Home Karnataka State Politics Updates BR Patil: ಸಿದ್ದರಾಮಯ್ಯಗಾಗಿ ನಾನು ಕ್ಷೇತ್ರ ತ್ಯಾಗ ಮಾಡುವುದಕ್ಕೂ ಸಿದ್ದ: ಬಿ.ಆರ್‌ ಪಾಟೀಲ್‌

BR Patil: ಸಿದ್ದರಾಮಯ್ಯಗಾಗಿ ನಾನು ಕ್ಷೇತ್ರ ತ್ಯಾಗ ಮಾಡುವುದಕ್ಕೂ ಸಿದ್ದ: ಬಿ.ಆರ್‌ ಪಾಟೀಲ್‌

B R Patil

Hindu neighbor gifts plot of land

Hindu neighbour gifts land to Muslim journalist

BR Patil: ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿ ಸಿದ್ದರಾಮಯ್ಯಗಾಗಿ ನಾನು ಕ್ಷೇತ್ರ ತ್ಯಾಗ ಮಾಡುವುದಕ್ಕೂ ರೆಡಿ ಇದ್ದೇನೆ ಎಂದು ಮಾಜಿ ಉಪಸಭಾಪತಿ ಬಿ.ಆರ್‌ ಪಾಟೀಲ್‌ (BR Patil) ಅವರು ಸಿದ್ದಾರಮಯ್ಯಗೆ ಬಹಿರಂಗವಾಗಿ ಆಹ್ವಾನ ನೀಡಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಚುನಾವಣೆಗೆ ಸ್ಪರ್ಧಿಸುವ ಕ್ಷೇತ್ರ ಕುರಿತು ರಾಜಕೀಯ ವಲಯದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಈ ಕುರಿತು ಸಿದ್ದರಾಮಯ್ಯ ಆಪ್ತ ಮಾಜಿ ಉಪ ಸಭಾಪತಿ ಬಿಆರ್ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ. ಅವರಿಗಾಗಿ ನಾನು ಕ್ಷೇತ್ರ ತ್ಯಾಗ ಮಾಡಲು ಸಿದ್ದವಾಗಿದ್ದೇನೆ ಎಂದು ಸಿದ್ದರಾಮಯ್ಯಗೆ ಆಳಂದ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಬಿ.ಆರ್‌ ಪಾಟೀಲ್‌ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಆಳಂದ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ರೆ ಅವರನ್ನು ಸಂತಸದಿಂದಿ
ಸ್ವಾಗತಿಸುತ್ತೇನೆ. ಬರಿ ನಾಮೀನೇಷನ್‌ ಫೈಲ್‌ ಮಾಡಿ ಹೋದರೆ ಸಾಕು. ಅವರನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನನ್ನದು ಎಂದು ಭರವಸೆ ನೀಡಿದ್ದಾರೆ. ಸಿದ್ದರಾಮಯ್ಯ ಈಗಾಗಲೇ ಒಮ್ಮೆ ಮುಖ್ಯಮಂತ್ರಿಯಾದವರು. ಮತ್ತೊಮ್ಮೆ ಅವಕಾಶ ಸಿಕ್ಕರೆ ಅವರೇ ಸಿಎಂ ಆಗಲಿ. ಸಿದ್ದರಾಮಯ್ಯ ಆಳಂದದಿಂದ ಸ್ಪರ್ಧಿಸಿದರೆ, ನನಗೆ ಹಾಲು ಕುಡಿದಷ್ಟೇ ಸಂತೋಷವಾಗುತ್ತದೆ. ಅವರಿಗಾಗಿ ಕ್ಷೇತ್ರ ತ್ಯಾಗ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಪರ ಬಿಆರ್‌ ಪಾಟೀಲ್‌ ಬ್ಯಾಟಿಂಗ್‌ ಮಾಡಿದ್ದಾರೆ.

ಈ ಹಿಂದೆಷ್ಟೆ ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧಿಸುವುದಾಗಿ ಹೇಳಿದ್ದರು. ಆದ್ರೆ ಮೊನ್ನೆ ತಾನೆ ಕಾಂಗ್ರೆಸ್‌ ನಾಯಕರಾದ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಅವರು ಹೈಕಂಮಾಡ್‌ ಭೇಟಿಯಾಗಿ ಸಭೆ ನಡೆಸಿದ್ದು, ಕಾಂಗ್ರೆಸ್‌ ಅಭ್ಯರ್ಥಿ ಪಟ್ಟಿಯನ್ನು ಪರಿಶೀಲನೆ ನೀಡಿದ್ದಾರೆ. ಈ ವೇಳೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮತ್ತೇ ಸಿದ್ದರಾಮಯ್ಯ ಒಬ್ಬರು ಸೇರಿ ಕೆಲಕಾಲ ಕ್ಷೇತ್ರದ ಕುರಿತು ಚರ್ಚೆ ನಡೆಸಿದ್ದಾರೆ. ಹೀಗಾಗಿ ರಾಹುಲ್‌ ಗಾಂಧಿ ಯವರು ಸಿದ್ದರಾಮಯ್ಯಗೆ ಕೋಲಾರದಿಂದ ಸ್ಪರ್ಧಿಸುವುದು ಬೇಡ ಮತ್ತೆ ವರುಣಾ ನಿಂದಲೇ ಸ್ಪರ್ಧೆ ಮಾಡಿ ಎಂದು ಹೇಳಿದ್ದರು. ಇದಕ್ಕೆ ಪ್ರತಿಪಕ್ಷದ ನಾಯಕರು ಸಿದ್ದರಾಮಯ್ಯ ವಿರುದ್ಧ ಬಾರಿ ಟಾಂಗ್‌ ಕೊಟ್ಟಿದ್ದರು.
ಒಟ್ಟಾರೆಯಾಗಿ ಸಿದ್ದರಾಮಯ್ಯ ಅವರು ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ ಎಂಬುದು ಎಲ್ಲರೀಗೂ ಕೂತುಹಲ ಮೂಡಿದೆ. ಈ ಬಗ್ಗೆ ಶೀಫ್ರದಲ್ಲೇ ಚರ್ಚೆ ಮಾಡಿ ಸಿದ್ದರಾಮಯ್ಯ ಬಹಿರಂಗವಾಗಿ ಕ್ಷೇತ್ರದ ಕುರಿತು ಘೋಷಣೆ ಮಾಡಲಿದ್ದಾರೆ.