ನೃತ್ಯ ಮಾಡ್ತಿದ್ದಂತೆ ಕುಸಿದು ಬಿದ್ದು ಹೃದಯಾಘಾತದಿಂದ ಪ್ರಾಣಬಿಟ್ಟ ಸರ್ಕಾರಿ ನೌಕರ : ವಿಡಿಯೋ ವೈರಲ್

Share the Article

Bhopal :ಕರೋನಾ ನಂತರ ದೇಶದಲ್ಲಿ ಹೃದಯಾಘಾತದ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳ ಕಂಡುಬಂದಿದೆ. ದೇಶಾದ್ಯಂತ ಹೃದಯಾಘಾತದ ಪ್ರಕರಣಗಳು ವರದಿಯಾಗುತ್ತಿವೆ. ಅದರಲ್ಲೂ ಮಧ್ಯಪ್ರದೇಶದ ಭೋಪಾಲ್ನಲ್ಲಿಯೂ (Bhopal) ಇದೇ ರೀತಿಯ ಪ್ರಕರಣ ಬೆಳಕಿಗೆ ಬಂದಿದೆ.

ನೃತ್ಯ ಮಾಡುವಾಗ ಅಂಚೆ ಇಲಾಖೆಯ ಸಹಾಯಕ ನಿರ್ದೇಶಕರು ಹೃದಯಾಘಾತಕ್ಕೊಳಗಾಗಿ ನಿಧನರಾದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಮಾರ್ಚ್ 16ರಂದು ಚಿತ್ರೀಕರಿಸಲಾಗಿದೆ. ಭೋಪಾಲ್ ನ ಮೇಜರ್ ಧ್ಯಾನ್ ಚಂದ್ ಹಾಕಿ ಕ್ರೀಡಾಂಗಣದಲ್ಲಿ ಮಾರ್ಚ್ 13 ರಿಂದ 17 ರವರೆಗೆ ಅಖಿಲ ಭಾರತ ಪೋಸ್ಟಲ್ ಹಾಕಿ ಟೂರ್ನಮೆಂಟ್ ಅನ್ನು ಅಂಚೆ ಇಲಾಖೆ ಆಯೋಜಿಸಿತ್ತು. ಅಂತಿಮ ಪಂದ್ಯ ಮಾರ್ಚ್ 17ರಂದು ನಿಗದಿಯಾಗಿತ್ತು.ಹಿಂದಿನ ದಿನ, ಮಾರ್ಚ್ 16 ರ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಭೋಪಾಲ್ ಅಂಚೆ ವೃತ್ತ ಕಚೇರಿಯ ಸಹಾಯಕ ನಿರ್ದೇಶಕ ಸುರೇಂದ್ರ ಕುಮಾರ್ ದೀಕ್ಷಿತ್ ಅವರು ಕಾರ್ಯಕ್ರಮದಲ್ಲಿ ತಮ್ಮ ಸಹೋದ್ಯೋಗಿಗಳೊಂದಿಗೆ ನೃತ್ಯ ಮಾಡುತ್ತಿದ್ದರು. ನೃತ್ಯ ಮಾಡುವಾಗ ಅವರು ಹಠಾತ್‌ ಹೃದಯಾಘತಕ್ಕೆ ಒಳಗಾಗಿ ಕುಸಿದು ಬಿದ್ದರು. ಕೂಡಲೇ ಸುತ್ತಲಿನ ಜನರು ಸರ್ಕಾರಿ ನೌಕರರ ಸಹಾಯ ಬಂದರು. ಅಷ್ಟರಲ್ಲೇ ಅವರು ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆಂದು ವೈದ್ಯರು ಪರೀಕ್ಷೆಗೆ ಒಳಪಡಿಸಿದ ಬಳಿಕ ವರದಿ ಮಾಡಿದ್ದಾರೆ.

ಇಲ್ಲಿದೆ ವಿಡಿಯೋ

Leave A Reply