Lipstick: ಬಟ್ಟೆ ಮೇಲೆ ಲಿಪ್ಸ್ಟಿಕ್ ಕಲೆ ಆಗಿದ್ದರೆ ಸಿಂಪಲ್ ಟ್ರಿಕ್ಸ್ ಬಳಸಿ,ಕಲೆ ಮಂಗ ಮಾಯ!!
Lipstick : ಸೌಂದರ್ಯದ (Beauty)ವಿಷಯದಲ್ಲಿ ಮಹಿಳೆಯರಿಗೆ ಹೆಚ್ಚಿನ ಒಲವಿರುವುದು ಸಹಜ. ಕಣ್ಣಿಗೆ ಕಾಡಿಗೆ ಮೊಗದ ಅಂದ ಹೆಚ್ಚಿಸುವಂತೆ ತುಟಿಗೆ ಹಚ್ಚುವ ಲಿಪ್ ಸ್ಟಿಕ್ (Lipstick) ಮಹಿಳೆಯರ (Women)ಕಣ್ಣನ್ನು ಕುಕ್ಕುವಂತೆ ಮಾಡುವುದು ನಿಜವೇ!!ಕೆಲವೊಮ್ಮೆ ಮುಖಕ್ಕೆ (Face)ಯಾವುದೇ ಸೌಂದರ್ಯ ವರ್ಧಕ ಬಳಕೆ ಮಾಡದೇ ಹೋದರು ಕೂಡ ಕೇವಲ ಲಿಪ್ಸ್ಟಿಕ್ ಹಚ್ಚಿದರೆ ಸಾಕು!! ನಾವು ಸುಂದರವಾಗಿ(Beautiful) ಕಾಣುತ್ತೇವೆ ಎಂಬ ಕಲ್ಪನೆ ಹೆಚ್ಚಿನ ಮಹಿಳಾಮಣಿಯರಿಗೆ ಇರುವುದಂತೂ ಸುಳ್ಳಲ್ಲ.
ಎಷ್ಟೋ ಬಾರಿ ಲಿಪ್ ಸ್ಟಿಕ್ ಬಟ್ಟೆಯ ಮೇಲೆ ಬಿದ್ದರೆ ಏನಪ್ಪಾ ಮಾಡೋದು ಎಂದು ಯೋಚಿಸುತ್ತಾ ಕೂರಬೇಕಾಗುತ್ತೆ. ನೀವು ಕೂಡ ಈ ಸಮಸ್ಯೆಯನ್ನು ಎದುರಿಸಿದ್ದೀರಾ? ಹಾಗಿದ್ರೆ, ನಿಮ್ಮ ಸಮಸ್ಯೆಗೆ ಸುಲಭವಾಗಿ ಪರಿಹಾರ ಕಂಡುಕೊಳ್ಳಬಹುದು ಅದು ಹೇಗೆ ಅಂತೀರಾ? ಹಾಗಿದ್ರೆ, ನೀವು ಕೆಲವು ಸಿಂಪಲ್ ಟಿಪ್ಸ್ ಫಾಲೋ ಮಾಡ್ಬೇಕು ಅಷ್ಟೇ!!
ಹೆಣ್ಣಿನ ಸೌಂದರ್ಯ ಹೆಚ್ಚಿಸುವ ಲಿಪ್ಸ್ಟಿಕ್ ಬಟ್ಟೆಗೆ ಬಿದ್ದರೆ ಅದರ ಕಲೆ ತೆಗೆಯುವುದೇ ದೊಡ್ಡ ಸಾಹಸ. ಅದಕ್ಕಾಗಿ ಏನೇನೋ ಪ್ಲಾನ್ ಮಾಡಿ ಕಲೆ ತೆಗೆಯಲು ಆಗದೇ ಒದ್ದಾಡುತ್ತಿದ್ದರೆ ಕೆಲವು ಸರಳ ವಿಧಾನ ( Simple Tips)ಅನುಸರಿಸಿ ಪರಿಹಾರ ಕಂಡುಕೊಳ್ಳಬಹುದು.
ಟೂತ್ ಪೇಸ್ಟ್ ನಿಂದ ಬಟ್ಟೆಯ ಮೇಲೆ( Dress)ಲಿಪ್ಸ್ಟಿಕ್ ಕಲೆ ಆಗಿದ್ದರೆ ತೆಗೆದು ಹಾಕಬಹುದು.ಅದಕ್ಕಾಗಿ ಲಿಪ್ ಸ್ಟಿಕ್ ಕಲೆಯಾಗಿರುವ ಜಾಗಕ್ಕೆ ಟೂತ್ ಪೇಸ್ಟ್( Tooth Paste)ಹಚ್ಚಿ ಸ್ವಲ್ಪ ಸಮಯ ಬಿಟ್ಟು ತೊಳೆದರೆ ಸಾಕು. ನಿಮ್ಮ ಸಮಸ್ಯೆಗೆ ಪರಿಹಾರ ಪಕ್ಕಾ!! ಬಟ್ಟೆ ಮೇಲೆ ಪದಾರ್ಥ ಬಿದ್ದ ಕೂಡಲೇ ತೊಳೆದು ಬಿಡಬೇಕು. ಬಟ್ಟೆಯನ್ನು ಮಡಚಿದಲ್ಲಿ ಕಲೆ ಬೇರೆ ಕಡೆಗೂ ಆಗುವ ಸಾಧ್ಯತೆ ಹೆಚ್ಚು. ಅಷ್ಟೇ ಅಲ್ಲದೆ,ಕಲೆಯಾಗಿ ತುಂಬಾ ದಿನ ಕಳೆದರೂ ಕೂಡ ಕಲೆ ತೆಗೆಯುವುದು ಕೊಂಚ ಕಷ್ಟವೇ ಸರಿ. ಇದಕ್ಕಾಗಿ ನೀವು, ಬಟ್ಟೆ ಮೇಲೆ ಬಿದ್ದ ಲಿಪ್ಸ್ಟಿಕ್ ಕಲೆಯನ್ನು ಶೇವಿಂಗ್ ಕ್ರೀಮ್ ನಿಂದ ತೆಗೆದುಹಾಕಬಹುದು.
ಲಿಪ್ಸ್ಟಿಕ್ ಕಲೆ ತಗೆಯಲು ಹೇರ್ ಸ್ಪ್ರೇ ಕೂಡ ಬಳಕೆ ಮಾಡಬಹುದು. ಇದಕ್ಕಾಗಿ ನೀವು ಕಲೆಯಾದ ಜಾಗಕ್ಕೆ ಸ್ಪ್ರೇ ಹಾಕಿ 15 ನಿಮಿಷ ಬಿಟ್ಟು ತೊಳೆಯಬೇಕು. ಹೀಗೆ ಮಾಡಿದರೆ ಕಲೆ ಮಾಯವಾಗಿ ಬಿಡುತ್ತದೆ. ಬಟ್ಟೆಗೆ ಲಿಪ್ ಸ್ಟಿಕ್ ಕಲೆ ಆದಾಗ, ಕಲೆಯಾದ ಜಾಗಕ್ಕೆ ಶೇವಿಂಗ್ ಕ್ರೀಮ್ ನಿಂದ ಸ್ಕ್ರಬ್( Shaving Cream Scrub) ಮಾಡಬೇಕು. ಆ ಬಳಿಕ ಸ್ವಲ್ಪ ಸಮಯ ಹಾಗೆ ಬಿಡಬೇಕು. ಹೀಗೆ ಮಾಡಿದ ನಂತರ ಕಲೆಯಾದ ಬಟ್ಟೆಯನ್ನು ತೊಳೆದರೆ ಕಲೆ ಹೋಗುತ್ತದೆ.