Nitin Gadkari On Toll Tax : ವಾಹನ ಸವಾರರೇ ನಿಮಗೊಂದು ಭರ್ಜರಿ ಸಿಹಿ ಸುದ್ದಿ ನೀಡಿದ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ!

Nitin Gadkari On Toll Tax: ವಾಹನ ಸವಾರರೇ ಗಮನಿಸಿ, ನಿಮಗೊಂದು ಸೂಪರ್ ಡೂಪರ್ ಖುಷಿ ಸುದ್ದಿಯೊಂದು ಹೊರಬಿದ್ದಿದೆ. ಹೌದು!! ಹೆದ್ದಾರಿಗಳಲ್ಲಿ ಸಂಚರಿಸುವವರಿಗೆ ಟೋಲ್ ಪಾವತಿ ಕುರಿತು (Toll Tax New Rule) ಕೇಂದ್ರ ಹೆದ್ಧಾರಿ ಸಚಿವ ನಿತೀನ್ ಗಡ್ಕರಿ(Nitin Gadkari)ಸಿಹಿ ಸುದ್ದಿಯನ್ನು ಪ್ರಕಟಿಸಿದ್ದಾರೆ.

ಒಂದು ವೇಳೆ ನೀವು ಹೆದ್ಧಾರಿಯಲ್ಲಿ ಸಂಚರಿಸುತ್ತಿರುವವರಾದರೆ ಈ ಸುದ್ದಿ ತಿಳಿದುಕೊಳ್ಳವುದು ಉತ್ತಮ. ದೈನಂದಿನ ಪ್ರತಿ ವಸ್ತುಗಳ ಬೆಲೆ ಏರಿಕೆ ನಡುವೆ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯ ಜೊತೆಗೆ ಟೋಲ್ ತೆರಿಗೆ ಕೂಡ ಸೇರಿ ಜೇಬಿಗೆ ಕತ್ತರಿ ಬೀಳುವುದು ಸಾಮಾನ್ಯ ವಿಚಾರವಾಗಿತ್ತು. ಆದರೆ, ಇನ್ಮುಂದೆ ನೀವು ಟೋಲ್ ತೆರಿಗೆ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಯಾಕೆ ಅಂತೀರಾ? ಕೇಂದ್ರ ಸಚಿವ ನಿತೀನ್ ಗಡ್ಕರಿ ಯವರು ಟೋಲ್ ಪಾವತಿ ಕುರಿತ ಮಹತ್ತ್ವದ ಮಾಹಿತಿಯನ್ನು ನೀಡಿದ್ದಾರೆ.

ಹೆದ್ದಾರಿಯಲ್ಲಿ ಸಂಚರಿಸುವವರಿಗೆ ಖುಷಿಯ ಸಂಗತಿ ಇಲ್ಲಿದೆ ನೋಡಿ. ದೇಶದ ಎಲ್ಲಾ ಹೆದ್ದಾರಿಗಳಿಂದ ಟೋಲ್ ತೆರಿಗೆ ನಿಯಮಗಳನ್ನು (Toll Tax New Rule)ಸರ್ಕಾರ ಶೀಘ್ರದಲ್ಲೇ ತೆಗೆದುಹಾಕುವ ಯೋಜನೆ ಹಾಕಿಕೊಂಡಿದೆ. ಇದರಿಂದಾಗಿ ಟೋಲ್ ಟ್ಯಾಕ್ಸ್ ಕಟ್ಟುವ ಸಲುವಾಗಿ ಗಂಟೆಗಟ್ಟಲೆ ಕಾದು ಪಾವತಿ ಮಾಡುವ ಅನಿವಾರ್ಯತೆ ಎದುರಾಗದು. ಈ ಕುರಿತ ಮಾಹಿತಿಯನ್ನು ಕೇಂದ್ರ ಸಾರಿಗೆ ಸಚಿವರು ಖುದ್ದಾಗಿ ಸಂಸತ್ತಿನಲ್ಲಿ ಪ್ರಕಟಿಸಿದ್ದಾರೆ.

ಗಣಕೀಕೃತ ವ್ಯವಸ್ಥೆಯ ಮೂಲಕ ಸಾಫ್ಟ್‌ವೇರ್ ಮೂಲಕ ಟೋಲ್ ಸಂಗ್ರಹಣೆ ಮಾಡಲಾಗುತ್ತದೆ.ದೇಶಾದ್ಯಂತ ಟೋಲ್ ತೆರಿಗೆಯಲ್ಲಿ ಪಾರದರ್ಶಕತೆ ತರಲು ಸರ್ಕಾರ ಈ ತೀರ್ಮಾನ ಕೈಗೊಂಡಿದೆ. ಜಿಪಿಎಸ್ ವ್ಯವಸ್ಥೆ(GPS) ಮೂಲಕ ವಾಹನ ಮಾಲೀಕರ ಖಾತೆಯಿಂದ ನೇರವಾಗಿ ಟೋಲ್ ಸಂಗ್ರಹಿಸುವ ತಂತ್ರಗಾರಿಕೆಯ ಅಳವಡಿಸುವ ಕುರಿತ ಕೆಲಸ ನಡೆಯುತ್ತಿದೆ. ಕಳೆದ ವರ್ಷದಿಂದ ಈ ತಂತ್ರಜ್ಞಾನದ ಮೇಲೆ ಕೆಲಸ ನಡೆಯುತ್ತಿದ್ದು, ಇದು ಶೀಘ್ರದಲ್ಲೇ ಕಾರ್ಯರೂಪಕ್ಕೆ ಬರಲಿದೆ ಎಂದು ಮಾಹಿತಿ ನೀಡಿದ್ದಾರೆ.

ಒಂದು ವರ್ಷದ ಒಳಗಾಗಿ ಹೊಸ ತಂತ್ರಜ್ಞಾನದ ನೆರವಿನಿಂದ ದೇಶದಲ್ಲಿ ಟೋಲ್ ಸಂಗ್ರಹಣೆ ಮಾಡುವ ಕುರಿತು ನಿತಿನ್ ಗಡ್ಕರಿಯವರು (Nitin Gadkari On Toll Tax)ಭರವಸೆ ನೀಡಿದ್ದಾರೆ. ಇದಲ್ಲದೆ, ಫಾಸ್ಟ್ಯಾಗ್ ವ್ಯವಸ್ಥೆಯ ಜಾರಿಯಿಂದ ವಾಹನ ಸವಾರರಿಗೆ ನೆರವಾಗಲಿದೆ.’ ಒಂದು ವರ್ಷದೊಳಗೆ ದೇಶದಲ್ಲಿ ಇರುವ ಟೋಲ್ ಬೂತ್‌ಗಳನ್ನು ತೆಗೆದುಹಾಕುವ ಪ್ರಕ್ರಿಯೆ ಜೊತೆಗೆ ದೇಶಾದ್ಯಂತ ಟೋಲ್ ಸಂಗ್ರಹಕ್ಕೆ ಜಿಪಿಎಸ್ ತಂತ್ರಜ್ಞಾನವನ್ನು ಬಳಕೆ ಮಾಡುವ ಕುರಿತು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಸಂಸತ್ತಿನಲ್ಲಿ ಭರವಸೆ ನೀಡಿದ್ದಾರೆ.

ಸರ್ಕಾರದ(Government)ಹೊಸ ಯೋಜನೆಯು ಪಾರದರ್ಶಕತೆಗೆ ಹೆಚ್ಚು ಒತ್ತು ನೀಡುತ್ತಿದೆ. ಹೊಸ ತಂತ್ರಜ್ಞಾನದ ಅನುಸಾರ, ನಂಬರ್ ಪ್ಲೇಟ್‌ಗೆ ಚಿಪ್ ಅಳವಡಿಸಲಾಗುತ್ತದೆ. ಆ ಬಳಿಕ ಹಳೆಯ ನಂಬರ್ ಪ್ಲೇಟ್ ಅನ್ನು ಹೊಸ ನಂಬರ್ ಪ್ಲೇಟ್( Number Plate)ಆಗಿ ಪರಿವರ್ತಿಸಲಾಗುತ್ತದೆ. ಸರ್ಕಾರ ತಯಾರಿಸುತ್ತಿರುವ ಹೊಸ ತಂತ್ರಜ್ಞಾನದಿಂದಾಗಿ ಯಾವುದೇ ಚಾಲಕರಿಂದ ತಪ್ಪು ತೆರಿಗೆ ಸಂಗ್ರಹಣೆಗೆ ಆಸ್ಪದ ವಿರುವುದಿಲ್ಲ. ಸದ್ಯ, ದೇಶದ ಹೆದ್ದಾರಿಗಳಲ್ಲಿ ಟೋಲ್ ಪ್ಲಾಜಾಗಳಿದ್ದು, ಇವುಗಳಲ್ಲಿ ಫಾಸ್ಟ್ಯಾಗ್ ಸಹಾಯದಿಂದ ರಿಕವರಿ ಮಾಡಲಾಗುತ್ತಿದೆ. ಈ ಹೊಸ ಕ್ರಮದಿಂದ ವಾಹನ ಸವಾರರಿಗೆ ಹೆಚ್ಚಿನ ಪ್ರಯೋಜನ ಉಂಟಾಗುತ್ತದೆ ಎನ್ನಲಾಗಿದೆ.

ಇದನ್ನೂ ಓದಿ: School Meals and Ragimalt: ಸರಕಾರಿ ಶಾಲಾ ಮಕ್ಕಳಿಗೆ ಸಿಹಿ ಸುದ್ದಿ! ದೊರೆಯಲಿದೆ ಬಿಸಿಯೂಟದ ಜೊತೆಗೆ ರಾಗಿ ಮಾಲ್ಟ್!

Leave A Reply

Your email address will not be published.