Matte Maduve: ‘ಮತ್ತೆ ಮದುವೆ’ ಆಗಿ ಮನೆ ಮುಂದೆ ರಂಗೋಲಿ ಹಾಕ್ತಿದ್ದಾರೆ ಪವಿತ್ರಾ ಲೋಕೇಶ್ ಹಾಗೂ ನರೇಶ್! ರಂಗೋಲಿ ವಿಡಿಯೋ ಈಗ ಎಲ್ಲೆಡೆ ವೈರಲ್!

Matte Maduve :ಪವಿತ್ರಾ ಲೋಕೇಶ್ (Pavitra Lokesh) ಹಾಗೂ ನಟ ನರೇಶ್ ಬಾಬು(Naresh Babu) ನಡುವಿನ ಸಂಬಂಧದ ಕುರಿತು ಅನೇಕ ವದಂತಿಗಳು ಹಬ್ಬಿದ್ದವು. ಆದರೆ ಈ ಜೋಡಿ ಮದುವೆ ಮಾಡಿಕೊಳ್ಳೋದ್ರು ಮೂಲಕ ಅವುಗಳಿಗೆಲ್ಲ ತೆರೆ ಎಳೆದಿದ್ದರು. ಇತ್ತೀಚೆಗೆ ನರೇಶ್ ಅವರು ಟ್ವಿಟರ್ನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಪವಿತ್ರಾ ಲೋಕೇಶ್ಗೆ ನರೇಶ್ ತಾಳಿಕಟ್ಟುತ್ತಿರುವುದು ವಿಡಿಯೋದಲ್ಲಿ ಇತ್ತು. ‘ಹೊಸ ಬಾಳು ಆರಂಭಿಸುತ್ತಿದ್ದೇವೆ, ನಿಮ್ಮ ಆಶೀರ್ವಾದ ಇರಲಿ’ ಎಂದು ನರೇಶ್ ಕ್ಯಾಪ್ಶನ್ ನೀಡಿದ್ದರು. ಅಲ್ಲದೆ ಮದುವೆ ವಿಡಿಯೋ ಸಾಕಷ್ಟು ಸಿನಿಮೀಯ ರೀತಿಯಲ್ಲಿ ಇದ್ದಿದ್ದರಿಂದ ಅಭಿಮಾನಿಗಳಿಗೆ ಸಹಜವಾಗಿಯೇ ಅನುಮಾನ ವ್ಯಕ್ತವಾಗಿತ್ತು. ಇದರ ಬೆನ್ನಲೇ ಸದ್ಯ ಮತ್ತೊಂದು ವಿಡಿಯೋ ವೈರಲ್ ಆಗಿದೆ.

ಹೌದು, ಈ ವಿಡಿಯೋದಲ್ಲಿ ಪವಿತ್ರಾ ಲೋಕೇಶ್ ಅವರು ಮನೆ ಎದುರು ರಂಗೋಲಿ ಹಾಕುತ್ತಿದ್ದಾರೆ. ನರೇಶ್ ಬಾಬು ಅಲ್ಲಿಯೇ ನಿಂತು ಇದನ್ನು ನೋಡುತ್ತಿದ್ದಾರೆ. ಅಂದಹಾಗೆ ಈ ವಿಡಿಯೋ ಸಾಕಷ್ಟು ಕುತೂಹಲ ಹುಟ್ಟು ಹಾಕಿದ್ದ ನರೇಶ್ ವಿಕೆ ಹಾಗೂ ಪವಿತ್ರಾ ಲೋಕೇಶ್ ಅಭಿನಯದ ‘ಮತ್ತೆ ಮದುವೆ’ (Matte Maduve) ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಆಗಿದೆ.
ನರೇಶ್ ಜೊತೆ ಪವಿತ್ರಾ ಲೋಕೇಶ್ ಜೋಡಿಯಾಗಿ ನಟಿಸಿರುವ ‘ಮತ್ತೆ ಮದುವೆ’ ಸಾಮಾಜಿಕ ಜಾಲತಾಣದಲ್ಲಿ ಹಾಗೂ ಚಿತ್ರರಂಗದಲ್ಲಿ ಸಾಕಷ್ಟು ಕ್ಯೂರಿಯಾಸಿಟಿಯನ್ನು ಹುಟ್ಟು ಹಾಕಿತ್ತು. ಇದೀಗ ಬಿಡುಗಡೆಗೆ ರೆಡಿಯಾಗಿರುವ ಸಿನಿಮಾ ತಂಡ ಫಸ್ಟ್ ಲುಕ್ ಮೂಲಕ ಸಿನಿ ಪ್ರೇಕ್ಷಕರನ್ನು ಎದುರುಗೊಂಡಿದೆ. ಏಕಕಾಲದಲ್ಲಿ ತೆಲುಗು ಹಾಗೂ ಕನ್ನಡದಲ್ಲಿ ನಿರ್ಮಾಣವಾಗಿರುವ ಈ ಚಿತ್ರ ಏಪ್ರಿಲ್ ಅಥವಾ ಮೇ ನಲ್ಲಿ ತೆರೆ ಕಾಣಲಿದೆ.
ಪ್ರತಿಷ್ಠಿತ ವಿಜಯ ಕೃಷ್ಣ ಮೂವೀಸ್ ಬ್ಯಾನರ್ ನಡಿ ನರೇಶ್ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಎಂ. ಎಸ್. ರಾಜು (MS Raju) ಆಕ್ಷನ್ ಕಟ್ ಹೇಳಿದ್ದಾರೆ. ‘ಮತ್ತೆ ಮದುವೆ’ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾವಾಗಿದ್ದು ಎಂ.ಎಸ್. ರಾಜು ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಜಯಸುಧ ಮತ್ತು ಶರತ್ ಬಾಬು ಚಿತ್ರದ ಪ್ರಮುಖ ಪಾತ್ರಗಳಿಗೆ ಬಣ್ಣಹಚ್ಚಿದ್ದಾರೆ. ವನಿತ ವಿಜಯಕುಮಾರ್, ಅನನ್ಯ ನಾಗೆಲ್ಲ, ರೋಶನ್, ರವಿವರ್ಮ, ಅನ್ನಪೂರ್ಣ, ಭದ್ರಂ, ಯುಕ್ತ, ಪ್ರವೀಣ್ ಯಂಡಮುರಿ ಹಾಗೂ ಮಧೂ ಒಳಗೊಂಡ ಬಹು ದೊಡ್ಡ ತಾರಾಬಳಗವನ್ನು ಚಿತ್ರದಲ್ಲಿ ಕಾಣಬಹುದಾಗಿದೆ.
ಸುರೇಶ್ ಬೊಬ್ಬಿಲಿ ಸಂಗೀತ ನಿರ್ದೇಶನ, ಅರುಲ್ ದೇವ್ ಹಿನ್ನೆಲೆ ಸಂಗೀತ, ಎಂ.ಎನ್ ಬಾಲ್ ರೆಡ್ಡಿ ಕ್ಯಾಮೆರಾ ವರ್ಕ್, ಜುನೈದ್ ಸಿದ್ದಿಕಿ ಸಂಕಲನ, ಅನಂತ ಶ್ರೀರಾಮ್ ಸಾಹಿತ್ಯ ಚಿತ್ರಕ್ಕಿದೆ. ಶೀಘ್ರದಲ್ಲೇ ಚಿತ್ರತಂಡ ಸಿನಿಮಾ ಬಿಡುಗಡೆಯ ದಿನಾಂಕವನ್ನು ಹಂಚಿಕೊಳ್ಳಲಿದೆ. ಜೊತೆಗೆ ನರೇಶ್ ಹಾಗೂ ಪವಿತ್ರಾ ಲೋಕೇಶ್ ಲವ್ ಸ್ಟೋರಿಯನ್ನೇ ತಮ್ಮ ಚಿತ್ರಕ್ಕಾಗಿ ಆಯ್ಕೆ ಮಾಡಿಕೊಂಡಿದ್ದಾರಂತೆ ರಾಜು. ಅವರವರ ಪಾತ್ರಗಳನ್ನು ಅವರೇ ಮಾಡಿದ್ದಾರಂತೆ. ಅಲ್ಲದೇ, ನರೇಶ್ ಅವರೇ ಈ ಸಿನಿಮಾದ ನಿರ್ಮಾಪಕರು ಎಂದು ಹೇಳಿಕೊಂಡಿದ್ದಾರೆ. ಈ ಚಿತ್ರಕ್ಕೆ ಮತ್ತೆ ಮದುವೆ ಎಂದು ಹೆಸರಿಡಲಾಗಿದೆ.
https://twitter.com/ItsActorNaresh/status/1639140513751384064?t=Ds7K4BdVYG-EfShp2aumFQ&s=08
ಇದನ್ನೂ ಓದಿ: Rishab Shetty: ‘ಕಾಂತಾರ 2’ ಸಿನಿಮಾಗೆ ರಿಷಬ್ ಶೆಟ್ಟಿ ಪಡೆಯೋ ಸಂಭಾವನೆ ಕೇಳಿದರೆ ಖಂಡಿತ ಅಚ್ಚರಿ ಪಡ್ತೀರ…!!!