Home Entertainment Arjun Kapoor ಜೊತೆಗಿನ ಹನಿಮೂನ್‌ ಪ್ರಸಂಗ ಬಿಚ್ಚಿಟ್ಟ ನಟಿ ಮಲೈಕಾ ಅರೋರಾ!

Arjun Kapoor ಜೊತೆಗಿನ ಹನಿಮೂನ್‌ ಪ್ರಸಂಗ ಬಿಚ್ಚಿಟ್ಟ ನಟಿ ಮಲೈಕಾ ಅರೋರಾ!

Actress Malaika Arora

Hindu neighbor gifts plot of land

Hindu neighbour gifts land to Muslim journalist

Actress Malaika Arora : ಅರ್ಜುನ್ ಕಪೂರ್ (Arjun Kapoor) ಜೊತೆ ಡೇಟಿಂಗ್ (dating) ನಲ್ಲಿ ಇರುವ ಮಲೈಕಾ  ಅರೋರಾ ಪ್ರೀ ಹನಿಮೂನ್ (honeymoon) ಅನುಭವವನ್ನು ಹಂಚಿಕೊಂಡಿದ್ದಾರೆ. ನಟಿ ಮಲೈಕಾ ಅರೋರಾ (Actress Malaika Arora) ಹಾಗೂ ಅರ್ಜುನ್ ಕಪೂರ್ (Arjun Kapoor) ಅವರು ಹಲವಾರು ವರ್ಷಗಳಿಂದ ಡೇಟಿಂಗ್ (dating) ನಲ್ಲಿ ಇರುವ ವಿಚಾರ ಎಲ್ಲರಿಗೂ ತಿಳಿದಿದೆ. ಇದೀಗ ಮಲೈಕಾ ಅವರು ತಮ್ಮ ಪ್ರೀ ಹನಿಮೂನ್ (pre honeymoon) ಅನುಭವವನ್ನು ಹಂಚಿಕೊಂಡಿದ್ದಾರೆ.

ಮಲೈಕಾ ಅವರು ಅಬ್ರಾಜ್ ಖಾನ್ (Arbaaz khan) ಜೊತೆ ಮದುವೆ ಆಗಿ 19 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿ ನಂತರ ಡಿವೋರ್ಸ್ (divorce) ಪಡೆದ್ದು, ಬಳಿಕ ತಮಗಿಂತ 12 ವರ್ಷ ಚಿಕ್ಕ ವಯಸ್ಸಿನ ಅರ್ಜುನ್ ಕಪೂರ್ ಅವರ ಜೊತೆ ಪ್ರೀತಿಯಲ್ಲಿ ಬಿದ್ದು, ಡೇಟಿಂಗ್ (dating) ನಲ್ಲಿರುವ ವಿಚಾರ ಎಲ್ಲರಿಗೂ ತಿಳಿದೇ ಇದೆ.

ಮಲೈಕಾ (Maliaka) ಅವರು ಅರ್ಜುನ್ ಕಪೂರ್ (Arjun Kapoor) ಹಾಗೂ ಅವರ ಡೇಟಿಂಗ್ (dating) ಬಗ್ಗೆ ಮಾತಾಡಿದ್ದ ಇವರು, ನಾವಿನ್ನೂ ಮದುವೆ ಯ ಬಗ್ಗೆ ಯೋಚನೆ ಮಾಡಿಲ್ಲ, ಡೇಟಿಂಗ್ (dating) ನಲ್ಲಿಯೇ ಪ್ರೀ ಹನಿಮೂನ್ (honeymoon) ಅನ್ನು ಅನುಭವಿಸಿದ್ದೇವೆ, ಈ ಡೇಟಿಂಗ್ (dating) ನಲ್ಲಿ ನಾವು ಖುಷಿ ಆಗಿ ಇದ್ದೀವಿ. ನಮಗೆ ಮದುವೆ (marriage) ಆಗುವ ಅವಶ್ಯಕತೆ ಇಲ್ಲ, ಮದುವೆಯ ವಿಚಾರದ ನಮ್ಮಿಬ್ಬರ ನಡುವೆ ಚರ್ಚೆಯಾಗುವ ವಿಷಯ ಇದಾಗಿದೆ. ಈ ವಿಷಯದ ಬಗ್ಗೆ ಯೋಚನೆ ಮಾಡಿದರೆ ತಿಳಿಸುತ್ತೇವೆ. ಆದರೆ ಸದ್ಯಕ್ಕೆ ಯಾವುದೇ ಯೋಚನೆ ಇಲ್ಲ, ನಾವು ಈಗಾಗಲೇ ಹಾಯಾಗಿ ಇದ್ದೇವೆ ಎಂದು ತಿಳಿಸಿದರು.

ಎಲ್ಲರೂ ನಿಮಗಿಂತ ತುಂಬಾ ಚಿಕ್ಕ ವಯಸ್ಸಿನ ಅರ್ಜುನ್ ಕಪೂರ್ ಅವರ ಜೊತೆ ಡೇಟಿಂಗ್ (dating) ಮಾಡುತ್ತೀರಾ? ಎಂದೂ ಕೇಳುತ್ತಾರೆ, ನಮ್ಮಗಿಂತ ಚಿಕ್ಕ ಅಥವಾ ದೊಡ್ಡ ವಯಸ್ಸಿನ ಹುಡುಗನ ಜೊತೆ ಡೇಟಿಂಗ್ (dating) ಮಾಡಿದರೆ ತಪ್ಪೇನಿದೆ ಎಂದು ಪ್ರಶ್ನೆ ಮಾಡಿದ ಮಲೈಕಾ, ಡೇಟಿಂಗ್ (dating) ಒಂದು ಅಧ್ಬುತ ಅನುಭವ, ಅದರಲ್ಲಿಯೂ ಡಿವೋರ್ಸ್ (divorce) ಅದ ನಂತರ ಮತ್ತೆ ಬೇರೆ ಅವರ ಪ್ರೀತಿ ಸಿಗುವುದೇ ಬೇರೆ ವಿಚಾರ. ಪ್ರೀತಿಗೆ ವಯಸ್ಸಿನ ಮಿತಿ ಇಲ್ಲ, ಕಿರಿಯ ವಯಸ್ಸಿನ ಹುಡುಗನಲ್ಲಿ ನನ್ನ ಪ್ರೀತಿಯನ್ನು ಕಂಡಿದ್ದೇನೆ ಹಾಗೂ ಹಳೆಯ ಜೀವನವನ್ನು ಮರೆತಿದ್ದೇನೆ. ಪ್ರೀತಿಗೆ ಯಾವುದೇ ವಯಸ್ಸಿಲ್ಲ. ಯಾರಿಗೆ ಯಾರ ಮೇಲೆ ಬೇಕಾದರೂ ಪ್ರೀತಿ ಆಗಬಹುದು ಎಂದರು.