Mandya : ಭದ್ರ ಕೋಟೆ ಮಂಡ್ಯದಲ್ಲೇ ದಳಪತಿಗಳಿಗೆ ಬಿಗ್ ಶಾಕ್: ಎಚ್ಡಿಕೆ ಭೇಟಿ ಬೆನ್ನಲ್ಲೇ 200ಕ್ಕೂ ಹೆಚ್ಚು JDS ಮುಖಂಡರು ಕಾಂಗ್ರೆಸ್ ಸೇರ್ಪಡೆ!

Mandya Election : ಚುನಾವಣೆ ಹತ್ತಿರವಾಗುತ್ತಿದ್ದಂತೆ ಬೇರೆ ಬೇರೆ ಪಕ್ಷಗಳ ಕಾರ್ಯಕರ್ತರು, ಪ್ರಭಾವಿ ನಾಯಕರು ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಹಾರುವುದರ ಮೂಲಕ ಪಕ್ಷಾಂತರ ಪರ್ವ ನಡೆಸುತ್ತಿದ್ದಾರೆ. ಇಂದು ಕೂಡ ಜೆಡಿಎಸ್(JDS) ಭದ್ರಕೋಟೆ ಎಂದೆ ಕರೆಯಲಾಗುತ್ತಿರುವ ಮಂಡ್ಯದಲ್ಲಿ ದಳಪತಿಗಳಿಗೆ ಕಾರ್ಯಕರ್ತರು ಬಿಗ್ ಶಾಕ್ ನೀಡಿದ್ದಾರೆ.

ಹೌದು, ಇಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ(H D Kumaraswamy) ಮಂಡ್ಯಕ್ಕೆ(Mandya Election) ಭೇಟಿ ನೀಡಿದ ಬೆನ್ನಲ್ಲೇ 200ಕ್ಕೂ ಹೆಚ್ಚು ಜೆಡಿಎಸ್ ಮುಖಂಡರು ( JDS Leader ) ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷವನ್ನು ( Congress Party ) ಸೇರ್ಪಡೆಗೊಂಡಿದ್ದಾರೆ. ಶ್ರೀರಂಗಪಟ್ಟಣದ ಖಾಸಗಿ ಸಭಾಭವನದಲ್ಲಿ ಮಾಜಿ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ನೇತೃತ್ವದಲ್ಲಿ 200ಕ್ಕೂ ಹೆಚ್ಚು ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ.

ಇಂದು ಮಂಡ್ಯಕ್ಕೆ ಭೇಟಿ ನೀಡಿದ ಮಾಜಿ ಸಿಎಂ ಕುಮಾರಸ್ವಾಮಿ ಅವರು ‘ನನಗೆ 5 ವರ್ಷ ಸ್ವತಂತ್ರವಾಗಿ ಸರ್ಕಾರ ನಡೆಸಲು ಸಹಕಾರ ಕೊಡಿ. ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವೆ ಎಂಬುದಾಗಿ ( Farmer CM HD Kumaraswamy ) ಜನತೆಯಲ್ಲಿ ಮನವಿ ಮಾಡಿದ್ದಾರೆ.

ಮಂಡ್ಯ ಜಿಲ್ಲೆಯ ಟಿ ನರಸೀಪುರ(T Narasipura) ತಾಲೂಕಿನ ತಲಕಾಡಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಜೆಡಿಎಸ್ ಪಕ್ಷದಿಂದ ನಡೆಸುತ್ತಿರುವಂತ ಪಂಚರತ್ನ ಕಾರ್ಯಕ್ರಮವೇ ಜನಪರ ಕಾರ್ಯಕ್ರಮವಾಗಿದೆ. ಶಾಸಕ ಅಶ್ವಿನ್ ಕುಮಾರ್ ನಿಮ್ಮ ಕಷ್ಟ ಸುಖದಲ್ಲಿ ಭಾಗಿಯಾಗುತ್ತಿದ್ದಾರೆ. 5 ವರ್ಷ ಸ್ವತಂತ್ರ ಸರ್ಕಾರ ನಡೆಸಲು ನನಗೆ ಸಹಕಾರ ಕೊಟ್ಟರೆ ಪಂಚರತ್ನ ಯೋಜನೆಯನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸುತ್ತೇನೆ. ಜನಪರ ಆಡಳಿತ ನಡೆಸಿ, ತೋರಿಸುವುದಾಗಿ ಮನವಿ ಮಾಡಿದರು.

Leave A Reply

Your email address will not be published.