Siddaramaiah :ಮುಗಿಯದ ಕ್ಷೇತ್ರ ಆಯ್ಕೆ ಗೊಂದಲ! ಮೊದಲ ಸಲ ಕುಟುಂಬ ಸಲಹೆಯ ಮೊರೆ ಹೋದ ಸಿದ್ದು! ಅಷ್ಟಕ್ಕೂ ಪತ್ನಿ ಮತ್ತು ಪುತ್ರ ಹೇಳಿದ್ದೇನು?
Karnataka election 2023: ಚುನಾವಣೆ ಹತ್ತಿರವಾದರೂ ಕಾಂಗ್ರೆಸ್(Congress) ನ ಮಾಸ್ ಲೀಡರ್, ಮಾಜಿ ಸಿಎಂ ಸಿದ್ದರಾಮಯ್ಯನ( Siddaramaiah) ವರ ಕ್ಷೇತ್ರ ಯಾವುದೆಂದು ಇನ್ನೂ ಅಂತಿಮವಾಗಿಲ್ಲ. ಕೋಲಾರ(Kolara)ವೇ ನಾನು ಸ್ಪರ್ಧಿಸೋ ಕ್ಷೇತ್ರವೆಂದು ಉಮೇದಿನಿಂದ ಹೇಳಿಕೊಂಡಿದ್ದ ಸಿದ್ದುಗೆ ಹೈಕಮಾಂಡ್ ಬೇರೆ ಶಾಕ್ ನೀಡಿದೆ. ಈ ಹಿನ್ನೆಲೆಯಲ್ಲಿ ಸಿದ್ದು ಸ್ಪರ್ಧಿಸೋ ಕ್ಷೇತ್ರ ಯಾವುದು ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ. ಈ ನಡುವೆ ಕ್ಷೇತ್ರ ಆಯ್ಕೆಯ ಗೊಂದಲದಲ್ಲಿರುವ ಸಿದ್ದರಾಮಯ್ಯ (Siddaramaiah) ಪರಿಹಾರ ಹುಡುಕಲು ಕುಟುಂಬಸ್ಥರ ಮೊರೆ ಹೋಗಿದ್ದಾರೆ.
ಹೌದು, ತಮ್ಮ ಕ್ಷೇತ್ರದ ಆಯ್ಕೆ ವಿಚಾರವಾಗಿ ಸಿದ್ದರಾಮಯ್ಯ ಅವರು ಇದೇ ಮೊದಲ ಬಾರಿಗೆ ತಮ್ಮ ಕುಟುಂಬದ ಮೊರೆ ಹೋಗಿದ್ದಾರೆ. ಖುದ್ದಾಗಿ ಸಿದ್ದು ಅವರೇ ಪತ್ನಿ ಪಾರ್ವತಿ (Parvathy) ಹಾಗೂ ಪುತ್ರ ಯತೀಂದ್ರರ (Yatindra) ಅಭಿಪ್ರಾಯ ಕೇಳಿದ್ದಾರೆ. ಆದರೆ ಇವರಿಬ್ಬರು ನೀಡಿದ ವಿಭಿನ್ನ ಸಲಹೆಗಳು ಸಿದ್ದರಾಮಯ್ಯರನ್ನು ಮತ್ತಷ್ಟು ಗೊಂದಲಕ್ಕೆ ತಳ್ಳಿದೆ.
ಅಷ್ಟಕ್ಕೂ ಸಿದ್ದರಾಮಯ್ಯ ಪತ್ನಿ ಹೇಳಿದ್ದೇನು?: ಸಿದ್ದರಾಮಯ್ಯನಿಗೆ ಹೈಕಮಾಂಡ್ ನೀವು ಕೋಲಾರದ ಬದಲು ವರುಣಾದಿಂದಲೇ ಸ್ಪರ್ಧಿಸಿ ಎಂದು ಸಲಹೆ ನೀಡಿದೆ. ಈ ವಿಚಾರವಾಗಿ ಪಾರ್ವತಿಯವರು ವರುಣಾಗೆ ಹೋಗಿ ಮಗನ ಭವಿಷ್ಯ ಹಾಳು ಮಾಡುವುದು ಸರಿಯಲ್ಲ. ಅವನಿಗೆ ವರುಣ ಕೈ ತಪ್ಪಿದರೆ ಮುಂದೆಂದೂ ಟಿಕೆಟ್ ಸಿಗದ ಪರಿಸ್ಥಿತಿ ಬರಬಹುದು. ಮಗನ ರಾಜಕೀಯ ಭವಿಷ್ಯ ಒಮ್ಮೆ ಬಿದ್ದರೆ ಮತ್ತೆ ಏಳುವುದು ಕಷ್ಟವಾಗುತ್ತದೆ. ಹೀಗಾಗಿ ವರುಣಾದಲ್ಲಿ (Varuna) ಮಗನನ್ನು ಗೆಲ್ಲಿಸಿ ಒಂದು ಅವಧಿಗೆ ಮಂತ್ರಿ ಮಾಡಿ. ನೀವು ಕೋಲಾರಕ್ಕೆ (Kolara) ಹೋದರೆ ಗೆಲ್ಲಬಹುದು ಎಂದು ಪತ್ನಿ ಪಾರ್ವತಿ ಸಲಹೆ ನೀಡಿದ್ದಾರೆ.
ಅಂದಹಾಗೆ ಸಿದ್ದರಾಮಯ್ಯ ಪತ್ನಿ ಸಲಹೆ ಕೇಳಲು ಕಾರಣವೂ ಇದೆ. ಅದೇನೆಂದರೆ ಕಳೆದ ಬಾರಿ ಚಾಮುಂಡೇಶ್ವರಿಯಲ್ಲಿ (Chamundeshwari Constituency) ಸ್ಪರ್ಧಿಸಬೇಡಿ. ಬೇರೆ ಕ್ಷೇತ್ರವನ್ನು ಆಯ್ಕೆ ಮಾಡಿ ಎಂದು ಪತ್ನಿ ಸಲಹೆ ಕೊಟ್ಟಿದ್ದರು. ಆದರೆ ಈ ಸಲಹೆ ಪರಿಗಣಿಸದ ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಜೆಡಿಎಸ್‌ನ ಜಿಟಿ ದೇವೇಗೌಡ (GT Devegowda) ವಿರುದ್ಧ ಕಣಕ್ಕಿಳಿದ್ದರು. ಕೊನೆಗೆ ಸೋಲನ್ನೂ ಅನುಭವಿಸಿದ್ದರು.
ಇನ್ನು ಸಿದ್ದು ಪುತ್ರ ಯತೀಂದ್ರ(Yatindra) ಹೇಳೋದೇನು?
ಕೋಲಾರದಲ್ಲಿ ಹೇಳಿದಷ್ಟು ಸುಲಭ ಇಲ್ಲ. ಹೈಕಮಾಂಡ್ ಸೂಚಿಸಿದಂತೆ ಅಲ್ಲಿ ಗೆಲುವು ಸ್ವಲ್ಪ ಕಷ್ಟ ಸಾಧ್ಯ. ನಮ್ಮ ಪರ ನಿಲ್ಲುವ ಯಾವುದೇ ಘಟಾನು ಘಟಿಗಳು ಅಲ್ಲಿಲ್ಲ. ನೀವು ಕೊನೆಯ ಚುನಾವಣೆ ಎಂದು ಬೇರೆ ಹೇಳುತ್ತಿದ್ದೀರಿ. ಇದರಲ್ಲಿ ವಿಪರೀತ ರಿಸ್ಕ್ ತೆಗೆದುಕೊಳ್ಳುವುದು ಬೇಡ. ವರುಣಾ ಕ್ಷೇತ್ರದಲ್ಲಿ ಸುಲಭವಾಗಿ ಗೆಲ್ಲಬಹುದು. ನಾನು ಬೇರೆ ಎಲ್ಲಿಯೂ ಸ್ಪರ್ಧೆ ಮಾಡುವುದಿಲ್ಲ ನಿಮ್ಮನ್ನು ಗೆಲ್ಲಿಸಿಕೊಡುತ್ತೇನೆ ಎಂದು ಹೇಳಿದ್ದಾರೆ.
ಸಿದ್ದು ಮನಸ್ಸಲ್ಲಿ ಏನಿದೆ?
ಕೋಲಾರದಲ್ಲಿ ರಿಸ್ಕ್ ಜಾಸ್ತಿ ಎಂಬ ಹಿರಿಯ ನಾಯಕರು, ಕಾಂಗ್ರೆಸ್ ಹೈಕಮಾಂಡ್ ಅಭಿಪ್ರಾಯಕ್ಕೆ ಸಿದ್ದರಾಮಯ್ಯ ಸಹಮತ ವ್ಯಕ್ತಪಡಿಸಿದ್ದಾರೆ. ಹೀಗಾಗಿ ವರುಣಾದಿಂದ ಸ್ಪರ್ಧಿಸುವ ಆಸೆ ಇದ್ದರೂ ಇದಕ್ಕೆ ಪುತ್ರ ವ್ಯಾಮೋಹ ಅಡ್ಡಿಯಾಗುತ್ತಿದೆ. ನಾನು ಸ್ಪರ್ಧಿಸಿದರೆ ಪುತ್ರ ಯತೀಂದ್ರ ರಾಜಕೀಯ ಜೀವನಕ್ಕೆ ಅಡ್ಡಿಯಾಗಬಹದು ಎಂಬ ಭೀತಿ ಕಾಡುತ್ತಿದೆ. ಈ ಕಾರಣಕ್ಕೆ ಇನ್ನೂ ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಬೇಕು ಎಂಬ ಗೊಂದಲದಲ್ಲಿ ಸಿದ್ದರಾಮಯ್ಯ ಇದ್ದಾರೆ.
ಒಟ್ಟಿನಲ್ಲಿ ಪ್ರತೀ ವರ್ಷವೂ ಕ್ಷೇತ್ರ ಬದಲಿಸಿ ಸುಲಭದಲ್ಲಿ ಗೆಲ್ಲುವ ಸಿದ್ದರಾಮಯ್ಯನಿಗೆ ಈ ಸಲದ ಚುನಾವಣೆಯಲ್ಲಿ (Karnataka election 2023) ಕ್ಷೇತ್ರದ ಆಯ್ಕೆಯೇ ಕಗ್ಗಂಟಾಗಿದೆ. ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಿದರೆ ನಾನು ಗೆಲ್ಲಬಹುದು ಎಂಬ ಗೊಂದಲ ಸೃಷ್ಟಿಯಾಗಿದೆ. ಕೊನೆಯ ಚುನಾವಣೆ ಬೇರೆ. ಒಂದು ವೇಳೆ ಸೋತರೆ ಪ್ರತಿಷ್ಟೆಯ ಪ್ರಶ್ನೆ ಬೇರೆ ಎದುರಾಗುತ್ತದೆ. ಹೀಗಾಗಿ ಎಲ್ಲಾ ರೀತಿಯಿಂದಲೂ ಯೋಚನೆ ಮಾಡಿ ಜಾಗರೂಕ ಹೆಜ್ಜೆ ಇಡಬೇಕಾಗುತ್ತದೆ.
ಇದನ್ನೂ ಓದಿ: Vehicle inspection for election: ಚುನಾವಣೆ ಹಿನ್ನೆಲೆಯಲ್ಲಿ ವಾಹನ ತಪಾಸಣೆ : ಕೋಟ್ಯಾಂತರ ಮೌಲ್ಯದ ಚಿನ್ನಾಭರಣ ವಶಕ್ಕೆ