ ತಿಳಿಸುತ್ತಿದ್ದೇವೆ. ಯಾವುದೇ ಸಹಾಯಕ್ಕಾಗಿ ರೈತರು ತಮ್ಮ ಹತ್ತಿರದ ಕೃಷಿ ಇಲಾಖೆ ಕಚೇರಿಯನ್ನು ಸಂಪರ್ಕಿಸುವಂತೆಯೂ ತಿಳಿಸಲಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ, ಸಮಾನ ಮನಸ್ಕ ರೈತರ ಗುಂಪೊಂದು ನರೇಗಲ್, ತೋಟಗಂಟಿ, ಕೋಚಲಾಪುರ, ಡಿ.ಎಸ್.ಹಡಗಲಿ, ಬೂದಿಹಾಳ್, ಜಕ್ಕಲಿ ಮತ್ತಿತರ ಗ್ರಾಮಗಳಿಗೆ ಭೇಟಿ ನೀಡಿ, ರೈತರಿಗೆ ಮಾಹಿತಿ ನೀಡುತ್ತಿದ್ದಾರೆ.

Leave A Reply

Your email address will not be published.