Cooker Bomb Blast : ಕುಕ್ಕರ್‌ ಬಾಂಬ್‌ ಕಾರಣಕರ್ತ ಶಾರೀಕ್‌ ಕುರಿತು ಸ್ಫೋಟಕ ಮಾಹಿತಿ ಲೀಕ್‌!

Cooker Bomb Blast : ಮಂಗಳೂರಿನ ಜನತೆಯನ್ನು ಬೆಚ್ಚಿಬೀಳಿಸಿದ ನಾಗೂರಿನ (Naguru, Mangaluru) ಬಳಿ ಆಟೋದಲ್ಲಿ ಸಂಭವಿಸಿದ (Auto Blast) ಕುಕ್ಕರ್ ಬಾಂಬ್ ಬ್ಲಾಸ್ಟ್ (Cooker Bomb Blast) ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ತನಿಖೆ ನಡೆಸುತ್ತಿದ್ದು, ಈ ವೇಳೆ ಸ್ಫೋಟಕ ಮಾಹಿತಿಗಳು ಲಭ್ಯವಾಗಿವೆ ಎಂದು ತಿಳಿದುಬಂದಿದೆ. ಕುಕ್ಕರ್‌ ಬಾಂಬ್‌ ಕಾರಣಕರ್ತ ಶಾರೀಕ್‌ ಕುರಿತು ಸ್ಫೋಟಕ ಮಾಹಿತಿ ಲೀಕ್‌ ಆಗಿದೆ.

ಸದ್ಯ ಎನ್ಐಎ (NIA) ಅಧಿಕಾರಿಗಳು ಶಂಕಿತರ ಹಣ ಟ್ರಾಂಜಾಕ್ಷನ್ ಗಳ‌ ಬಗ್ಗೆ ಮಾಹಿತಿ ಕೆದಕಿದ್ದಾರೆ. ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್, ವಿಡಿಯೋ ಮಾಡುತ್ತಿದ್ದು, ಇದಕ್ಕೆ ಕೋಟಿಗಟ್ಟಲೆ ಹಣ ಬರುತ್ತಿತ್ತು. ಶಂಕಿತರ ಅಕೌಂಟ್ ಗೆ ಕ್ರಿಪ್ಟೋಕರೆನ್ಸಿ ಮೂಲಕ ಕೋಟಿ ಕೋಟಿ ಹಣ ಬರುತ್ತಿತ್ತು ಎಂದು ತಿಳಿದುಬಂದಿದೆ.

ಶಂಕಿತರಿಗೆ ವಿಡಿಯೋಗೆ ಬಿಟ್ ಕಾಯಿನ್ ಗಳು ಫಂಡ್ ನೀಡಲಾಗುತ್ತಿದೆ. ಈ ಬಿಟ್ ಕಾಯ್ನ್ ರೇಟ್ ದಿನ ದಿನಕ್ಕೂ ಏರಿಳಿತ ಆಗುತ್ತಿದ್ದು, ಇವರು ಮಾಡುವ ಒಂದು ವಿಡಿಯೋಗೆ 20-30 ಬಿಟ್ ಕಾಯ್ನ್ ಫಂಡ್ ಸಿಗುತ್ತದೆ ಎಂದು ಹೇಳಲಾಗಿದೆ. ಶಂಕಿತರು ಈ ಬಿಟ್ ಕಾಯಿನ್ ಟ್ರಾಂಜಾಕ್ಷನ್ ಅನ್ನು ಡಾರ್ಕ್ ವೆಬ್ ಮೂಲಕ ನಡೆಸುತ್ತಿದ್ದು, ಡಾರ್ಕ್ ವೆಬ್ ಮೂಲಕ, ಮೂರನೇ ವ್ಯಕ್ತಿಯೊಬ್ಬನ ಮೂಲಕ‌ ಹಣ ಪಡೆಯುತ್ತಿದ್ದರು ಎನ್ನಲಾಗಿದೆ.

ಈ ಶಂಕಿತರು ದಲ್ಲಾಳಿಗಳನ್ನು ಕಾಂಟ್ಯಾಕ್ಟ್ ಮಾಡಿ ಬಿಟ್ ಕಾಯಿನ್ ಮಾರುತ್ತಿದ್ದರು. ದಲ್ಲಾಳಿಗಳಿಗೆ ಕಮಿಷನ್ ಕೊಟ್ಟು ಹಣ ಪಡೆಯುತ್ತಿದ್ದರು. ದಲ್ಲಾಳಿಗಳು 1 ಕೋಟಿ ಮೌಲ್ಯದ ಬಿಟ್ ಕಾಯಿನ್ ಗಳಿಗೆ 25 ಲಕ್ಷದಷ್ಟು ಹಣ ಪಡೆದು ಹವಾಲಾ ಕ್ಯಾಶ್ ಕೊಡುತ್ತಿದ್ದರು ಎಂದು ತಿಳಿದುಬಂದಿದೆ. ಅಲ್ಲದೆ, ಈ ಶಂಕಿತರು ಭಾರತದಲ್ಲಿನ ಕೆಲವರಿಂದ ಹವಾಲ ರೂಪದಲ್ಲಿ ಹಣ ಪಡೆದಿರುವ ಮಾಹಿತಿ ಲಭ್ಯವಾಗಿದೆ. ಸದ್ಯ ಕೇಂದ್ರ ತನಿಖಾ ಸಂಸ್ಥೆ ಶಂಕಿತರ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ತನಿಖೆ ನಡೆಸುತ್ತಿದೆ‌ ಎಂದು ಹೇಳಲಾಗಿದೆ.

Leave A Reply

Your email address will not be published.