Bride to Serve water : ಮದುವೆ ಖರ್ಚು ಹೆಚ್ಚಾಗುತ್ತೆ ಎಂದು ಕೇವಲ ನೀರು ಕೊಟ್ಟು ಉಪಚರಿಸಿದ ವಧು!!!
Bride To Serve Water: ಮದುವೆ (Marraige) ಎನ್ನುವ ಸಂಪ್ರದಾಯಕ್ಕೆ ನಮ್ಮಲ್ಲಿ ವಿಶೇಷವಾದ ಮಹತ್ವವಿದೆ. ಮದುವೆ ಎಂಬುದು ಒಂದು ಸುಮಧುರ ಭಾವ ಅಷ್ಟೆ ಅಲ್ಲದೆ, ಎರಡು ಮನಸುಗಳ ಬೆಸೆಯುವ ಕೊಂಡಿ. ಎರಡು ಕುಟುಂಬಗಳನ್ನು ಒಂದುಗೂಡಿಸುವ ಶುಭ ಕಾರ್ಯ. ಆದರೆ, ಇಂದು ಬದಲಾವಣೆಯ ಗಾಳಿ ಜೋರಾಗಿ ಬೀಸಿ ಎಲ್ಲದರಲ್ಲಿಯೂ ಬದಲಾವಣೆ ಕಂಡು ಬರುತ್ತಿದ್ದು ಸಂಬಂಧಗಳಿಗೆ ಬೆಲೆಯೇ ಇಲ್ಲದಂತಾಗಿದೆ.
ಪೋಷಕರು ನೂರಾರು ಕನಸು ಹೊತ್ತು ಮದುವೆ ಎಂಬ ಸಂಭ್ರಮಕ್ಕೆ ತಾವು ಜೀವಮಾನ( Life)ಪೂರ್ತಿ ಸಂಪಾದಿಸಿದ ಹಣವನ್ನು ಮದುವೆಗೆ ವಿನಿಯೋಗ ಮಾಡುತ್ತಾರೆ. ಆದರೆ, ಇಲ್ಲೊಬ್ಬ ಚಾಣಾಕ್ಷ ಯುವತಿ ಹಣ(Money Saving Tricks) ಉಳಿಸಲು ಮಾಡಿದ ಐಡಿಯಾ ಕೇಳಿದರೆ ನೀವು ಅಚ್ಚರಿಯಾಗೋದು ಗ್ಯಾರಂಟಿ.
ಮದುವೆ ಎಂಬುದು ಪ್ರತಿಯೊಬ್ಬರ ಬಾಳಿನ ವಿಶೇಷ ದಿನ. ಮದುವೆಯ ಅಲಂಕಾರದಿಂದ ಹಿಡಿದು ಪ್ರತಿ ಕಾರ್ಯದಲ್ಲಿಯೂ ಗ್ರಾಂಡ್ ಆಗಬೇಕೆಂದು ಎಲ್ಲರಿಗಿಂತ ವಿಶೇಷವಾಗಿ ನಮ್ಮ ಮದುವೆ ಸಮಾರಂಭ ನಡೆಯಬೇಕೆಂದು ಬಯಸುವುದು ಸಹಜ. ಅದೇ ರೀತಿ ಪ್ರೀ ವೆಡ್ಡಿಂಗ್ ಶೂಟ್(Pre-Wedding Shoot) ಪೋಸ್ಟ್ ವೆಡ್ಡಿಂಗ್ ಶೂಟ್(Post Wedding Shoot) ಹೀಗೆ ನಾನಾ ರೀತಿಯ ಕ್ರಮಗಳು ಇಂದು ಚಾಲ್ತಿಯಲ್ಲಿವೆ. ಕೆಲವೊಮ್ಮೆ ಮದುವೆ ಸಮಯಕ್ಕೆ ವ್ಯಯಿಸುವ ಹಣ ಕಂಡಾಗ ನಿಜಕ್ಕೂ ಒಂದು ದಿನದ ಆಟಕ್ಕೆ ಇದೆಲ್ಲಾ ಬೇಕಾ? ಎಂಬ ಪ್ರಶ್ನೆ ಕೆಲವರನ್ನು ಕಾಡದಿರದು. ಆದರೆ ಇಲ್ಲೊಬ್ಬಳು ಮದುವೆಯ ಹಣ ಉಳಿಸಲು (Bride To Serve Water)ಮಾಡಿರುವ ಮಾಸ್ಟರ್ ಪ್ಲಾನ್ ಕೇಳಿದರೆ ಶಾಕ್ ಆದರೂ ಅಚ್ಚರಿಯಿಲ್ಲ.
ಮದುವೆಯನ್ನು ಅರಮನೆ ಮಾದರಿಯಲ್ಲಿ ದುಂದು ವೆಚ್ಚ ಮಾಡಿ ಮಾಡೋದನ್ನು ನೋಡಿರಬಹುದು. ಆದರೆ, ಕೆಲವರು ಸುಮ್ಮನೇ ಹಣವನ್ನು ಪೋಲು ಮಾಡುವುದೇಕೆ ಅಂದುಕೊಂಡು ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ ಸರಳ ರೀತಿಯಲ್ಲಿ ಎಲ್ಲ ತಯಾರಿ ನಡೆಸುತ್ತಾರೆ. ಇಲ್ಲೊಬ್ಬ ವಧು ಹಣ ಉಳಿತಾಯ ಮಾಡುವ ನಿಟ್ಟಿನಲ್ಲಿ ಕೂಲ್ಡ್‌ಡ್ರಿಂಕ್ಸ್,(Cool Drinks) ಅಲ್ಕೋಹಾಲ್ ಕೊಡುವ ಬದಲಿಗೆ ನೀರನ್ನು (Water) ನೀಡಲು ತೀರ್ಮಾನ ಮಾಡಿದ್ದಾಳೆ.
ಮದುವೆಯ ಬಜೆಟ್ ಅನ್ನು ಕಡಿತಗೊಳಿಸಲು ವಧುವೊಬ್ಬಳು(Bride) ಮತ್ತು ಅವಳ ಸಂಗಾತಿ (Partner) ತಮ್ಮ ಮದುವೆಗೆ ತಾವಾಗಿಯೇ ಪಾವತಿ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ತಮ್ಮ ಮೆನುವಿನಿಂದ ಅಲ್ಕೋಹಾಲ್(Alchohol) ಮತ್ತು ಇತರ ಪಾನೀಯಗಳನ್ನು ಕಡಿತಗೊಳಿಸಲು ತೀರ್ಮಾನ ಕೈಗೊಂಡಿದ್ದು, ಅಲ್ಕೋಹಾಲ್ ಬದಲಿಗೆ ಫಿಲ್ಟರ್ ನೀರನ್ನು ಸರ್ವ್ ಮಾಡಲು ತೀರ್ಮಾನಿಸಿದ್ದಾರೆ. ಈ ತೀರ್ಮಾನಕ್ಕೆ ಕಾರಣವನ್ನು ಕೂಡ ಹೇಳಿಕೊಂಡಿರುವ ವಧು, ‘ನಮ್ಮ ಮದುವೆಯಲ್ಲಿ ಯಾವುದೇ ರೀತಿಯ ಮದ್ಯ (Alcohol) ಇರುವುದಿಲ್ಲ. ನಾನು ಹಾಗೂ ನನ್ನ ಸಂಗಾತಿ ಮದ್ಯ ಕುಡಿಯದ ಹಿನ್ನೆಲೆ ಅತಿಥಿಗಳಿಗೆ ಮದ್ಯ ಅಥವಾ ಫಿಜ್ಜಿ ಪಾನೀಯಗಳಿಗೆ ಪಾವತಿಸಲು ಬಯಸುವುದಿಲ್ಲ. ಇವುಗಳಿಗೆ ಹೆಚ್ಚುವರಿ ವೆಚ್ಚ ತಗುಲಲಿದೆ. ಹೀಗಾಗಿ, ನಾವು ಫಿಲ್ಟರ್ ಮಾಡಿದ ನೀರನ್ನು ಕಡಿಮೆ ವೆಚ್ಚದಲ್ಲಿ ಖರೀದಿ ಮಾಡಬಹುದು ಎಂಬ ಸಲಹೆ ನೀಡಿದ್ದಾರೆ.
ಸದ್ಯ, ವಧುವಿನ ತೀರ್ಮಾನದಿಂದ ಮದುವೆಗೆ ಬಂದ ಅತಿಥಿಗಳಿಗೆ(Guests) ಅದರಲ್ಲಿಯೂ ಮದ್ಯ ಪ್ರಿಯರಿಗೆ ನಿರಾಶೆಯಾಗಿದ್ದು, ಮದುವೆಯ ಮನೆಯಲ್ಲಿ ಓಪನ್ ಬಾರ್ ಮಾಡಬಹುದಿತ್ತು. ಎಲ್ಲರೂ ನೀರು ಕುಡಿಯಬೇಕು ಎಂದು ಬಯಸೋದು ಎಷ್ಟು ಸರಿ ಎಂದು ತಮ್ಮ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಈ ನಡುವೆ ವಧುವಿನ ನಿರ್ಧಾರದ ಕುರಿತ ಸುದ್ದಿ ಎಲ್ಲೆಡೆ ವೈರಲ್ ಆಗಿ ಸಂಚಲನ ಮೂಡಿಸಿದ್ದು, ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಏನೇ ಹೇಳಿ ವಧುವಿನ ಈ ಮಾಸ್ಟರ್ ಪ್ಲಾನ್ ಕೇಳಿ ಮುಂದಿನ ದಿನಗಳಲ್ಲಿ ಉಳಿದವರು ಕೂಡ ಅನುಕರಣೆ ಮಾಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.