Home Breaking Entertainment News Kannada Love Mocktail 3 : ಬರಲಿದೆ ‘ಲವ್ ಮಾಕ್ ಟೇಲ್ 3’ ಸಿನಿಮಾ! ಆದಿ-ನಿಧಿ ಲವ್...

Love Mocktail 3 : ಬರಲಿದೆ ‘ಲವ್ ಮಾಕ್ ಟೇಲ್ 3’ ಸಿನಿಮಾ! ಆದಿ-ನಿಧಿ ಲವ್ ಸ್ಟೋರಿ ಮುಂದೇನು?

Love Mocktail 3

Hindu neighbor gifts plot of land

Hindu neighbour gifts land to Muslim journalist

Love Mocktail 3 :ಕನ್ನಡ ಚಿತ್ರರಂಗದಲ್ಲಿ ಹೆಚ್ಚಿನ ಸಂಭಾವನೆ ಪಡೆದ ಡಾರ್ಲಿಂಗ್ ಕೃಷ್ಣ(darling Krishna) ನಿರ್ದೇಶಿಸಿರುವ (direction)’ಲವ್‌ ಮಾಕ್‌ಟೇಲ್‌’ (love mocktail) ಸಿನಿತೆರೆಯಲ್ಲಿ(film industry) ಯಶಸ್ವಿಯಾಗಿ ಕಾಣಿಸಿಕೊಂಡ ಚಲನಚಿತ್ರವಾಗಿದೆ. ಈ ಚಿತ್ರದಲ್ಲಿ ಕೃಷ್ಣ ಅವರ ಪತ್ನಿಯಾದ ಮಿಲನಾ ನಿರ್ಮಾಣದಲ್ಲಿ ಪಾಲುದಾರರಾಗಿದ್ದರು. ಲವ್‌ ಮಾಕ್‌ಟೇಲ್‌ ಚಲನಚಿತ್ರವು ಪ್ರೇಕ್ಷಕರನ್ನು ವಿಸ್ಮಯ ಲೋಕಕ್ಕೆ ಕರೆದುಕೊಂಡು ಹೋಗಿದೆ ಎನ್ನಬಹುದು.

ಈ ಸಿನಿಮಾದ ಗೆಲುವು ಡಾರ್ಲಿಂಗ್‌ ಕೃಷ್ಣ ಮತ್ತು ಮಿಲನಾ ನಾಗರಾಜ್‌ಗೆ (Milana Nagaraj)ಜೀವನದ ಮುಂದಿನ ದಾರಿಗೆ ದೊಡ್ಡ ಗೆಲುವು ಎನ್ನಬಹುದು. ಇದೀಗ ಯುಗಾದಿ ಹಬ್ಬದ ಪ್ರಯುಕ್ತ ಈ ಜೋಡಿಯು ಅಭಿಮಾನಿಗಳಿಗೆ ಯಾರು ಊಹಿಸಲಾಗದಂತ ಸಂತಸದ ಸುದ್ದಿಯನ್ನು ನೀಡಿದ್ದಾರೆ. ಅದೇನಪ್ಪಾ ಅಂದರೆ.

‘ಲವ್‌ ಮಾಕ್‌ಟೇಲ್‌ 3’ (love mocktail 3)ಸಿನಿಮಾದ ಬಗ್ಗೆ ಎಲ್ಲಿಯೂ ಯಾವುದೇ ಮಾತುಗಳು ಸುದ್ದಿ ಆಗಿರಲಿಲ್ಲ. ಇದರ ಬಗ್ಗೆ ಯಾವುದೇ ರೀತಿಯ ವಿಷಯವನ್ನು ತನ್ನ ಅಭಿಮಾನಿಗಳಿಗೆ (fans)ತಿಳಿಸಲಿಲ್ಲ ಕೃಷ್ಣ ಮತ್ತು ಮಿಲನಾ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಇದೀಗ ಯುಗಾದಿ ಹಬ್ಬದ ಬೇವು ಬೆಲ್ಲದ ಜೊತೆಗೆ ಈ ಜೋಡಿ ತನ್ನ ಅಭಿಮಾನಿಗಳಿಗೆ ಬೆಲ್ಲದಂತಹ ಸಿಹಿ ಸುದ್ದಿಯನ್ನು ನೀಡಿದ್ದಾರೆ. ಅಂದರೆ, ‘ಲವ್‌ ಮಾಕ್‌ಟೇಲ್‌ 3′ ಚಲನಚಿತ್ರದ ಬಗ್ಗೆ ಮಿಲನಾ ಮತ್ತು ಕೃಷ್ಣ ತನ್ನ ಅಭಿಮಾನಿಗಳಿಗೆ ಸಂತಸ ಸುದ್ದಿ ನೀಡಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಸರ್ಪ್ರೈಸ್‌ ನೀಡಿದೆ. ಈ ಜೋಡಿಯು ಸಾಮಾಜಿಕ ಜಾಲತಾಣದಲ್ಲಿ(social media)’ಲವ್‌ ಮಾಕ್‌ಟೇಲ್‌ 3’ ಇನ್ನು ಪ್ರಾರಂಭ ಎಂದು ಬರೆದುಕೊಂಡು ತನ್ನ ಅಭಿಮಾನಿಗಳಿಗೆ ಯುಗಾದಿ ಹಬ್ಬದ ಶುಭಾಶಯವನ್ನು ತಿಳಿಸಿದ್ದಾರೆ.

‘ಲವ್‌ ಮಾಕ್‌ಟೇಲ್‌’ ಚಿತ್ರ 2020ರ ಜನವರಿಯಲ್ಲಿ ರಿಲೀಸ್‌ (release)ಆಗಿತ್ತು. ಚಿತ್ರಮಂದಿರದಲ್ಲಿ ಸದ್ದು ಮಾಡಿದ್ದ ಈ ಸಿನಿಮಾ, ಹೆಚ್ಚು ದಿನ ಥಿಯೇಟರ್‌ನಲ್ಲಿ ಇರಲಿಲ್ಲ. ಆದರೆ, ಪ್ರೇಕ್ಷಕರ ಅಂದರೆ ಅಭಿಮಾನಿಗಳ ಪ್ರೀತಿ ತುಂಬಾನೇ ಪಡೆದುಕೊಂಡಿತ್ತು. ಚಿತ್ರಮಂದಿರದ ಬಳಿಕ ಒಟಿಟಿಯಲ್ಲಿಯೂ ಸ್ಟ್ರೀಮ್‌(stream) ಆಗಿ ಮೆಚ್ಚುಗೆ ಪಡೆದಿತ್ತು. ಎಸ್ಟರ ಮಟ್ಟಿಗೆ ಎಂದರೆ, ಚಿತ್ರಮಂದಿರದಲ್ಲಿ ಸಿನಿಮಾ ಮಿಸ್‌ ಮಾಡಿಕೊಂಡ ಪ್ರೇಕ್ಷಕರು ಒಟಿಟಿಯಲ್ಲಿ ಸಿನಿಮಾ ನೋಡಿ, ಗೂಗಲ್‌ ಪೇ(Google pay) ಮೂಲಕ ಹಣ ಹಾಕುತಿದ್ದರು. ಅಷ್ಟರಮಟ್ಟಿಗೆ ಈ ಸಿನಿಮಾ ಸದ್ದು ಮಾಡಿ ಅಭಿಮಾನಿಗಳ ಮನಸ್ಸನ್ನು ಗೆದ್ದಿತ್ತು.

ಮೊದಲ ಭಾಗ ಹಿಟ್‌ ಆಗುತ್ತಿದ್ದಂತೆ, ಎರಡು ವರ್ಷದ ಬಳಿಕ (after 2 year)ಅಂದರೆ 2022ರ ಫೆಬ್ರವರಿಯಲ್ಲಿ ‘ಲವ್‌ ಮಾಕ್‌ಟೇಲ್‌ 2’ ಸಿನಿಮಾ ತೆರೆಯ(film industry) ಮೇಲೆ ಕಾಣಿಸಿಕೊಂಡಿತ್ತು. ಹಲವು ಕುತೂಹಲಗಳೊಂದಿಗೆ ರಿಲೀಸ್‌(release) ಆಗಿದ್ದ ಈ ಸಿನಿಮಾ ನೋಡುಗನಿಗೆ ಬೇಸರ ಮೂಡಿಸಿರಲಿಲ್ಲ. ಇನ್ನಷ್ಟು ಈ ಚಲನಚಿತ್ರದ ಬಗ್ಗೆ ಅಭಿಮಾನವನ್ನು ಹೆಚ್ಚಿಸಿತು.ಇದೀಗ ನಿರ್ದೇಶಕ ಕೃಷ್ಣ ಈ ಎರಡೂ ಸಿನಿಮಾಗಳ ಕಥೆಯನ್ನೇ 3ನೇ ಭಾಗದಲ್ಲಿಯೂ ಮುಂದುವರಿಸಲಿದ್ದಾರಾ ಅಥವಾ ಯಾವ ರೀತಿಯ ಕಥೆ ಮುಂದುವರಿಸಬಹುದು ಎಂದು ಅಭಿಮಾನಿಗಳು(fans) ಕಾತುರದಿಂದ ಕಾಯುತ್ತಿದ್ದಾರೆ.

ಇದನ್ನೂ ಓದಿ Cough syrup :ಕೆಮ್ಮಿನ ಸಿರಪ್ ಕುಡಿದು 18 ಮಕ್ಕಳ ಸಾವು ಭಾರತೀಯ ಕಂಪನಿಯ ಲೈಸೆನ್ಸ್ ರದ್ದು