Cadaver: 9 ವರ್ಷಗಳ ಹಿಂದೆ ಸಮಾಧಿಯಾದ ವ್ಯಕ್ತಿ ಮತ್ತೆ ಪ್ರತ್ಯಕ್ಷ!! ಏನಿದು ಚಮತ್ಕಾರ?
Cadaver: ಈ ಜಗವೇ ಒಂದು ವಿಸ್ಮಯ ನಗರಿ. ಇಲ್ಲಿ ನಡೆಯುವ ಕೆಲ ವಿಸ್ಮಯಗಳು ನಮ್ಮನ್ನು ಅಚ್ಚರಿಗೆ ತಳ್ಳುತ್ತವೆ. ಇದೀಗ, ಸತ್ತ ವ್ಯಕ್ತಿ ಮತ್ತೆ ಕಾಣಿಸಿಕೊಂಡರೆ ಹೇಗಿರಬಹುದು. ಯಾವುದೋ ದೆವ್ವ, ಭೂತ ಎಂದು ಪೂಜೆ ಪುನಸ್ಕಾರ ಎಂದುಕೊಂಡು ಆತ್ಮಕ್ಕೆ ಶಾಂತಿ ಸಿಗಲಿ ಏನೇನೋ ಹರಸಾಹಸ ಪಟ್ಟರು ಅಚ್ಚರಿಯಿಲ್ಲ. ಆದರೆ, ಸುಮಾರು ಒಂಬತ್ತು ವರ್ಷಗಳ ಹಿಂದೆ ಸಮಾಧಿಯಾದ ವ್ಯಕ್ತಿ(Cadaver)ಜೀವಂತವಾಗಿ ಪತ್ತೆಯಾದ ವಿಚಿತ್ರ ಘಟನೆಯೊಂದು ಚೀನಾದಲ್ಲಿ ಬೆಳಕಿಗೆ ಬಂದಿದೆ.
2014 ರಲ್ಲಿ ಕಾರು ಅಪಘಾತದಲ್ಲಿ(Car Accident) ಝುವೋ (Zhuo Kangluo )ಎಂಬ ವ್ಯಕ್ತಿ(Cadaver) ಸಾವನ್ನಪ್ಪಿದ್ದಾರೆ. ರಸ್ತೆ ಬದಿಯಲ್ಲಿ ಪತ್ತೆಯಾದ ಆತನ ಶವವನ್ನು ಆತನ ಕುಟುಂಬ ಮತ್ತು ಸ್ನೇಹಿತರು ಗುರುತಿಸಿದ್ದು(Identify) ಮೃತಪಟ್ಟ ಬಳಿಕ, ಆತನ ಕುಟುಂಬವು ಶವ(Cadaver)ಪರೀಕ್ಷೆಯನ್ನು (Post motetm) ಕೂಡ ಮಾಡಿಸದೆ ಅಂತಿಮ ವಿಧಿವಿಧಾನಗಳನ್ನು ಮಾಡಿ ಮುಗಿಸಿದ್ದಾರೆ. ಆದರೆ, ಝುವೋ ಇತ್ತೀಚೆಗೆ ಅವರ ಗ್ರಾಮದಲ್ಲಿ ಒಬ್ಬ ವ್ಯಕ್ತಿ ಕಾಣಿಸಿಕೊಂದಿದ್ದುಆತನ ವರ್ತನೆ ತುಂಬಾ ವಿಚಿತ್ರವಾಗಿತ್ತು ಎನ್ನಲಾಗಿದೆ. ಇದೇ ರೀತಿ ಗ್ರಾಮದಲ್ಲಿ ಅಡ್ಡಾಡುವ ಸಂದರ್ಭ ಸ್ಥಳೀಯ ಅಧಿಕಾರಿ ಕೂಡ ಈತನನ್ನು ಗಮನಿಸಿದ್ದಾರೆ. ಈತನ ವರ್ತನೆ ಕಂಡು ಈತ ಯಾರು? ಎಂದು ಕಂಡುಕೊಳ್ಳುವ ನಿಟ್ಟಿನಲ್ಲಿ ಚಾಂಗ್‌ಕಿಂಗ್ ಅಧಿಕಾರಿಗಳು ವ್ಯಕ್ತಿಯ ಗುರುತನ್ನು ಪತ್ತೆ ಹಚ್ಚಲು ಡಿಎನ್‌ಎ ಪರೀಕ್ಷೆ (DNA Test)ನಡೆಸಲು ತೀರ್ಮಾನಿಸಿ ಟೆಸ್ಟ್ (Test) ಮಾಡಿದ್ದು ಈ ವೇಳೆ ಆಘಾತಕಾರಿ ಮಾಹಿತಿ (Shocking News)ಬಹಿರಂಗವಾಗಿದೆ.
ಆ ವ್ಯಕ್ತಿ ಬೇರಾರು ಆಗಿರದೇ, 9 ವರ್ಷಗಳ ಹಿಂದೆ ಮೃತಪಟ್ಟಿದ್ದ ಝುವೋ ಎಂದು ತಿಳಿದ ಅಧಿಕಾರಿಗಳು ದಂಗಾಗಿದ್ದಾರೆ. ಆ ಬಳಿಕ ಝುವೋ ಅವರನ್ನು ಆತನ ಮನೆಗೆ ಕರೆದುಕೊಂಡು ಹೋಗಿ ಕುಟುಂಬದವರಿಗೆ ಗುರುತಿಸುವಂತೆ ಅಧಿಕಾರಿಗಳು ತಿಳಿಸಿದ್ದಾರೆ.ಝುವೋ ಅವರನ್ನು ಮೊಮ್ಮಗ ಗುರುತಿಸಿದ್ದು,
ವರದಿಯ ಅನುಸಾರ, ತನ್ನ ಮೊಮ್ಮಗನನ್ನು ಭೇಟಿಯಾದಾಗ, ಝುವೋ ಕಣ್ಣೀರು ಹಾಕಿದರಂತೆ. ಅಷ್ಟೆ ಅಲ್ಲದೇ, ತನ್ನ ಎಲ್ಲ ಆತ್ಮೀಯರ ಹೆಸರನ್ನು ಕೂಡ ಬರೆದಿದ್ದಾರಂತೆ. ಹೀಗಾಗಿ, ಕಳೆದುಹೋದ ವ್ಯಕ್ತಿ ಮರಳಿ ಗೂಡಿಗೆ ಸೇರುವಂತೆ ಆಗಿದ್ದು, ಇದೀಗ,ಝುವೋ ಎಂಬ ಹೆಸರಿನಲ್ಲಿ ಕುಟುಂಬ ಅಂತ್ಯಕ್ರಿಯೆ ನಡೆಸಿದ ವ್ಯಕ್ತಿ ಯಾರು ಎಂಬ ಪ್ರಶ್ನೆ ನಿಗೂಢವಾಗಿ ಉಳಿದಿದ್ದು, ಸದ್ಯ, 2014 ರಲ್ಲಿ ಸಾವನ್ನಪ್ಪಿದ ವ್ಯಕ್ತಿ ಗುರುತನ್ನು ಪತ್ತೆ ಹಚ್ಚುವಲ್ಲಿ ಖಾಕಿ ಪಡೆ ನಿರತರಾಗಿದ್ದಾರೆ.