Tirupati: ಭಕ್ತೆಯಿಂದ ತಿರುಪತಿ ತಿಮ್ಮಪ್ಪನ ಹುಂಡಿಗೆ ಸೇರಿತು ಭಾರಿ ಮೊತ್ತದ ದೇಣಿಗೆ!!
Tirupati: ಚಿತ್ತೂರು ಜಿಲ್ಲೆಯ (Chittoor district) ಆಂಧ್ರಪ್ರದೇಶದಲಿರುವ (Andhra Pradesh) ತಿರುಪತಿಯು (Tirupati) ಹಿಂದೂ ಧರ್ಮದವರು (Hindu religion) ಮೊದಲಿನಿಂದಲು ಆರಾಧನೆ ಮಾಡಿಕೊಂಡು ಬಂದ ಬೃಹತ್ ದೇವಾಲಯವಾಗಿದೆ (temple). ಭಕ್ತಿಯಿಂದ ಶ್ರೀ ವೆಂಕಟರಮಣ ದೇವರ ಆಶೀರ್ವಾದವನ್ನು ಪಡೆದುಕೊಳ್ಳಲು ಇಲ್ಲಿಗೆ ಪ್ರತಿ ವರ್ಷ ಲಕ್ಷಾಂತರ ಭಕ್ತಾಭಿಮಾನಿಗಳು ಭೇಟಿ ನೀಡುತ್ತಾರೆ.
ತಿರುಪತಿ ತಿಮ್ಮಪ್ಪನ ದೇವಾಲಯವು (tirupati timmappa temple) ಅತ್ಯಂತ ಜನಪ್ರಿಯ ದೇವಾಲಯವಾಗಿದೆ. ಈ ದೇವಾಲಯಕ್ಕೆ ಎಣಿಕೆಗೂ ಮೀರಿದ ಭಕ್ತರು ಭೇಟಿ ನೀಡುತ್ತಾರೆ. ಈ ದೇವಾಲಯ ಹೆಚ್ಚಿನ ಪ್ರಮಾಣದ ದಾನಗಳನ್ನು ಪಡೆದುಕೊಳ್ಳುವ ದೇವಾಲಯಗಳಲ್ಲಿ ಒಂದಾಗಿದೆ. ಭಕ್ತರು ತಮ್ಮೆಲ್ಲಾ ಇಚ್ಛೆಯನ್ನು ಈಡೇರಿಸುವಂತೆ ಭಗವಂತನಲ್ಲಿ ಬೇಡಿಕೊಳ್ಳುತ್ತಾರೆ. ಮತ್ತು ಇಚ್ಛೆ ಫಲಿಸಿದ ನಂತರ ದೇವಾಲಯದ (tirupati temple) ಹುಂಡಿಯಲ್ಲಿ ತಮ್ಮ ದಾನವನ್ನು ನೀಡುವುದು ವಾಡಿಕೆ. ಈ ರೀತಿಯಾಗಿ ಲಕ್ಷಾಂತರ ಭಕ್ತರು ತಮ್ಮ ದಾನವನ್ನು ನೀಡಲು ಇಲ್ಲಿನ ದೇವಾಲಯಕ್ಕೆ ಆಗಮಿಸುತ್ತಾರೆ. ಆದರೆ ಇದೀಗ ಸಾಮಾನ್ಯ ಮಹಿಳೆಯಿಂದ ತಿರುಪತಿ ತಿಮ್ಮಪ್ಪನಿಗೆ ಭಾರಿ ಮೊತ್ತದ ದೇಣಿಗೆ ಬಂದಿದ್ದು, ಇವರು ವೆಂಟೇಶ್ವರನಿಗೆ ನೀಡಿರುವ ದೇಣಿಗೆಯ ಮೊತ್ತವೇ ಬೆಕ್ಕಸ ಬೆರಗಾಗಿಸುತ್ತೆ!
ಹೌದು, ಹೈದರಾಬಾದ್ನ (Hyderabad) ಸರೋಜಿನಿ ವಡ್ಲಮುಡಿ ಎಂಬ ಭಕ್ತೆ ತಿರುಮತಿ ತಿರುಮಲ ದೇವಸ್ಥಾನ ಆಡಳಿತ ಮಂಡಳಿಗೆ ಬರೋಬ್ಬರಿ ಒಂದು ಕೋಟಿ ಹಣವನ್ನು ದೇಣಿಗೆ ನೀಡಿದ್ದಾರೆ. ದೇಣಿಗೆ ನೀಡಿ ವೆಂಟೇಶ್ವರನ ಆಶೀರ್ವಾದ ಪಡೆದುಕೊಂಡಿದ್ದಾರೆ.
ತಿರುಪತಿ ತಿಮ್ಮಪ್ಪನ ದೇವಾಲಯವು ಸದಾ ಜನಜಂಗುಳಿಯಿಂದ ಕೂಡಿರುತ್ತದೆ. ಸ್ವಾಮಿಯ ದರ್ಶನಕ್ಕೆ ನಿತ್ಯ ಸಾವಿರಾರು ಭಕ್ತರು ಆಗಮಿಸುತ್ತಾರೆ. ಪ್ರತಿದಿನ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಸುಮಾರು 60 ರಿಂದ 70 ಸಾವಿರ ಭಕ್ತರು ಆಗಮಿಸುತ್ತಾರೆ. ಈ ಭಕ್ತರಿಂದ ತಿರುಪತಿ ತಿಮ್ಮಪ್ಪನ ಹುಂಡಿಗೆ ದಿನವೊಂದಕ್ಕೆ ಸರಿ ಸುಮಾರು 3 ಕೋಟಿ ಹಣ ಸೇರುತ್ತದೆ. ಸದ್ಯ ಒಬ್ಬ ಭಕ್ತೆಯಿಂದಲೇ ಬರೋಬ್ಬರಿ ಒಂದು ಕೋಟಿ ಸೇರಿದೆ.