Mobile Hack : ನಿಮ್ಮ ಮೊಬೈಲ್ ನಲ್ಲಿ ಈ ಆ್ಯಪ್ ಗಳಿದ್ದರೆ ತಕ್ಷಣವೇ ಡಿಲೀಟ್ ಮಾಡಿ, ಇಲ್ಲವಾದರೆ ಮೊಬೈಲ್ ಹ್ಯಾಕ್ ಆಗೋದು ಗ್ಯಾರಂಟಿ!!

Mobile Hack: ಮೊಬೈಲ್ ಹ್ಯಾಕ್ (Mobile Hack) ಮಾಡಿ, ಹಣ ದೋಚೋದಿಕ್ಕೆ ಅಂತಾನೇ ವಂಚಕರ ಗುಂಪು ಇದೆ. ಇತ್ತೀಚೆಗಂತು ಸೈಬರ್​ ಕ್ರೈಮ್ (Cyber Crime)​​ ಅಪರಾಧಗಳು ಹೆಚ್ಚುತ್ತಲೇ ಇದೆ. ಮೊಬೈಲ್​ನಲ್ಲಿ ಬರುವಂತಹ ಅಪ್ಲಿಕೇಶನ್​ಗಳ ಮೂಲಕ ಬಳಕೆದಾರರ ಡೇಟಾವನ್ನು ಹ್ಯಾಕ್ (Data Hack)​ ಮಾಡುತ್ತಿದ್ದಾರೆ. ಇನ್ ಸ್ಟಾಗ್ರಾಮ್ (instagram), ಫೇಕ್ ಮೆಸೇಜ್ ಗಳ ಮೂಲಕ ಹಣ ಕಬಳಿಸುತ್ತಾರೆ. ನೀವು ಈ ಬಗ್ಗೆ ಎಚ್ಚರದಿಂದಿರಬೇಕು. ನೀವು ಕೆಲವೊಂದು ಅಪ್ಲಿಕೇಶನ್​ಗಳನ್ನು ಡೌನ್​ಲೋಡ್​ ಮಾಡಿದ್ರೆ ನಿಮ್ಮ ಡೇಟಾ ವಂಚಕರ ಕೈಸೇರಬಹುದು. ಯಾವುದು ಆ ಆ್ಯಪ್ ಗಳು? ಮಾಹಿತಿ ತಿಳಿಯೋಣ.

​ಇದೀಗ ಹುಕ್ (huk) ಹೆಸರಿನ ಹೊಸ ಮಾಲ್ವೇರ್ ಬಂದಿದ್ದು, ಆಂಡ್ರಾಯ್ಡ್​ ಬ್ಯಾಂಕಿಂಗ್ ವೈರಸ್ ಬ್ಲ್ಯಾಕ್‌ರಾಕ್ ಮತ್ತು ಇಆರ್‌ಮ್ಯಾಕ್ ಅನ್ನು ರಚಿಸಿದ ಜನರು ಇದನ್ನು ರಚಿಸಿದ್ದಾರೆ. ಈ ಮಾಲ್‌ವೇರ್ ನಲ್ಲಿ ಸುಮಾರು 34 ಆ್ಯಪ್‌ಗಳಲ್ಲಿ ಆ್ಯಡ್​ ಮಾಡಲಾಗಿದೆ ಎಂದು ಭದ್ರತಾ ಸಂಶೋಧಕರು ಹೇಳಿದ್ದಾರೆ. ನಿಮ್ಮ ಫೋನ್‌ನಲ್ಲಿ ಈ 34 ಆ್ಯಪ್‌ಗಳಲ್ಲಿ (app) ಯಾವುದಾದರೂ ಒಂದು ಅಪ್ಲಿಕೇಶನ್ ಇದ್ದರೂ ತಕ್ಷಣವೇ ಅದನ್ನು ಡಿಲೀಟ್ ಮಾಡಿ. ಇಲ್ಲದಿದ್ದರೆ ಹ್ಯಾಕ್ ಆಗೋದು ಗ್ಯಾರಂಟಿ!!. ಬ್ಲ್ಯಾಕ್‌ರಾಕ್ ಬ್ಯಾಂಕಿಂಗ್ ವಿವರಗಳನ್ನು ಕದಿಯುತ್ತದೆ. ERMAC ಕ್ರಿಪ್ಟೋ ವ್ಯಾಲೆಟ್‌ಗಳನ್ನು ಗುರಿಯಾಗಿಸುತ್ತದೆ.

ಡೇಂಜರಸ್ 34 ಆ್ಯಪ್‌ಗಳು ಯಾವುದು?

ಕೂಲ್ ಸ್ಕ್ರೀನ್ ಮಿರರಿಂಗ್, ಫೋನ್ ಕ್ಲೀನರ್ ಲೈಟ್ (phone cleaner light) , ಡಿಜಿಟಲ್ ಕ್ಲಾಕ್, ಡಿಸ್‌ಪ್ಲೇ, ಲೈವ್ ವಾಲ್‌ಪೇಪರ್ HD 3D 4D, ಗ್ರೇಪ್ ಕ್ಯಾಮೆರಾ ಮತ್ತು ಫೋಟೋ ಎಡಿಟರ್ (photo editor), ಬ್ಲಡ್ ಗ್ಲೂಕೋಸ್ ರೆಕಾರ್ಡರ್, ಕ್ಲೀನ್ ಕ್ಲೀನ್ ಬ್ಯಾಟರಿ ಸರ್ವಿಸರ್, ಆಲ್ಬಮ್ ಲೈವ್ ವಾಲ್‌ಪೇಪರ್ ಮತ್ತು ಥೀಮ್, ಶಾರ್ಟ್‌ಕಟ್ ಸ್ಕ್ರೀನ್ ಮಿರರ್, ಎಚ್‌ಡಿ ಸ್ಕ್ರೀನ್ ಮಿರರ್, ಫೋನ್ ಟು ಟಿವಿ, ಫೋಟೋ ವಾಯ್ಸ್ ಅನುವಾದಕ (photo, voice translator), ಎಫೆಕ್ಟ್ ವಾಯ್ಸ್ ಚೇಂಜ್, ಕ್ವಿಕ್ ಪಿಡಿಎಫ್ ಸ್ಕ್ಯಾನರ್, ಫಾಸ್ಟ್ ಲ್ಯಾಂಗ್ವೇಜ್ ಟ್ರಾನ್ಸ್‌ಲೇಟರ್, ಪರ್ಫೆಕ್ಟ್ ಫೇಸ್ ಸ್ವಾಪ್, ಎಫೆಕ್ಟ್ ಫೋಟೋ ಡಿಥರ್ ಆ್ಯಪ್‌ಗಳು.

ಖಚಿತವಾದ ಎಮೋಜಿ ಎಡಿಟರ್ (emoji editor) ಮತ್ತು ಸ್ಟಿಕ್ಕರ್, ಬ್ಲೂ ವಾಯ್ಸ್ ಚೇಂಜರ್‌, ಫನ್ನಿ ಎಮೋಜಿ ಕೀಬೋರ್ಡ್ (funny emoji keyboard), ಅನಿಮಲ್ ಡೂಡಲ್ ಡ್ರಾಯಿಂಗ್, ಪೇಪರ್ ಪೇಂಟ್, ಡೆಕ್ಸ್ಟೆರಿಟಿ ಕ್ಯೂಆರ್ ಸ್ಕ್ಯಾನಿಂಗ್, ಹಾರ್ಟ್ ರೇಟ್ ಮಾನಿಟರ್, ಫನ್ ಪೇಂಟ್ ಮತ್ತು ಕಲರಿಂಗ್, ಬ್ಯೂಟಿ ಕ್ರಿಸ್‌ಮಸ್ ಸಾಂಗ್ಸ್, ಎಪಿಕ್ ಗೇಮ್‌ಬಾಕ್ಸ್ ಮತ್ತು ಹಬ್, ಮ್ಯಾಜಿಕ್ ಫೇಸ್ ಎಐ (magic face ai), ಲವ್ ಸ್ಟಿಕ್ಕರ್ (love sticker) ಈ ಎಲ್ಲ ಅಪ್ಲಿಕೇಶನ್​ಗಳು ಸಹ ಮಾಲ್​​ವೇರ್​ ಅನ್ನು ಹೊಂದಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಹಾಗಾಗಿ ಇದನ್ನು ಡಿಲೀಟ್ ಮಾಡುವುದು ಉತ್ತಮ.

ಇದನ್ನೂ ಓದಿ : Kantara: ‘ಕಾಂತಾರ’ – ಗುಡ್​ ನ್ಯೂಸ್​ ನೀಡಿದ ‘ಹೊಂಬಾಳೆ’!

Leave A Reply

Your email address will not be published.