Home Jobs BMRCL Recruitment 2023 : ಬಿಎಂಆರ್ ಸಿಎಲ್ ನಲ್ಲಿ ಭರ್ಜರಿ ಉದ್ಯೋಗವಕಾಶ ! ವಿವಿಧ ಹುದ್ದೆಗಳಿಗೆ...

BMRCL Recruitment 2023 : ಬಿಎಂಆರ್ ಸಿಎಲ್ ನಲ್ಲಿ ಭರ್ಜರಿ ಉದ್ಯೋಗವಕಾಶ ! ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ! ಇಲ್ಲಿದೆ ವಿವರ

BMRCL Recruitment 2023

Hindu neighbor gifts plot of land

Hindu neighbour gifts land to Muslim journalist

BMRCL Recruitment 2023 : ಉದ್ಯೋಗಾಕಾಂಕ್ಷಿಗಳಿಗೆ ಬಿಎಂಆರ್‌ಸಿಎಲ್‌ (BMRCL Recruitment 2023) ಕಡೆಯಿಂದ ಗುಡ್‌ ನ್ಯೂಸ್‌ ಇದೆ. ಬೆಂಗಳೂರಿನಲ್ಲಿ ತಮ್ಮ ವೃತ್ತಿಯಲ್ಲೇ(Bangalore Job) ಕೆಲಸ ಹುಡುಕುತ್ತಿರುವವರಿಗೆ ಇಲ್ಲಿದೆ ಸುವರ್ಣಾವಕಾಶ. ಆಸಕ್ತ ಅಭ್ಯರ್ಥಿಗಳು ಈ ಕೆಳಕಂಡ ದಿನಾಂಕದೊಳಗೆ ಅರ್ಜಿ ಸಲ್ಲಿಸಬಹುದು. ದಿನಾಂಕ ಏಪ್ರಿಲ್‌ 24ರಂದು ಅಥವಾ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ವಿವಿಧ ಹುದ್ದೆಗಳಿಗೆ ಉದ್ಯೋಗಾಕಾಂಕ್ಷಿಗಳು ಅರ್ಜಿ ಹಾಕಬಹುದು. 236 ಸ್ಟೇಷನ್ ಕಂಟ್ರೋಲರ್ ಮತ್ತು ಟ್ರೈನ್ ಆಪರೇಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್(BMRCL) ಸ್ಟೇಷನ್ ಕಂಟ್ರೋಲರ್ / ಟ್ರೈನ್ ಆಪರೇಟರ್ ಪೋಸ್ಟ್‌ಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಸಂಸ್ಥೆಯ ಹೆಸರು: ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ
ಹುದ್ದೆಗಳ ಸಂಖ್ಯೆ: 236
ಉದ್ಯೋಗ ಸ್ಥಳ: ಬೆಂಗಳೂರು
ಪೋಸ್ಟ್ ಹೆಸರು: ಸ್ಟೇಷನ್ ಕಂಟ್ರೋಲರ್ ಮತ್ತು ಟ್ರೈನ್ ಆಪರೇಟರ್
ವೇತನ: ರೂ.25000 – 59060/- ರೂಪಾಯಿ ಸಂಬಳವಿದೆ.

ಅರ್ಜಿ ಸಲ್ಲಿಸುವ ದಿನಾಂಕ
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 24-03-2023
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಏಪ್ರಿಲ್‌ 24 – 2023
ಅರ್ಜಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: ಏಪ್ರಿಲ್‌ 27–2023
ಲಿಖಿತ ಪರೀಕ್ಷೆ: 6ನೇ, 7ನೇ ಮತ್ತು 8ನೇ ಜೂನ್ 2023

ವೇತನ ವಿವರಗಳು : ಸ್ಟೇಷನ್ ಕಂಟ್ರೋಲರ್ / ಟ್ರೈನ್ ಆಪರೇಟರ್- ರೂ. 35000 – 82660/-
ಸೆಕ್ಷನ್ ಇಂಜಿನಿಯರ್- ರೂ. 40000 – 94500/-
ನಿರ್ವಾಹಕರು- ರೂ. 25000 – 59060/-

ಶಿಕ್ಷಣ ಅರ್ಹತೆ: ಬಿಎಂಆರ್‌ ಸಿಎಲ್‌ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ITI, ಡಿಪ್ಲೊಮಾ, BE/B ಟೆಕ್ ಇಂಜಿನಿಯರಿಂಗ್ ಪೂರ್ಣಗೊಳಿಸರಬೇಕು.

ವಯೋಮಿತಿ: ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 35 ವರ್ಷಗಳನ್ನು ಹೊಂದಿರಬೇಕು.

ವಯೋಮಿತಿ ಸಡಿಲಿಕೆ: 2A, 2B, 3A, 3B ಅಭ್ಯರ್ಥಿಗಳು: 3 ವರ್ಷಗಳು SC, ST ಅಭ್ಯರ್ಥಿಗಳು: 5 ವರ್ಷಗಳು

ಅರ್ಜಿ ಶುಲ್ಕ: ಸಾಮಾನ್ಯ, 2A, 2B, 3A, 3B ಅಭ್ಯರ್ಥಿಗಳು: 1180 + 18% GST
SC/ST ಅಭ್ಯರ್ಥಿಗಳು: 590+ 18% GST

ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ, ಮೆರಿಟ್ ಮತ್ತು ಸಂದರ್ಶನ