Guliga Daiva :ಮಂಗಳೂರು: ಗುಳಿಗ ದೈವದ ಬಗ್ಗೆ ಆರಗ ಜ್ಞಾನೇಂದ್ರ ಅವಹೇಳನಕಾರಿ ಹೇಳಿಕೆ: ದೈವ ನರ್ತಕರು ಹೇಳಿದ್ದೇನು?

Guliga Daiva: ಇತ್ತೀಚೆಗಷ್ಟೇ ಕರಾವಳಿಯ ಆರಾಧ್ಯ ಗುಳಿಗ ದೈವದ (Guliga Daiva)ಕುರಿತು ಗೃಹಸಚಿವ ಆರಗ ಜ್ಞಾನೇಂದ್ರ (Araga Jnanendra)ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದ ಬೆನ್ನಲ್ಲೇ ಇದೀಗ ದೈವ ನರ್ತಕರು ಸಚಿವರ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

ಮಾರ್ಚ್​ 14 ರಂದು ತೀರ್ಥಹಳ್ಳಿಯಲ್ಲಿ ಮಾಜಿ ಶಾಸಕ ಕಿಮ್ಮನೆ ರತ್ನಾಕರ್ (Kimmane Rathnakar) ನೇತ್ರತ್ವದಲ್ಲಿ ಪ್ರಸಿದ್ದ ಶಿವದೂತೆ ಗುಳಿಗೆ ನಾಟಕದ ಕುರಿತಂತೆ ಮರುದಿನ ನಡೆದ ಬಿಜೆಪಿ ರೈತ ಸಮಾವೇಶದಲ್ಲಿ ಅರಗ ಜ್ಞಾನೇಂದ್ರ ಕಾಂಗ್ರೆಸ್( Congress) ಅನ್ನು ಹೀಯಾಳಿಸುವ ಭರದಲ್ಲಿ ನಿನ್ನೆಯಿಂದ ಎಂತದೋ ಗುಳಿಗೆ – ಗುಳಿಗೆ ಅಂತ ಹಾಕಿದ್ದು, ಬಹಳ ಅಪಾಯವಿದು ಎಂದು ಹೇಳಿದ್ದಾರೆ. ಯಾವ ಗುಳಿಗೆ ಇವರಿಗೆ ಕೊಡುತ್ತಾರೆ ಅಂತ ಗೊತ್ತಿಲ್ಲ. ಜಾಪಾಳ್ ಗುಳಿಗೆ ಕೊಟ್ಟರು ಕೊಡಬಹುದು ಎಂದು ಹೇಳುವ ಮೂಲಕ, ದೈವಕ್ಕೆ ಅವಹೇಳನ ಮಾಡಿದ್ದಾರೆ ಎಂದು ಆರೋಪ (Complaint) ವ್ಯಕ್ತವಾಗಿದೆ. ಈ ನಡುವೆ ಕರಾವಳಿಯ ಆರಾಧ್ಯ ಗುಳಿಗ ದೈವದ ಬಗ್ಗೆ ಗೃಹಸಚಿವ ಆರಗ ಜ್ಞಾನೇಂದ್ರ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪ ಕೇಳಿಬಂದಿದ್ದು, ದೈವ ನರ್ತಕರು ಕಿಡಿ ಕಾರಿದ್ದಾರೆ.

ಗೃಹಸಚಿವರು ಕರಾವಳಿಯ ದೈವ ಸನ್ನಿಧಿಗೆ ಬಂದು ಕ್ಷಮೆ ಕೇಳಬೇಕಾಗಿದ್ದು, ಗೃಹ ಸಚಿವರು ಫ್ಲೆಕ್ಸ್ ನೋಡಿ‌ ಗುಳಿಗೆ-ಗುಳಿಗೆ ಎಂದು ಹೇಳಿಕೊಂಡಿದ್ದು, ನಮ್ಮ ದೈವವನ್ನು ಒಂದು ಮಾತ್ರೆಗೆ ಹೋಲಿಕೆ ಮಾಡಿದ್ದಾರೆ. ಹೀಗಾಗಿ, ನಮ್ಮ ದೈವವೇ ಅವರಿಗೆ ಉತ್ತರ ನೀಡುತ್ತದೆ. ಎಲ್ಲಾ ಗುಳಿಗ ಶಕ್ತಿಗಳು ಒಟ್ಟು ಸೇರಿ ಅವರಿಗೆ ತಕ್ಕ ಶಾಸ್ತಿ ಮಾಡಬೇಕು. ಇದರ ನಡುವೆ ಬೆಳ್ತಂಗಡಿ(Belthangady) ತಾಲೂಕು ನಲಿಕೆಯವರ ಸಮಾಜ ಸೇವಾ ಸಂಘದ ಅಧ್ಯಕ್ಷ ಎಸ್.ಪ್ರಭಾಕರ ಶಾಂತಿಕೋಡಿ ದೈವ-ದೇವರ ಸನ್ನಿಧಿಯಲ್ಲಿ ಬಂದು ಗೃಹಸಚಿವರು ಕ್ಷಮೆ ಕೇಳಬೇಕೆಂದು ಒತ್ತಾಯ ಹೇರಿದ್ದಾರೆ.

ಇದೀಗ, ಸಚಿವರಿಗೆ ದೈವ ನರ್ತಕರು ಒಂದು ವಾರದ ಗಡುವು ನೀಡಿದ್ದು, ಒಂದು ವಾರದೊಳಗೆ ಇದ್ದರೆ ಮಂಗಳೂರು ಭೇಟಿ ಕಾರ್ಯಕ್ರಮದಲ್ಲಿ ಅವರನ್ನು ಹೊರಹಾಕಲಾಗುತ್ತದೆ. ಇನ್ಮುಂದೆ, ದೈವಾರಾಧನೆಯನ್ನು ನಾಟಕ, ಯಕ್ಷಗಾನದಲ್ಲಿ ಬಳಕೆ ಮಾಡದಂತೆ ಸೂಚಿಸಿದ್ದಾರೆ. ದೈವರಾಧನೆಗೆ ಈ ರೀತಿ ನಡೆಯುವ ಅಪ್ರಪ್ರಚಾರ ಮಾಡುವುದನ್ನು ತಡೆಯುವ ನಿಟ್ಟಿನಲ್ಲಿ ದೈವರಾಧಕರ ಸಮಾವೇಶ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ. ಆರಗ ಜ್ಞಾನೇಂದ್ರ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕಿಡಿ ಕಾರಿದ್ದಾರೆ.

Leave A Reply

Your email address will not be published.